May 4, 2024

Bhavana Tv

Its Your Channel

ಭಟ್ಕಳದಲ್ಲಿ ಏಕಾಏಕಿ ಆರ್ಭಟಿಸಿದ ಮಳೆ; ಭಟ್ಕಳದ ಕೆಲ ಪ್ರದೇಶಗಳು ಸಂಪೂರ್ಣ ಮುಳುಗಡೆ

ಭಟ್ಕಳ: ಭಟ್ಕಳದಲ್ಲಿ ಏಕಾಏಕಿ ಆರ್ಭಟಿಸಿದ ಮಳೆಯಿಂದಾಗಿ ದೊಡ್ಡ ಅನಾಹುತ ಸೃಷ್ಟಿಯಾಗಿದೆ. ಭಾರಿ ಮಳೆಗೆ ಭಟ್ಕಳದ ಕೆಲ ಪ್ರದೇಶಗಳು ಸಂಪೂರ್ಣ ಮುಳುಗಡೆಯಾಗಿದ್ದು, ಇತಿಹಾಸದಲ್ಲಿ ಇದೆ ಮೊದಲ ಬಾರಿಗೆ ದಾಖಲೆ ಪ್ರಮಾಣದ ಮಳೆಯಾಗಿದ್ದು 530 ಸೆ.ಮಿ ಮಳೆಯಾಗಿದೆ.

ಸೋಮವಾರ ಸಂಜೆಯಿAದ ಸುರಿಯುತ್ತಿದ್ದ ಮಳೆ ಮಂಗಳವಾರ ಬೆಳಗ್ಗೆವರೆಗೂ ಮುಂದುವರಿದ ಪರಿಣಾಮ ಭಟ್ಕಳ ಪಟ್ಟಣ ಸಂಪೂರ್ಣವಾಗಿ ಮುಳುಗಡೆಯಾಗಿದೆ. ಮಣ್ಕುಳಿ, ಚೌಥನಿ, ಮುಂಡಳ್ಳಿ, ಮುಟ್ಟಳ್ಳಿ, ಗ್ರಾಮಗಳು ಸಂಪೂರ್ಣ ಜಲಾವೃತಗೊಂಡಿದ್ದು ಇನ್ನು ಹಲವು ಪ್ರದೇಶಗಳಿಗೆ ನೀರು ನುಗ್ಗಿದೆ.

ಸೋಮವಾರ ಸಂಜೆ ಶುರುವಾದ ಮಳೆ ಮದ್ಯ ರಾತ್ರಿಯಾದಂತೆ ಮನೆಗಳಿಗೆ ನೀರು ನುಗ್ಗಿ ಬಹುತೇಕ ಮಳೆ ಮುಳುಗಡೆಯಾಗಲು ಆರಂಭಿಸಿದೆ. ಹಲವು ಮನೆಗಳಲ್ಲಿದ್ದ ವೃದ್ಧರನ್ನು ಊರಿನ ಮುಖಂಡರು ಹಾಗೂ ಯುವಕರು ತಮ್ಮ ಸಂಬAಧಿಕರ ಮನೆಗೆ ಸ್ಥಳಾಂತರ ಮಾಡಿದ್ದಾರೆ.

ಮಣ್ಕುಳಿ, ಚೌಥನಿ, ಮುಂಡಳ್ಳಿ, ಮುಟ್ಟಳ್ಳಿ, ಮೂಢ ಭಟ್ಕಳ ಬೈಪಾಸ ಸೇರಿದಂತೆ ಅನೇಕ ಗ್ರಾಮಗಳು ಮುಳುಗಡೆಯಾಗಿದೆ. ಈ ಹಿನ್ನೆಲೆ ಅಗ್ನಿಶಾಮಕ ದಳದ ಸಿಬ್ಬಂದಿ ಹಾಗೂ ಸಾರ್ವಜನಿಕ ಅನೇಕ ಕಡೆಗಳಲ್ಲಿ ಮನೆಯಲ್ಲಿ ಸುಲಿಕಿಕೊಂಡಿರುವವರನ್ನು ರಕ್ಷಣೆ ಮಾಡುತ್ತಿದ್ದಾರೆ. ಮಣ್ಕುಳಿಯಿಂದ ಮೂಢ ಭಟ್ಕಳ ಬೈಪಾಸನ ರಾಷ್ಟ್ರೀಯ ಹೆದ್ದಾರಿಯಲ್ಲಿ ನೀರು ನದಿಯ ರೀತಿ ಹರಿದು ಹೋಗುತ್ತಿರುವ ಹಿನ್ನೆಲೆ ರಸ್ತೆ ಸಂಪರ್ಕ ಕೆಲ ಕಾಲ ಕಡಿತಗೊಂಡಿತ್ತು.

ಭಾರಿ ಮಳೆಯಿಂದ ಭಟ್ಕಳದ ಅನೇಕ ಗ್ರಾಮಗಳು ಸಂಪೂರ್ಣ ಜಲಾವೃತಗೊಂಡ ಹಿನ್ನೆಲೆ. ಎಸ್.ಡಿ.ಆರ್.ಎಫ್ ತಂಡ ಆಗಮಿಸಿ ಕೆಲವರನ್ನು ರಕ್ಷಣೆ ಮಾಡಿದ್ದಾರೆ. ರಕ್ಷಣೆ ಮಾಡಿದವರಿಗಾಗಿ ಸಾಂತ್ವನ ಕೇಂದ್ರಗಳನ್ನು ತೆರೆಯಲಾಗಿದೆ. ತಾಲೂಕಿನ ಪುರವರ್ಗ, ಮುಂಡಳ್ಳಿ, ಕುಕ್ಕನಿರ್, ಕಾಯ್ಕಿಣಿ, ಹಾಗೂ ಹಲವು ಭಾಗಗಲ್ಲಿ ಸಾಂತ್ವನ ಕೇಂದ್ರವನ್ನು ತೆರೆಯಲಾಗಿದೆ.

ಇತಿಹಾಸದಲ್ಲೇ ಮೊದಲ ಬಾರಿಗೆ ಭಟ್ಕಳದಲ್ಲಿ ಈ ರೀತಿ ಮಳೆಯಾಗಿದ್ದು ತಾಲೂಕಿನ ಜನತೆ ಒಂದು ರಾತ್ರಿ ಬೆಳಗಾಗುವ ತನಕ ಬೆಚ್ಚಿ ಬಿದ್ದಿದ್ದಾರೆ. ಈ ಬಾರಿಯ ಮಳೆಗೆ ಬಾರಿ ಪ್ರಮಾಣದ ಹಾನಿಯಾಗಿದ್ದು ಮನೆಯಲ್ಲಿದ್ದ ವಸ್ತುಗಳೆಲ್ಲ ನೀರು ಪಾಲಾಗಿದೆ.

ಜಿಲ್ಲೆಯಲ್ಲೇ ಭಟ್ಕಳ ತಾಲೂಕಿನಲ್ಲಿ ಈ ರೀತಿ ಮಳೆಯಾಗಿದ್ದು ಎಲ್ಲರ ಆಶ್ಚರ್ಯಕ್ಕೆ ಕಾರಣವಾಗಿದ್ದು ಜಿಲ್ಲಾಧಿಕಾರಿ ಮುಲ್ಲೇ ಮುಹಿಲನ್ ಭಟ್ಕಳಕ್ಕೆ ಭೇಟಿ ನೀಡಿ ಪ್ರವಾಹ ಪ್ರದೇಶಕ್ಕೆ ಭೇಟಿ ನೀಡಿದ್ದಾರೆ.

error: