March 12, 2025

Bhavana Tv

Its Your Channel

ಉತ್ತರ ಪ್ರದೇಶ ಸರ್ಕಾರದ ಬುಲ್ಡೋಜರ್ ಗೂಂಡಾಗಿರಿ ತಡೆಯುವಂತೆ ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ವತಿಯಿಂದ ಭಟ್ಕಳದಲ್ಲಿ ಪ್ರತಿಭಟನೆ

ಭಟ್ಕಳ: ಉತ್ತರ ಪ್ರದೇಶ ಸರಕಾರದ ಬುಲ್ಡೋಜರ್ ಗೂಂಡಾಗಿರಿ ತಡೆಯುವಂತೆ ಮತ್ತು ಬಂಧಿಸಿರುವ ವೆಲ್ಫೇರ್ ಪಾರ್ಟಿಯ ರಾಷ್ಟ್ರೀಯ ನಾಯಕ ಜಾವೀದ್ ಮೊಹ್ಮದ್ ಅವರನ್ನು ತಕ್ಷಣ ಬಿಡುಗಡೆಗೊಳಿಸುವಂತೆ ಆಗ್ರಹಿಸಿ ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ಇದರ ವತಿಯಿಂದ ಭಟ್ಕಳ ಹಳೇ ತಹಸೀಲ್ದಾರ ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ವೆಲ್ಫೇರ್ ಪಾರ್ಟಿಯ ರಾಜ್ಯಾಧ್ಯಕ್ಷ ಉತ್ತರ ಪ್ರದೇಶ ಸರಕಾರಕ್ಕೆ ಬುಲ್ಡೋಜರ್ ಗುಂಡಾಗಿರಿ ನಡೆಸಲು ಯಾವ ಕಾನೂನಿನಲ್ಲಿ ಅವಕಾಶವಿದೆ. ಉತ್ತರ ಪ್ರದೇಶದಂತೆ ಮಧ್ಯಪ್ರದೇಶ, ಅಸ್ಸಾಂನಲ್ಲೂ ಪ್ರತಿಭಟನೆ ನಡೆಸಿದವರ ವಿರುದ್ದ ಬುಲ್ಡೋಜರ್ ಗೂಂಡಾಗಿರಿ ನಡೆಸಲಾಗಿದೆ. ಇಂತಹ ಕಾನೂನು ಬಾಹಿರ ಕೃತ್ಯದ ಕುರಿತು ಕೇಂದ್ರ ಸರಕಾರ ಸುಮ್ಮನಿದೆ ಎಂದರು.
ಒಂದು ಜಾತಿ, ಧರ್ಮದ ಜನರನ್ನು ಮಾತ್ರ ಗುರಿಯನ್ನಾಗಿಸಿ ಬುಲ್ಡೋಜರ ಗುಂಡಾಗಿರಿ ಮಾಡುವುದು ಸರಿಯಲ್ಲ. ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದಾರೆAದು ವೆಲ್ಪೇರ್ ಪಾರ್ಟಿಯ ರಾಷ್ಟ್ರೀಯ ಮುಖಂಡ ಜಾವೀದ್ ಮೊಹ್ಮದರನ್ನು ಬಂಧಿಸಲಾಗಿದ್ದು, ತಕ್ಷಣ ಅವನ್ನು ಬಿಡುಗಡೆಗೊಳಿಸಬೇಕು ಎಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷ ನಸೀಮ್ ಖಾನ್, ಪ್ರಧಾನ ಕಾರ್ಯದರ್ಶಿ ಆಸಿಫ್ ಶೇಖ್, ಕಾರ್ಯದರ್ಶಿ ಶೌಕತ್ ಖತೀಬ್, ಖಜಾಂಚಿ ಅಬ್ದುಲ್ ಜಬ್ಬಾರ್ ಅಸದಿ ಹಾಗೂ ಕಾರ್ಯಕರ್ತರಿದ್ದರು

error: