
ಭಟ್ಕಳ : ಕಾಲ್ನಡಿಗೆಯ ಮೂಲಕ ಕೇರಳದಿಂದ ಮಕ್ಕಾ ಹಜ್ ಯಾತ್ರೆ ಗೆ ಪ್ರಯಾಣ ಬೆಳೆಸಿರುವ ಮಲಪುರಂನ ೩೦ ವರ್ಷದ ಶಿಹಾಬ್ ಚೋಟ್ಟೂರ್ ಅವರು ಜೂನ್ ೧೪ ಮಂಗಳವಾರ ಬೆಳಗ್ಗೆ ಎಂಟು ಗಂಟೆ ಸುಮಾರಿಗೆ ಉತ್ತರಕನ್ನಡ ಜಿಲ್ಲೆಯ ಗಡಿ ಪ್ರವೇಶಿಸಿದರು.

ಈ ಸಂದರ್ಭದಲ್ಲಿ ಶಿಹಾಬ್‌ಗೆ ಭಟ್ಕಳ ತಾಲ್ಲೂಕಿನಲ್ಲಿ ಅದ್ದೂರಿ ಸ್ವಾಗತ ಮಾಡಿಕೊಂಡು ಅವರೊಡನೆ ಹೆಜ್ಜೆ ಹಾಕಿದ್ದಾರೆ. ಈ ವೇಳೆ ಶಿಹಾಬ್ ಭಟ್ಕಳ ನೂರ್ ಮಸೀದಿ ತಲುಪಿದರು.
ಯುವಕ ಶಿಹಾಬ್ನನ್ನು ಭೇಟಿ ಮಾಡಲು ನೂರಾರು ಜನರು ನೂರ್ ಮಸೀದಿಯಲ್ಲಿ ಜಮಾಯಿಸಿದರು. ಭಟ್ಕಳ ತಂಜಿA ಕಾರ್ಯದರ್ಶಿ ಜಿಲಾನಿ ಶಾಬಂದ್ರಿ, ಭಟ್ಕಳ ಮುಸ್ಲಿಂ ಯೂತ್ ಫೆಡರೇಶನ್ ಅಧ್ಯಕ್ಷ ಅಜೀಝುರ್ ರೆಹಮಾನ್ ರುಕ್ನುದ್ದೀನ್ ನದ್ವಿ, ನೂರ್ ಮಸೀದಿಯ ಖತೀಬ್ ಮತ್ತು ಇಮಾಮ್ ಮೌಲಾನಾ ಅಮೀನ್ ರುಕ್ನುದ್ದೀನ್ ನದ್ವಿ , ನೂರ್ ಮಸೀದಿ ಅಧ್ಯಕ್ಷ ಆಸಿಫ್ ದಾಮುದಿ, ಪ್ರಧಾನ ಕಾರ್ಯದರ್ಶಿ ಅಬ್ದುಲ್ ಸಮೀ ಸಿದ್ದಿಕ್ ಸೇರಿದಂತೆ ಹಲವು ಮುಖಂಡರು ಉಪಸ್ಥಿತರಿದ್ದರು.
ಜೂನ್ ೨ ರಂದು ಕೇರಳದ ಮಲಪ್ಪುರಂ ಜಿಲ್ಲೆಯ ಆಟವನಾಡುದಿಂದ ಕಾಲ್ನಡಿಗೆ ಆರಂಭಿಸಿದ ಶಿಹಾಬ್ ಜೂನ್ ೯ ರಂದು ಕಾಲ್ನಡಿಗೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ತಲಪಾಡಿ ಗಡಿ ಪ್ರವೇಶಿಸಿದರು. ಅಲ್ಲಿ ಅವರನ್ನು ಮುಸ್ಲಿಂ ಸಮುದಾಯದ ಜನರು ಅದ್ಧೂರಿಯಾಗಿ ಬರಮಾಡಿಕೊಂಡಿದ್ದರು. ಮಂಗಳೂರು ಪಂಪ್ ವೆಲ್ ಮಸೀದಿಯಲ್ಲಿ ರಾತ್ರಿ ಕಳೆದು ಶುಕ್ರವಾರ ಮತ್ತೆ ಹೊರಟೆವು. ಜೂನ್ ೧೧ ಶನಿವಾರದಂದು ಅವರು ಉಡುಪಿ ಜಿಲ್ಲೆಯನ್ನು ಪ್ರವೇಶಿಸಿದರು. ಉಡುಪಿಯಲ್ಲಿ ಅವರಿಗೆ ಮುಸ್ಲಿಂ ಬಾಂಧವರು ಅದ್ಧೂರಿ ಸ್ವಾಗತ ನೀಡಿದರು. ಸೋಮವಾರ ರಾತ್ರಿ ಉಡುಪಿಯ ಗಡಿ ಭಾಗದಲ್ಲಿರುವ ಶಿರೂರು ಮಸೀದಿಯಲ್ಲಿ ತಂಗಿದ್ದರು. ಅಲ್ಲಿಂದ ಜೂನ್ ೧೪ರಂದು ಉತ್ತರ ಕನ್ನಡದ ಗಡಿಭಾಗದ ಭಟ್ಕಳಕ್ಕೆ ತೆರಳಿದ್ದರು.
ಗೂಗಲ್ ಪ್ರಕಾರ ಸುಮಾರು ೪೩೦ ಕಿ.ಮೀ ಪ್ರಯಾಣಿಸಿ ಭಟ್ಕಳ ತಲುಪಿದ್ದ ಶಿಹಾಬ್ ಇದೀಗ ಭಟ್ಕಳದಿಂದ ಮುರುಡೇಶ್ವರ ಕಡೆ ತಮ್ಮ ಪ್ರಯಾಣ ಮುಂದುವರಿಸಿದ್ದಾರೆ.
ಕೇರಳದಲ್ಲಿ ಸೂಪರ್ ಮಾರ್ಕೆಟ್ ನಡೆಸುತ್ತಿರುವ ಶಿಹಾಬ್ ಕಳೆದ ಎಂಟು ತಿಂಗಳಿAದ ಹಜ್ ಯಾತ್ರೆಗೆ ಸಿದ್ಧತೆ ನಡೆಸಿದ್ದರು. ಈಗ ಅವರು ಮಕ್ಕಾ ತಲುಪಲು ಆರು ದೇಶಗಳ ಮೂಲಕ ಪ್ರಯಾಣಿಸಬೇಕು. ಅವರು ಯಾವುದೇ ಸವಾರಿ ಮಾಡದೆ ರಸ್ತೆಯಲ್ಲಿ ನಡೆದು ಭಾರತದಿಂದ ಪಾಕಿಸ್ತಾನ, ಇರಾನ್, ಇರಾಕ್ ಮತ್ತು ಕುವೈತ್ ಮೂಲಕ ಸೌದಿ ಅರೇಬಿಯಾವನ್ನು ಪ್ರವೇಶಿಸುತ್ತಾರೆ. ಪವಿತ್ರ ನಗರ ಮೆಕ್ಕಾ ತಲುಪುತ್ತಾರೆ. ಇದಕ್ಕಾಗಿ ೮೬೪೦ ಕಿ.ಮೀ ನಡೆಯಬೇಕಾಗಿದ್ದು, ದಿನಕ್ಕೆ ೨೫ ಕಿ.ಮೀ.ನಂತೆ ೨೮೦ ದಿನಗಳ ಕಾಲ ನಡೆಯಬೇಕಾಗಿದೆ.
ಶಿಹಾಬ್ ಅವರಿಗೆ ಕೇರಳದ ಕೇಂದ್ರ ವಿದೇಶಾಂಗ ಸಚಿವ ವಿ ಮುರಳಿಧರನ್ ಅವರ ಬೆಂಬಲವಿದೆ, ಅವರ ಪ್ರಯಾಣವನ್ನು ಯಶಸ್ವಿಗೊಳಿಸಲು ಇನ್ನೂ ಅನೇಕರು ಒಟ್ಟಾಗಿ ಕೆಲಸ ಮಾಡುತ್ತಿದ್ದಾರೆ.
ಸದ್ಯ ಕೇರಳದಿಂದ ಕರ್ನಾಟಕ ಪ್ರವೇಶಿಸಿದ್ದು, ಇಲ್ಲಿಂದ ಗೋವಾ, ಮಹಾರಾಷ್ಟ್ರ, ಮಧ್ಯಪ್ರದೇಶ, ರಾಜಸ್ಥಾನ, ಹರಿಯಾಣ, ಪಂಜಾಬ್ ಮೂಲಕ ವಾಘಾ ಗಡಿ ಮೂಲಕ ಪಾಕಿಸ್ತಾನ ಪ್ರವೇಶಿಸಲಿದ್ದಾರೆ.
ಅವರು ೧೦ ಕೆಜಿ ತೂಕದ ಚೀಲವನ್ನು ಹೊಂದಿದ್ದು, ಕೆಲವು ಟೀ ಶರ್ಟ್ಗಳು, ಪ್ಯಾಂಟ್‌ಗಳು, ಬೆಡ್ ಶೀಟ್‌ಗಳು ಮತ್ತು ಛತ್ರಿ ಮತ್ತು ಅವರ ಬಲವಾದ ಇಚ್ಛಾಶಕ್ತಿ ಮತ್ತು ದೃಢಸಂಕಲ್ಪದೊAದಿಗೆ ಅವರು ಈ ಪ್ರಯಾಣವನ್ನು ಪ್ರಾರಂಭಿಸಿರುತ್ತಾರೆ. ಈ ಪ್ರದೇಶವನ್ನು ಪ್ರವೇಶಿಸಿದವರು ರಾತ್ರಿ ಅದೇ ಪ್ರದೇಶದ ಮಸೀದಿಯಲ್ಲಿ ತಂಗುತ್ತಾರೆ ಮತ್ತು ಮರುದಿನ ಬೆಳಿಗ್ಗೆ ಮತ್ತೆ ತಮ್ಮ ಪ್ರಯಾಣವನ್ನು ಪ್ರಾರಂಭಿಸುತ್ತಾರೆ.
ಮಾಧ್ಯಮದೊAದಿಗಿ ಮಾತನಾಡಿದ ಅವರು, ಈ ಯಾತ್ರೆಯನ್ನು ೨೮೦ ದಿನಗಳಲ್ಲಿ ಕಾಲ್ನಡಿಗೆಯಲ್ಲಿ ಪೂರ್ಣಗೊಳಿಸಬೇಕು ಮತ್ತು ಮುಂದಿನ ವರ್ಷ ಅಂದರೆ ೨೦೨೩ ರಲ್ಲಿ ಹಜ್ ಮಾಡುವುದಾಗಿ ಹೇಳಿದರು. ಪ್ರವಾಸಕ್ಕೆ ತಮ್ಮ ಕುಟುಂಬ ಮತ್ತು ಸ್ನೇಹಿತರಿಂದ ದೊರೆತ ಬೆಂಬಲವನ್ನು ಅವರು ಉಲ್ಲೇಖಿಸಿದ್ದಾರೆ. ಕೇರಳ ರಾಜ್ಯ ಸರ್ಕಾರ ಸೇರಿದಂತೆ ಕೇಂದ್ರ ಸರ್ಕಾರದ ಬೆಂಬಲವಿದೆ ಎಂದರು.
ಶಿಹಾಬನ ಮಾತೃಭಾಷೆ ಮಲಯಾಳಂ, ಆದರೆ ಅವರಿಗೆ ಅರೇಬಿಕ್ ಮತ್ತು ಇಂಗ್ಲಿಷ್ ತಿಳಿದಿದೆ. ಹಿಂದಿ / ಉರ್ದು ಭಾಷೆಯಲ್ಲಿ ತುಂಬಾ ದುರ್ಬಲ.
ಕಾರವಾರ ಹಾಗೂ ಗೋವಾ ಮಾರ್ಗವಾಗಿ ತೆರಳುತ್ತಿರುವುದಾಗಿ ತಿಳಿಸಿದ ಅವರು ಸಂಜೆ ಮಂಕಿಯಲ್ಲಿ ತಂಗಲಿದ್ದಾರೆ. ನಾಳೆ ಬುಧವಾರ ಕಾರವಾರ ಹಾಗೂ ಗೋವಾ ಮಾರ್ಗವಾಗಿ ಮಹಾರಾಷ್ಟ್ರದ ಮೂಲಕ ಮುಂದುವರಿಯುತ್ತೇವೆ ಎಂದು ಹೇಳಿದ್ದಾರೆ.

More Stories
ಜನವರಿ 7 ಭಟ್ಕಳ ತಾಲೂಕ 11ನೆ ಸಾಹಿತ್ಯ ಸಮ್ಮೇಳ
ಭಟ್ಕಳ ತಾಲೂಕು ಕಸಾಪದಿಂದ ರಸಪ್ರಶ್ನೆ ಸ್ಪರ್ಧೆ – ಬಹುಮಾನ ವಿತರಣೆ.
ಭಟ್ಕಳದ ಶ್ರೀ ಜ್ಞಾನೇಶ್ವರಿ ಶಿಕ್ಷಣ ಮಹಾವಿದ್ಯಾಲಯದಲಿ ದೀಪದಾನ ಕಾರ್ಯಕ್ರಮ