
ಭಟ್ಕಳ: ರಾಜೀವ್ ಗಾಂಧಿ ಆಶ್ರಯ ಯೋಜನೆಯಲ್ಲಿ ಮಾಡಿದ ಕ್ರಿಯಾಯೋಜನೆ ಸರಿಯಿಲ್ಲ ಎಂದು ಶಾಸಕರು, ಹಾಗೂ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಹಾಗು ಜುಲೈ 21 ರಂದು ವಸತಿ ಯೋಜನೆ ಫಲಾನುಭವಿಗಳಿಗೆ ಆದೇಶ ಪತ್ರ ವಿತರಣೆ ಕಾರ್ಯಕ್ರಮದಲ್ಲಿ ಅಧಿಕಾರಿಗಳು ಶಿಷ್ಟಾಚಾರ ಉಲ್ಲಂಘಿಸಿದ್ದು ಈ ಕೂಡಲೇ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಜಾಲಿ ಪಟ್ಟಣ ಪಂಚಾಯತ ಸದಸ್ಯ ತೌಫಿಕ್ ಬ್ಯಾರಿ ಹಾಗೂ ಉಳಿದ ಪಟ್ಟಣ ಪಂಚಾಯತ ಸದಸ್ಯರು ಜಿಲ್ಲಾಧಿಕಾರಿಗಳನ್ನು ಆಗ್ರಹಿಸಿದರು.
ಅವರು ಭಟ್ಕಳ ಖಾಸಗಿ ಹೋಟೆಲನಲ್ಲಿ ಕರೆಯಲಾದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಿದ್ದರು.
ಸದಸ್ಯ ಮಿಸ್ಬಾ ಉಲ್‌ಹಕ್ ಕಾರಗದ್ದೆ ಮಾತನಾಡಿ ‘ ರಾಜೀವ್ ಗಾಂಧಿ ವಸತಿ ಯೋಜನೆ ಅಡಿ ಮನೆ ಹಂಚಿಕೆಯಾಗಿದ್ದರಲ್ಲಿ ಕೇವಲ ನಾಲ್ಕು ವಾರ್ಡ್ ಗಳಿಗೆ(8,10,11,3) ಮಾತ್ರ ಮಹತ್ವ ನೀಡಲಾಗಿದೆ. ಇನ್ನುಳಿದ ವಾರ್ಡ್ ಗಳಿಗೆ ಮಹತ್ವ ನೀಡಲಾಗಿಲ್ಲ. ಶಾಸಕರು ಪಟ್ಟಣ ಪಂಚಾಯಿತಿಯ ಅಧಿಕಾರಿಗಳ ಮೇಲೆ ಒತ್ತಡ ತಂದು ಈ ರೀತಿ ನಾಲ್ಕೇ ವಾರ್ಡಿಗೆ ಎಲ್ಲಾ ವಸತಿ ಮನೆಗಳು ಸಿಗುವಂತೆ ಮಾಡಿದ್ದಾರೆ. ಬೇರೆ ವಾರ್ಡುಗಳಲ್ಲಿ ಜನರೇ ಇಲ್ಲವ ನಮ್ಮ ವಾರ್ಡ್ ನಲ್ಲಿ ಎಸ್ಸಿ ಎಸ್ಟಿ ಜನಾಂಗದವರಿದ್ದಾರೆ. ಆದರೆ ಅವರಿಗೂ ಕೂಡ ಯಾವುದೇ ಅವಕಾಶ ನೀಡಿಲ್ಲ. ಹಿಂದಿನ ಶಾಸಕರು ಎಲ್ಲಾ ವಾರ್ಡ್ ನ ಸದಸ್ಯರುಗಳನ್ನು ಗಣನೆಗೆ ತೆಗೆದುಕೊಂಡು ವಸತಿ ಮನೆಗಳನ್ನು ಹಂಚುತ್ತಿದ್ದರು ಆದರೆ ಈಗಿನ ಶಾಸಕರ ವರ್ತನೆ ಏಕ ಪಕ್ಷಿಯವಾಗಿದೆ ಹಾಗೂ ಸರ್ವಾಧಿಕಾರಿ ಧೋರಣೆಯನ್ನು ತೋರಿಸುತ್ತದೆ ಎಂದರು.
ಜಾಲಿ ಪಟ್ಟಣ ಪಂಚಾಯತ ಚುನಾವಣೆ ನಡೆದು ಆರು ತಿಂಗಳಾಗಿದೆ. ಇನ್ನು ತನಕ ಅಧ್ಯಕ್ಷ ಉಪಾಧ್ಯಕ್ಷ ಚುನಾವಣೆ ನಡೆಸಿ ಪಂಚಾಯತ ಕಮಿಟಿ ರಚನೆಯಾಗಿಲ್ಲ. ನಮ್ಮ ಪಟ್ಟಣ ಪಂಚಾಯಿತಿಯ ಕ್ರಿಯಾಯೋಜನೆಯಲ್ಲಿರುವ ಎಲ್ಲಾ ಯೋಜನೆಗಳು ಕೇವಲ ನಾಲ್ಕೇ ವಾರ್ಡಿಗೆ ಸೀಮಿತವಾಗಿದೆ. ಯಾರದ್ದೊ ಒತ್ತಡಕ್ಕೆ ಮಣಿದು ಕ್ರಿಯಾಯೋಜನೆ ದುರ್ಬಳಕೆ ಮಾಡಿದ್ದಾರೆ. ಕೆಲವರಿಗೆ ಸಮಾಧಾನಪಡಿಸಿ ಖುಷಿ ಪಡಿಸುವ ನಿಟ್ಟಿನಲ್ಲಿ ಮನೆಗಳನ್ನು ಹಂಚಿಕೆ ಮಾಡಿದ್ದಾರೆ. ಸರಕಾರಿ ಕಾರ್ಯಕ್ರಮವೂ ಖಾಸಗಿ ಹಾಗೂ ಪಕ್ಷದ ಕಾರ್ಯಕ್ರಮದ ರೀತಿ ಆಗಿದೆ ಎಂದು ಆರೋಪಿಸಿದ ಅವರು ಮನೆ ಹಂಚಿಕೆಯಲ್ಲಿ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಂಡಿಲ್ಲ ಹಾಗೂ ಗಮನಕ್ಕೂ ತಾರದೇ ಇರುವುದು ಖಂಡನಾರ್ಹವಾಗಿದೆ ಎಂದ ಅವರು ಇದಕ್ಕೆ ತಹಸೀಲ್ದಾರ ಹಾಗೂ ಪಟ್ಟಣ ಪಂಚಾಯತ ಮುಖ್ಯಾಧಿಕಾರಿಗಳು ಸ್ಪಷ್ಟನೆ ನೀಡಬೇಕು ಎಂದರು.
ಸದಸ್ಯರಾದ ತೌಫಿಕ್ ಇಸ್ಮಾಯಿಲ್ ಬ್ಯಾರಿ ಮಾತನಾಡಿ ‘ಮೊನ್ನೆ ಜಾಲಿಯಲ್ಲಿ ನಡೆದ ರಾಜೀವ್ ಗಾಂಧಿ ವಸತಿ ಯೋಜನೆ ಅಡಿಯ ಕಾರ್ಯಕ್ರಮ ಕೆಲವರ ವೈಯಕ್ತಿಕ ಕಾರ್ಯಕ್ರಮದಂತಿತ್ತು. ಸಂಪೂರ್ಣವಾಗಿ ಶಿಷ್ಟಾಚಾರ ಉಲ್ಲಂಘಿಸಿದ್ದಾರೆ. ಪಟ್ಟಣ ಪಂಚಾಯಿತಿಯ ಕೌನ್ಸಿಲರ್ಗಳಿಗೆ ಮಾಹಿತಿ ನೀಡದೇ ಹೊರಗಿನವರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ. ನಗರೋತ್ಥಾನ ಯೋಜನೆಯಡಿ ಬಂದAತಹ ಹಣವನ್ನು ಬಿಜೆಪಿ ಪಕ್ಷದ ಮುಖಂಡರುಗಳನ್ನು ಖುಷಿಪಡಿಸುವ ಸಲುವಾಗಿ ಕೇವಲ ನಾಲ್ಕೇ ವಾರ್ಡ್ಗಳನ್ನು ಗುರಿಯಾಗಿಸಿಕೊಂಡು ಯೋಜನೆ ಮಾಡಿದಂತಾಗಿದೆ. ಒಂದೇ ವಾರ್ಡಿಗೆ 95 ಲಕ್ಷ ಹಣದ ಯೋಜನೆಗಳನ್ನು ಮಂಜೂರು ಮಾಡಲಾಗಿದೆ. ಈ ರೀತಿ ಭೇದ ಭಾವ ಮಾಡಿರುವುದಕ್ಕೆ ನಮ್ಮ ವಿರೋಧವಿದೆ. ಇನ್ನು ಶಾಸಕರು ಕಾರ್ಯಕ್ರಮದಲ್ಲಿ ನಮ್ಮ ಸರಕಾರದಿಂದ ಹಣ ನೀಡಿದ್ದು ಎಂದು ಹೇಳಿದ್ದು ಇದರಲ್ಲಿ ಸರಕಾರಕ್ಕೆ ಜನಸಾಮಾನ್ಯರು ತುಂಬಿದ ಜಿಎಸ್.ಟಿ ಹಾಗೂ ಟ್ಯಾಕ್ಸ್ ಹಣದಿಂದಲೇ ಯೋಜನೆಗೆ ಹಣ ನೀಡುತ್ತಿರುವುದು ಹೊರತುಪಡಿಸಿ ಅವರು ವೈಯಕ್ತಿಕವಾಗಿ ಯೋಜನೆಗೆ ಹಣ ನೀಡಿಲ್ಲ ಎಂದು ಪ್ರಶ್ನಿಸಿದ ಅವರು ಇಲ್ಲಿನ ಜನರ ಅಭಿವೃದ್ಧಿ ಮಾಡಬೇಕು ಹೊರತು ಆಪ್ತರ ಅಭಿವೃದ್ಧಿಗೆ ಮುಂದಾಗಬಾರದು. ಜಿಲ್ಲಾ ಉಸ್ತುವಾರಿ ಸಚಿವರಿಗೆ ಹಾಗೂ ಜಿಲ್ಲಾಧಿಕಾರಿಗಳಿಗೆ ಈ ಬಗ್ಗೆ ವಿವರಿಸಿ ದೂರು ನೀಡಲಿದ್ದೇವೆ ಹಾಗೂ ಹೊಸದಾಗಿ ಕ್ರಿಯಾಯೋಜನೆ ರಚಿಸಬೇಕು ಹಾಗೂ ಈ ಬಗ್ಗೆ ಪರಿಶೀಲನೆ ನಡೆಸಬೇಕೆಂದು ಆಗ್ರಹಿಸಿದರು.
ಸದಸ್ಯ ಈಶ್ವರ ಮೋಗೇರ ಮಾತನಾಡಿ ‘ ಕೇವಲ ನಾಲ್ಕು ವಾರ್ಡಗಾಗಿ ಕ್ರಿಯಾಯೋಜನೆ ರಚಿಸಿ ಮನೆ ನೀಡಿದ್ದು ಅದು ಒಂದು ಪಕ್ಷಕ್ಕೆ ಮಾತ್ರ ಸೀಮಿತ ಎಂಬAತಾಗಲಿದೆ. ವಿಶೇಷ ಅನುದಾನವಿದ್ದರೆ ಕೆಲವೇ ವಾರ್ಡಗೆ ಹಂಚಿಕೆ ಮಾಡಬಹುದಾಗಿತ್ತು. ಇವೆಲ್ಲವನ್ನು ಮೀರಿದ್ದಾರೆ ಇದು ಸಮಂಜಸವಾಗಿಲ್ಲ ಎಂದರು.
ಈ ಸಂದರ್ಭದಲ್ಲಿ ಜಾಲಿ ಪಟ್ಟಣ ಪಂಚಾಯಿತ್ ಚುನಾಯಿತ ಸದಸ್ಯರಾದ ರಮೇಶ ಎಮ್. ನಾಯ್ಕ, ರಮೇಶ ಗೊಂಡ, ಇರ್ಪಾನ್ ವಾಸಿಂ ಮನೆಗಾರ, ಶಬೀನಾ ಬಾನು, ಶಾಹೀನಾ ಶೇಕ್, ಇರ್ಷಾದ ಖಾನ್, ಶೈನಾಜ್, ಅಫಿಶಾ ಕಾಶಿಯಾ ಸೇರಿ ಇನ್ನುಳಿದವರು ಇದ್ದರು.

More Stories
ಜನವರಿ 7 ಭಟ್ಕಳ ತಾಲೂಕ 11ನೆ ಸಾಹಿತ್ಯ ಸಮ್ಮೇಳ
ಭಟ್ಕಳ ತಾಲೂಕು ಕಸಾಪದಿಂದ ರಸಪ್ರಶ್ನೆ ಸ್ಪರ್ಧೆ – ಬಹುಮಾನ ವಿತರಣೆ.
ಭಟ್ಕಳದ ಶ್ರೀ ಜ್ಞಾನೇಶ್ವರಿ ಶಿಕ್ಷಣ ಮಹಾವಿದ್ಯಾಲಯದಲಿ ದೀಪದಾನ ಕಾರ್ಯಕ್ರಮ