
ಭಟ್ಕಳ: ತಾಲೂಕಿನ ಪ್ರಸಿದ್ಧ ಪುಣ್ಯ ಕ್ಷೇತ್ರವಾದ ಹೂತ್ಕಳದ ಧನ್ವಂತರಿ ದೇವಸ್ಥಾನದಲ್ಲಿ ಜು.೧೦ರಂದು ರವಿವಾರ ಲಕ್ಷ ತುಳಸಿ ಅರ್ಚನೆ ನಡೆಯಲಿದೆ ಎಂದು ಅರ್ಚಕ ಶಂಕರ ಭಟ್ಟ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮಾರೂಕೇರಿಯಲ್ಲಿರುವ ಹೂತ್ಕಳದ ಶ್ರೀ ಧನ್ವಂತರಿ ಮಹಾವಿಷ್ಣುಮೂರ್ತಿ ವಿಘ್ನೇಶ್ವರ ದೇವಸ್ಥಾನದಲ್ಲಿ ವರ್ಷಂಪ್ರತಿಯ0ತೆ ಲೋಕಕಲ್ಯಾಣಾರ್ಥವಾಗಿ ಆಷಾಢ ಶುದ್ಧ ಪ್ರಥಮ ಏಕಾದಶಿಯಂದು ಲಕ್ಷತುಳಸಿ ಅರ್ಚನೆ ಹಾಗೂ ಸಾಮೂಹಿಕ ವಿಷ್ಣುಸಹಸ್ರನಾಮ ಪಾರಾಯಣ ನಡೆಯಲಿದ್ದು ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆಯೂ ಕೋರಿದ್ದಾರೆ.

ಭಾನುವಾರ ಬೆಳಿಗ್ಗೆಯಿಂದ ಅಭಿಷೇಕ, ಸಹಸ್ರ ದೂರ್ವಾಚನೆ, ವಿಶೇಷ ಅಲಂಕಾರ, ಶ್ರೀ ಧನ್ವಂತರಿಯಲ್ಲಿ ಶ್ರೀಸೂಕ್ತ, ಪುರುಷಸೂಕ್ತಾದಿ ವಿಶೇಷ ಅಭಿಷೇಕ, ಕಲ್ಪೋಕ್ತ ಮಹಾಪೂಜೆ, ಲಕ್ಷ ತುಳಸಿ ಅರ್ಚನೆ ಹಾಗೂ ಸಾಮೂಹಿಕ ವಿಷ್ಣು ಸಹಸ್ರನಾಮ ಪಾರಾಯಣ, ಮಹಾ ಮಂಗಳಾರತಿ, ಪ್ರಸಾದ ವಿತರಣೆ ನಂತರ ಉಪಹಾರ ನಡೆಯಲಿದೆ. ಮಧ್ಯಾಹ್ನ ೩ ಗಂಟೆಯಿ0ದ ಕ್ಷೇತ್ರದಲ್ಲಿ ಲೋಕ ಕಲ್ಯಾಣಾರ್ಥವಾಗಿ ಕೊರೋನಾ ನಿವಾರಣೆಗಾಗಿ ಈ ಹಿಂದೆ ಸಂಕಲ್ಪಿಸಿದ0ತೆ ಕೋಟಿ ಧನ್ವಂತರಿ ಜಪ ಮುಂದುವರಿಯಲಿದೆ. ಸಂಜೆ ೫ ಗಂಟೆಯಿ0ದ ಸ್ಥಳೀಯ ಕಲಾವಿದರಿಂದ ದ್ರೌಪದಿ ಪ್ರತಾಪ ಯಕ್ಷಗಾನ ತಾಳಮದ್ದಲೆ ನಡೆಯಲಿದ್ದು ಭಕ್ತರು ಆಗಮಿಸಿ ಪ್ರಸಾದ ಸ್ವೀಕರಿಸುವಂತೆಯೂ ಕೋರಿದ್ದಾರೆ.
More Stories
ಜನವರಿ 7 ಭಟ್ಕಳ ತಾಲೂಕ 11ನೆ ಸಾಹಿತ್ಯ ಸಮ್ಮೇಳ
ಭಟ್ಕಳ ತಾಲೂಕು ಕಸಾಪದಿಂದ ರಸಪ್ರಶ್ನೆ ಸ್ಪರ್ಧೆ – ಬಹುಮಾನ ವಿತರಣೆ.
ಭಟ್ಕಳದ ಶ್ರೀ ಜ್ಞಾನೇಶ್ವರಿ ಶಿಕ್ಷಣ ಮಹಾವಿದ್ಯಾಲಯದಲಿ ದೀಪದಾನ ಕಾರ್ಯಕ್ರಮ