May 4, 2024

Bhavana Tv

Its Your Channel

ಮನೆ ಮೇಲೆ ಗುಡ್ಡ ಕುಸಿತ, ನಾಲ್ವರು ಮೃತ

ಭಟ್ಕಳ ತಾಲೂಕಿನ ಮುಟ್ಟಳ್ಳಿಯಲ್ಲಿ ಮಂಗಳವಾರ ಬೆಳಿಗ್ಗೆ ಮನೆಯೊಂದರ ಮೇಲೆ ಗುಡ್ಡ ಕುಸಿದಿದ್ದು, ಮನೆ ಸಂಪೂರ್ಣ ಕುಸಿದು ಅವಶೇಷಗಳಡಿ ನಾಲ್ವರು ಮೃತಪಟ್ಟ ಘಟಣೆ ಸಂಭವಿಸಿದೆ.

ಮೇಘಸ್ಪೋಟದಿಂದಾಗಿ ಭಟ್ಕಳದ ಮುಟ್ಟಳ್ಳಿಯಲ್ಲಿ ಗುಡ್ಡ ಕುಸಿತದಿಂದ ಮನೆಯಡಿಯಲ್ಲಿ ಸಿಲುಕಿದ್ದ ನಾಲ್ವರ ಮೃತ ದೇಹವನ್ನು ಹೊರ ತೆಗೆಯುವಲ್ಲಿ ಜಿಲ್ಲಾಡಳಿತ ಯಶಸ್ವೀಯಾಗಿದೆ ಸುಮಾರು ನಾಲ್ಕು ಗಂಟೆಗಳ ಅವಿರತ ಕಾರ್ಯಾಚರಣೆಯಿಂದ ಅವಶೇಷಗಡಿಯಲ್ಲಿ ಸಿಲುಕಿ ಮೃತ ಪಟ್ಟದ್ದ ಲಕ್ಷಿöÃ ನಾರಾಯಣ ನಾಯ್ಕ, ಅನಂತ ನಾಯ್ಕ, ಪ್ರವೀಣ ನಾಯ್ಕ ಹಾಗೂ ಲಕ್ಷಿöÃ ನಾಯ್ಕ ಇವರ ಮೃತ ದೇಹ ದೊರೆತಿದೆ. ಮನೆಯು ಕುಸಿದು ಬಿದ್ದ ಪರಿಣಾಮ ಮನೆಯಲ್ಲಿದ್ದ ಎಲ್ಲ ನಾಲ್ವರೂ ಮೃತ ಪಟ್ಟಿದ್ದು, ತಕ್ಷಣ ಕಾರ್ಯಾಚರಣೆ ಕೈಗೊಂಡರೂ ಅವರನ್ನು ಉಳಿಸಲು ಜಿಲ್ಲಾಡಳಿತಕ್ಕೆ ಸಾಧ್ಯವಾಗಿಲ್ಲ. ಮನೆಯ ಮೇಲೆ ಗುಡ್ಡ ಕುಸಿತ ಉಂಟಾಗುತ್ತಲೇ ಗ್ರಾಮಸ್ಥರು ಬಂದು ಮನೆಯಲ್ಲಿ ಸಿಲುಕಿದ್ದವರನ್ನು ಹೊರ ತೆಗೆಯಲು ಪ್ರಯತ್ನಿಸಿದ್ದರೂ ಸಾಧ್ಯವಾಗಿಲ್ಲ. ನಂತರ ಜೆ.ಸಿ.ಬಿ. ತಂದು ಅವಶೇಷಗಳನ್ನು ಸರಿಸಿ ನೋಡಿದಾಗ ನಾಲ್ವರೂ ಕೂಡಾ ಮೃತಪಟ್ಟಿರುವುದು ಖಚಿತವಾಗಿತ್ತು.

ಸ್ಥಳಕ್ಕೆ ಬಂದ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್, ಸಹಾಯಕ ಆಯುಕ್ತೆ ಮಮತಾದೇವಿ ಜಿ.ಎಸ್., ತಹಸೀಲ್ದಾರ ಡಾ. ಸುಮಂತ ರಕ್ಷಣಾ ಕಾರ್ಯವನ್ನು ವೀಕ್ಷಿಸಿದರು. ಬೆಳಿಗ್ಗೆಯಿಂದಲೇ ನೀರು ತುಂಬಿದ್ದ ಕಡೆಗಳಿಗೆ ಭೇಟಿ ನೀಡಿ ಜನರನ್ನು ಸುರಕ್ಷಿತ ಸ್ಥಳಗಳಿಗೆ ಕರೆದೊಯ್ಯವಲ್ಲಿ ಸಹಕಾರ ನೀಡಿದ ಶಾಸಕ ಸುನಿಲ್ ನಾಯ್ಕ, ಪ.ಘ.ಸಂ.ಕಾ.ಪಡೆಯ ಅಧ್ಯಕ್ಷ ಗೋವಿಂದ ನಾಯ್ಕ, ಅವರು ಮನೆಯ ಅವಶೇಷಗಳನ್ನು ತೆಗೆಯುವ ತನಕ ಅಲ್ಲಿಯೇ ಇದ್ದು ಸೂಕ್ತ ಕಾರ್ಯಾಚರಣೆಗೆ ಮಾರ್ಗದರ್ಶನ ನೀಡಿದರು.
ಸ್ಥಳದಲ್ಲಿ ಅಗ್ನಿಶಾಮಕ ದಳ, ಎನ್.ಡಿ.ಆರ್.ಎಫ್. ತಂಡ, ಪೊಲೀಸ್ ಇಲಾಖೆಯ ಸಿಬ್ಬಂದಿಗಳು ಸ್ಥಳದಲ್ಲಿಯೇ ಇದ್ದು ನೂರಾರು ಕಾರ್ಯಕರ್ತರು ಶೋಧ ಕಾರ್ಯಕ್ಕೆ ನೆರವಾಗುತ್ತಿದ್ದರು,.
ಒಟ್ಟಾರೆ ಸತತ 12 ತಾಸಿಗು ಅಧಿಕ ಕಾಲ ಸುರಿದ ಮಳೆಯು ಭಟ್ಕಳ ತಾಲೂಕನ್ನು ಮುಳುಗಡೆಗೊಳಿಸುವುದರ ಜೊತೆಗೆ ನಾಲ್ವರನ್ನು ಬಲಿತೆಗೆದುಕೊಂಡಿತು.

error: