April 29, 2024

Bhavana Tv

Its Your Channel

ಮನೆ ಬಿದ್ದ ಸ್ಥಳಕ್ಕೆ ಜಿಲ್ಲಾಧಿಕಾರಿ ಹಾಗೂ ಶಾಸಕ ಸುನಿಲ್ ನಾಯ್ಕ ಭೇಟಿ

ಭಟ್ಕಳ:– ‘ಅಗಸ್ಟ್ 1 ರ ರಾತ್ರಿಯಿಂದ 2 ಮುಂಜಾನೆ ತನಕ ಸುರಿದ ಭಾರಿ ಮಳೆಯ ಪ್ರಮಾಣ ರಾಜ್ಯದಲ್ಲಿ ಹಿಂದೆAದು ಆಗದಂತಹ ಮಳೆಯು ಭಟ್ಕಳದಲ್ಲಿ ಸುರಿದಿದೆ. 550 ಮೀ.ಮೀ. ಮಳೆಯು ಭಟ್ಕಳ ತಾಲೂಕಿನಲ್ಲಿ ಸುರಿದಿದ್ದು, ಸಾಕಷ್ಟು ಮನೆಗಳು, ನಗರದ ಪ್ರಮುಖ ರಸ್ತೆಗಳು, ಗದ್ದೆ ಜಮೀನುಗಳು ಜಲಾವ್ರತಗೊಂಡ ವರದಿಗಳಾಗಿವೆ. ಈಗಾಗಲೇ ನಾಲ್ಕು ಕಾಳಜಿ ಕೇಂದ್ರ ತೆರೆಯಲಾಗಿದ್ದು, ತಾಲೂಕಿನ 304 ಜನರು ಆಯಾ ಪಂಚಾಯತಿ ವ್ಯಾಪ್ತಿಯಲ್ಲಿ ಕಾಳಜಿ ಕೇಂದ್ರಕ್ಕೆ ಸ್ಥಳಾಂತರಿಸಲಾಗಿದೆ. ಭಟ್ಕಳದಲ್ಲಿ ರಾತ್ರಿ 3 ಗಂಟೆಯಿAದ ರಕ್ಷಣಾ ಕಾರ್ಯ ಆರಂಭಿಸಲಾಗಿದೆ. ಕುಮಟಾ ಹಾಗೂ ಅಂಕೋಲಾದಿAದ ಎಸ್.ಡಿ.ಆರ್.ಎಪ್. ತಂಡವು ಭಟ್ಕಳದ ನಾನಾ ಕಡೆಗಳಲ್ಲಿ ಜಲಾವ್ರತಗೊಂಡ ಮನೆಗಳಿಂದ ಜನರನ್ನು ಸ್ಥಳಾಂತರಿಸಿದ್ದಾರೆ. ಇನ್ನೂ ಮೂರು ದಿನಗಳ ಕಾಲ ಕರಾವಳಿಯನ್ನು ಮಳೆಯ ಹಿನ್ನೆಲೆ ರೆಡ್ ಅಲರ್ಟ ಘೋಷಣೆಯ ಹಿನ್ನೆಲೆ ಮುನ್ನೆಚ್ಚರಿಕೆಯಾಗಿ ಮಂಗಳೂರು ಹಾಗೂ ಬೆಳಗಾವಿಯಿಂದ ಎಸ್.ಡಿ.ಆರ್.ಎಪ್. ತಂಡವನ್ನು ಕರೆಯಿಸಿಕೊಳ್ಳಲಾಗಿದೆ. ಅದೇ ರೀತಿ ನೇವಿಯ ತಂಡ ಮತ್ತು ಎಸ್.ಡಿ.ಆರ್.ಎಪ್. ತಂಡವನ್ನು ಸಹ ಗುಡ್ಡಗಾಡು ಪ್ರದೇಶದ ಹಾಗೂ ನದಿ ತೀರದ ಪ್ರದೇಶಗಳಲ್ಲಿ ಸೂಚಿಸಲಾಗಿದೆ.
ಇನ್ನು ಭಟ್ಕಳವು ಮಳೆಗಾಲದಲ್ಲಿ ಪ್ರವಾಹ ಪರಿಸ್ಥಿತಿ ಇಷ್ಟರ ಮಟ್ಟಿಗೆ ಇಲ್ಲವಾಗಿದ್ದು, ಭಾರಿಯ ಮಳೆಯಿಂದ ಆಕಸ್ಮಿಕ ದೊಡ್ಡ ಪ್ರವಾಹದಲ್ಲಿ ಸಿಲುಕಿರುವುದು ಬೇಸರದ ಸಂಗತಿಯಾಗಿದೆ. ಆದರೆ ಪ್ರವಾಹದಿಂದ ಯಾವುದೇ ಪ್ರಾಣ ಹಾನಿ ಸಂಭವಿಸದೇ ಇರುವುದು ಸಮಾಧಾನಕರ ವಿಚಾರವಾಗಿದೆ. ಮುಟ್ಟಳ್ಳಿಯಲ್ಲಿ ಮಾತ್ರ ಗುಡ್ಡ ಕುಸಿತದಿಂದ ನಾಲ್ವರು ಮ್ರತ ಪಟ್ಟಿದ್ದಾರೆ.

ಪ್ರವಾಹ ಸ್ಥಳಗಳಿಗೆ ಶಾಸಕ ಸುನೀಲ ನಾಯ್ಕ ಬೇಟಿ ನೀಡಿ ಪ್ರವಾಹ ಪರಿಸ್ಥಿತಿ ವೀಕ್ಷಿಸಿ ಮಾತನಾಢಿದರು 25 ವರ್ಷಗಳ ಇತ್ತೀಚಿನ ದಿನದಲ್ಲಿ ಈ ರೀತಿಯ ಭಾರಿ ಪ್ರವಾಹ ಪರಿಸ್ಥಿತಿಯ ಮಳೆಯು ಬಂದಿಲ್ಲವಾಗಿದ್ದು, 12 ತಾಸಿಗೂ ಅಧಿಕ ಸಮಯ ಸುರಿದ ಮಳೆಗೆ ಭಟ್ಕಳದ ಸಾಕಷ್ಟು ಕಡೆಗೆ ಹಾನಿ ಸಂಭವಿಸಿದೆ.
ಮನೆಗಳಿಗೆ ನೀರು ನುಗ್ಗಿದ್ದು ಹೊರತುಪಡಿಸಿ ಕಳೆದ ಕೆಲ ದಿನದ ಹಿಂದೆ ಸುರಿದ ಮಳೆಗೆ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲವಾಗಿತ್ತು. ಆದರೆ ಒಂದು ದಿನದ ಮಳೆಗೆ ಭಟ್ಕಳ ಅಕ್ಷರಶಃ ಜಲಾವ್ರತಗೊಂಡಿದೆ. ಅಂದಾಜು 4 ಸಾವಿರಕ್ಕೂ ಅಧಿಕ ಮನೆಗಳಿಗೆ ನೀರು ನುಗ್ಗಿರುವ ಮಾಹಿತಿ ಲಭ್ಯವಾಗಿದೆ. ಅದರಂತೆ ಮುಟ್ಟಳ್ಳಿಯ ಮನೆಯ ಮೇಲೆ ಗುಡ್ಡ ಕುಸಿತ ಪ್ರಕರಣದಲ್ಲಿ ನಾಲ್ವರು ಮ್ರತಪಟ್ಟಿದ್ದು, ರಸ್ತೆಗಳೆಲ್ಲ ಜಲಾವ್ರತಗೊಂಡ ಹಿನ್ನೆಲೆ ಕಾರ್ಯಾಚರಣೆಗೆ ಅಡ್ಡಿಯಾಗಿದೆ. ಮ್ರತರ ಕುಟುಂಬಕ್ಕೆ ಪರಿಹಾರದ ವಿಚಾರದಲ್ಲಿ ಈಗಾಗಲೇ ಸ್ಥಳದಿಂದಲೇ ದೂರವಾಣಿ ಕರೆ ಮೂಲಕ ಮುಖ್ಯಮಂತ್ರಿಗಳಿಗೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಿಗೆ ಮಾಹಿತಿ ನೀಡಿದ್ದು 15 ದಿನದೊಳಗಾಗಿ ಹಾನಿಯಾದ ಮನೆಗಳಿಗೆ ಪರಿಹಾರ ನೀಡುವ ಭರವಸೆ ನೀಡಿದ್ದಾರೆ .

error: