
ಭಟ್ಕಳ ತಾಲೂಕಾ ಆಡಳಿತ, ತಾಲೂಕಾ ಪಂಚಾಯತ, ಪುರಸಭೆ ಭಟ್ಕಳ ಹಾಗೂ ಜಾಲಿ ಪಟ್ಟಣ ಪಂಚಾಯತ ಇವರ ಸಂಯುಕ್ತ ಆಶ್ರಯದಲ್ಲಿ ಭಟ್ಕಳ ತಾಲೂಕಾ ಕ್ರೀಡಾಂಗಣದಲ್ಲಿ 76ನೇ ಸ್ವಾತಂತ್ರ‍್ಯೋತ್ಸವ ದಿನಾಚರಣೆ ಆಚರಿಸಿದರು.
76ನೇ ಸ್ವಾತಂತ್ರ‍್ಯೋತ್ಸವ ದಿನಾಚರಣೆಯ ಧ್ವಜಾರೋಹಣವನ್ನು ಸಹಾಯಕ ಆಯುಕ್ತೆ ಮಮತಾ ದೇವಿ ಜಿ.ಎಸ್ ನೆರವೇರಿಸಿ ಮಾತನಾಡಿದ ಅವರು ಸ್ವಾತಂತ್ರ‍್ಯ ದಿನಾಚರಣೆಯನ್ನು ತ್ಯಾಗ ಬಲಿದಾನಗಳ ಕಾರಣಗಳಿಂದಾಗಿ ಬ್ರಿಟಿಷರ ದಾಸ್ಯದ ಸಂಕೋಲೇಯಿAದ ಬಿಡುಗಡೆಯಾಗಿರುವ ಸ್ವಾತಂತ್ರ‍್ಯ ಭಾರತಕ್ಕಾಗಿ ಕಾರಣೀಭೂತರಾಗಿರುವವರಿಗೆ ಗೌರವ ಅರ್ಪಿಸುವ ಸುದಿನವಾಗಿದೆ. ಆಜಾದಿ ಕಾ ಅಮೃತ ಮಹೋತ್ಸವ ಹರ್ ಘರ್ ತಿರಂಗಾ ಶೀರ್ಷಿಕೆ ಅಡಿ ಪ್ರತಿ ಮನೆ, ಸರ್ಕಾರಿ ಕಚೇರಿ, ಸರ್ಕಾರೇತರ ಕಟ್ಟಡಗಳ ಮೇಲೆ ತ್ರಿವರ್ಣ ಧ್ವಜ ಹಾರಿಸಿದ್ದು. ಪುರಾತತ್ವ ಇಲಾಖೆಯ 150 ಸ್ಮಾರಕದ ಮೇಲೆ ತ್ರಿವರ್ಣ ಧ್ವಜದ ವಿದ್ಯುತ್ ಅಲಂಕಾರದಿAದ ಕಂಗೊಳಿಸಿರುವುದನ್ನು ನೋಡಿದ್ದೇವೆ ಎಂದ ಅವರು ಈ ದಿನ ಮಹಾತ್ಮಾ ಗಾಂಧೀಜಿಯವರ ಸತ್ಯಾಗ್ರಹ, ಶಾಂತಿ ಮತ್ತು ಅಹಿಂಸೆ ಭಗತ್ ಸಿಂಗರ ಇನ್ ಕಿಲ್ಲಾ ಬಾದ್ ಜಿಂದಾ ಬಾದ್, ಲಾಲ್ ಬಹದ್ದೂರ್ ಶಾಸ್ತ್ರಿಯವರ ಜೈ ಜವಾನ್ ಜೈ ಕಿಸಾನ್ ಪ್ರತತ್ವಗಳನ್ನು ನೆನೆದು ಸುಭಾಷ್ ಚಂದ್ರ ಬೋಸರ ಗಿವ್ ಮಿ ಯುವರ್ ಬ್ಲಡ್ ಐ ವಿಲ್ ಗಿವ್ ಯುವರ್ ಫ್ರಿಡಂ ರ ನಾಣ್ನುಡಿಗಳಲ್ಲಿ ಅಡಗಿರುವ ಎಲ್ಲಾ ದೇಶ ಪ್ರೇಮವನ್ನು ಸ್ಮರಿಸುವ ದಿನ ವಾಗಿದೆ ಎಂದರು.
ನಂತರ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಶಾಸಕ ಸುನೀಲ ನಾಯ್ಕ ಈ ವರ್ಷದ
ಸ್ವಾತಂತ್ರ‍್ಯೋತ್ಸವ ದಿನಾಚರಣೆ ವಿಶೇಷ ಹಾಗೂ ಅದ್ಭುತ ವಾಗಿದ್ದು ಹರ್ ಘರ್ ತಿರಾಂಗ ಎನ್ನುವ ವಿನೂತನ ಕಾರ್ಯಕ್ರಮದ ಮೂಲಕ ಸ್ವಾತಂತ್ರ‍್ಯ ದಿನಾಚರಣೆ ಆಚರಿಸುತ್ತಿದ್ದಾರೆ. ಅದೇ ರೀತಿ 120ಕೋಟಿಗೂ ಅಧಿಕ ಮನೆಗಳಲ್ಲಿ ತ್ರಿವರ್ಣ ಧ್ವಜವನ್ನು ಹಾರಿಸುವ ಮೂಲಕ ದೇಶದ ಮೇಲೆ ಪ್ರೀತಿಯನ್ನು ತೋರಿಸಿದ್ದಾರೆ. ಅಂದು ಅನೇಕರ ಶ್ರಮ ಬಲಿದಾನದಿಂದ ಹಾಗೂ ಅನೇಕ ಹೋರಾಟಗಾರರ ರಕ್ತದ ಕಲೆಯಿಂದ ನಮಗೆ ಸ್ವಾತಂತ್ರ‍್ಯ ಸಿಕ್ಕಿದೆ. ಅಂಥವರನ್ನು ನೆನಪಿಸಿಕೊಳ್ಳಲು ದಿನವಾಗಿದೆ ಎಂದ ಅವರು ಇತಿಹಾಸವನ್ನು ನೆನಪು ಮಾಡಿಕೊಳ್ಳುವ ಕೆಲಸ ನಾವೆಲ್ಲರೂ ಮಾಡಬೇಕು ಎಂದರು
ಇದಕ್ಕೂ ಪೂರ್ವದಲ್ಲಿ ಪೊಲೀಸ ಇಲಾಖೆ ಹಾಗೂ ಶಾಲಾ ಕಾಲೇಜು ವಿದ್ಯಾರ್ಥಿಗಳಿಂದ ಪಥ ಸಂಚಲನ ನಡೆಯಿತು.ಹಾಗೂ ನೆರೆಹಾವಳಿ ಸಂದರ್ಭದಲ್ಲಿ ಶ್ರಮಿಸಿದ ನುಡಲ್ ಅಧಿಕಾರಿಗಳಿಗೆ ಹಾಗೂ ಗ್ರಾಮ ಲೆಕ್ಕಾಧಿಕಾರಿಗಳಿಗೆ ತಾಲೂಕಾ ಆಡಳಿತವತಿಯಿಂದ ಸನ್ಮಾನಿಸಿ ಗೌರವಿಸಿದರು.

More Stories
ಜನವರಿ 7 ಭಟ್ಕಳ ತಾಲೂಕ 11ನೆ ಸಾಹಿತ್ಯ ಸಮ್ಮೇಳ
ಭಟ್ಕಳ ತಾಲೂಕು ಕಸಾಪದಿಂದ ರಸಪ್ರಶ್ನೆ ಸ್ಪರ್ಧೆ – ಬಹುಮಾನ ವಿತರಣೆ.
ಭಟ್ಕಳದ ಶ್ರೀ ಜ್ಞಾನೇಶ್ವರಿ ಶಿಕ್ಷಣ ಮಹಾವಿದ್ಯಾಲಯದಲಿ ದೀಪದಾನ ಕಾರ್ಯಕ್ರಮ