May 4, 2024

Bhavana Tv

Its Your Channel

ಶಾಶ್ವತ ನೆಮ್ಮದಿಗೆ ಶ್ರದ್ಧಾ ಭಕ್ತಿ ಯೋಗವೇ ಸೂತ್ರ- ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ

ಭಟ್ಕಳ: ಸುಖ ಶಾಂತಿ ನೆ ಮ್ಮದಿ ಪ್ರತಿಯೊಂದು ಜೀವರಾಶಿಯ ಚಿಂತನೆಯಾಗಿದೆ. ಶಾಶ್ವತ ನೆಮ್ಮದಿಗೆ ಭಕ್ತಿ ಯೋಗವೇ ಸೂತ್ರ. ನಮ್ಮಲ್ಲಿ ಶ್ರದ್ಧಾ ಭಕ್ತಿ ಇದ್ದರೆ ಭಗವಂತನೇ ನಮ್ಮ ರಕ್ಷಣೆ ಮಾಡುತ್ತಾನೆ. ಮಾತಾ-ಪಿತರ ಸೇವೆಯಿಂದ ಪೂರ್ಣತ್ವ ಪಡೆಯಲು ಸಾಧ್ಯ. ಭಜನೆಯನ್ನು ಮಾಡುವುದರಿಂದ ಕಲುಷಿತ ಮನಸ್ಸು ಪರಿಶುದ್ಧಗೊಳ್ಳುವುದು ಎಂದು ಕನ್ಯಾಡಿ ಶ್ರೀರಾಮ ಕ್ಷೇತ್ರ ಮಹಾಸಂಸ್ಥಾನದ ಸದ್ಗುರು ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ಹೇಳಿದರು.ಅವರು ತಮ್ಮ ಚಾತುರ್ಮಾಸ್ಯದ 19 ನೇ ದಿನ ರವಿವಾರದಂದು ಧರ್ಮಸ್ಥಳದ ಶ್ರೀ ಗುರುದೇವ ಮಠದಲ್ಲಿ ನೆರದ ಭಕ್ತರಿಗೆ ಆಶೀರ್ವಚನ ನೀಡಿದರು.

ಶಕ್ತಿ ಸಂಪತ್ತು ಅಧಿಕಾರಕ್ಕೆ ಗರ್ವ ಇರಬಾರದು,ನಿಷ್ಠೆ ಇರಬೇಕು.ಆಗ ಕೀರ್ತಿ ಹೆಚ್ಚುತ್ತದೆ ಅರಿಷಡ್ವರ್ಗಗಳು ಮಾನವನನ್ನು ಹೆಜ್ಜೆ ಹೆಜ್ಜೆಗೂ ಬಾಧಿಸುತ್ತವೆ ಇದರಿಂದ ಮಾನವ ಬದುಕಿನ ಸತ್ಯಾಸತ್ಯತೆಯ ಅರಿಯಲು ಸಾಧ್ಯವಾಗುವುದಿಲ್ಲ. ಅರಿಷಡ್ವರ್ಗಗಳನ್ನು ಎದುರಿಸುವ ಛಲ, ಮನಸ್ಸಿನ ಸ್ಥಿತಿಯ ಸ್ಥಿರತೆಯ ಜತೆ ಗುರಿಯನ್ನು ಮುಟ್ಟಲು ಗುರುವಿನ ಆಶೀರ್ವಾದ, ಮಾರ್ಗದರ್ಶನ ಇರಬೇಕು ಎಂದರು.
ಚಾತುರ್ಮಾಸ್ಯ ಸಮಿತಿ ಅಧ್ಯಕ್ಷ ,ಶಾಸಕ ಹರೀಶ್ ಪೂಂಜ ಉಪಸ್ಥಿತರಿದ್ದರು.
ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ನಾಮಧಾರಿ ಸಮಾಜದ ಬಂಧುಗಳು ಉಪಸ್ಥಿತಿಯಲ್ಲಿ ಪಾದುಕಾ ಪೂಜೆ ನೆರವೇರಿತು. ಭಟ್ಕಳ ನಾಮಧಾರಿ ಸಮಾಜದ ಅಧ್ಯಕ್ಷ ಕೃಷ್ಣ ಎನ್. ನಾಯ್ಕ ಆಸರಕೇರಿ, ಪಶ್ಚಿಮ ಘಟ್ಟಗಳ ಸಂರಕ್ಷಣೆ ಕಾರ್ಯಪಡೆಯ ಅಧ್ಯಕ್ಷ ಗೋವಿಂದ ಜೆ. ನಾಯ್ಕ,ಮಾಜಿ ಶಾಸಕ ಜೆ.ಡಿ.ನಾಯ್ಕ ಪ್ರಮುಖರಾದ ಭವಾನಿಶಂಕರ ನಾಯ್ಕ ಎಂ.ಜೆ.ನಾಯ್ಕ, ಶ್ರೀಧರ ನಾಯ್ಕ ಭಟ್ಕಳ, ಕೆ.ಆರ್.ನಾಯ್ಕ,ಸತೀಶ ನಾಯ್ಕ,ವೆಂಕಟೇಶ ನಾಯ್ಕ ತಲಗೋಡು,ಮಂಜಪ್ಪ ನಾಯ್ಕ,ವಿನಾಯಕ ನಾಯ್ಕ, ಗಿರೀಶ ನಾಯ್ಕ, ಕೃಷ್ಣ ನಾಯ್ಕ,ಗಣಪತಿ ನಾಯ್ಕ,ಶಂಕರ್ ನಾಯ್ಕ, ಶ್ರೀಧರ ಹೊನ್ನಪ್ಪ ನಾಯ್ಕ, ಸುಬ್ರಾಯ ನಾಯ್ಕ, ವಿನಾಯಕ ಎಸ್, ವಾಸು ನಾಯ್ಕ,ರಾಜು ಮಹೇಶ್ ನಾಯ್ಕ,ಮಂಜುನಾಥ ನಾಯ್ಕ, ಎಂ. ಡಿ.ನಾಯ್ಕ ಇನ್ನಿತರ ಪ್ರಮುಖರು ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ , ಭಟ್ಕಳದ ಭಕ್ತವೃಂದದಿAದ ಭಜನೆ ಕಾರ್ಯಕ್ರಮ ನಡೆಯಿತು. ಚಾತುರ್ಮಾಸ್ಯ ಸಮಿತಿ ಸಂಚಾಲಕರು, ಸದಸ್ಯರು ಉಪಸ್ಥಿತರಿದ್ದರು.
ಶ್ರೀ ರಾಮ ಕ್ಷೇತ್ರ ಸೇವಾ ಸಮಿತಿ ಜಿಲ್ಲಾ ಸಂಚಾಲಕ ಕೃಷ್ಣಪ್ಪ ಪೂಜಾರಿ ಕಲ್ಲಡ್ಕ ಮತ್ತು ಚಾತುರ್ಮಸ್ಯ ಸಮಿತಿ ಸಂಚಾಲಕ ಸೀತಾರಾಮ ಬಿ.ಎಸ್. ಕಾರ್ಯಕ್ರಮ ನಿರೂಪಿಸಿದರು.

error: