March 19, 2025

Bhavana Tv

Its Your Channel

ಭಟ್ಕಳದಲ್ಲಿ ಅಪಹರಣವಾದ ಬಾಲಕ ಗೋವಾದಲ್ಲಿ ಪತ್ತೆ; ಪೊಲೀಸ್ ಕಾರ್ಯಾಚರಣೆಗೆ ಶ್ಲಾಘನೆ

ಭಟ್ಕಳ: ಶನಿವಾರ ರಾತ್ರಿ ದುಷ್ಕರ್ಮಿಗಳಿಂದ ಅಪಹರಣಕ್ಕೊಳಗಾದ ಬಾಲಕ ಅಲಿಸಾದ್ (8)ನನ್ನು ಪತ್ತೆ ಹಚ್ಚಲಾಗಿದ್ದು, ಸುರಕ್ಷಿತವಾಗಿ ಭಟ್ಕಳಕ್ಕೆ ಕರೆತರಲಾಗುತ್ತಿದೆ. ಅಪಹರಣ ನಡೆಸಿದ ಆರೋಪಿಗಳ ಪೈಕಿ ಒಬ್ಬನನ್ನು ಬಂಧಿಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಅಪಹರಣಕಾರರು ಬಾಲಕನನ್ನು ಅಪಹರಿಸಿ ಗೋವಾಕ್ಕೆ ಕರೆದೊಯ್ದಿದ್ದರು.ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ವೃತ್ತ ನಿರೀಕ್ಷಕ ದಿವಾಕರ್ ನೇತೃತ್ವದಲ್ಲಿ ಐದು ಪೊಲೀಸ್ ತಂಡಗಳನ್ನು ರಚಿಸಿ ಶೋಧ ಕಾರ್ಯಾಚರಣೆ ನಡೆಸಲಾಗಿತ್ತು.ಸೋಮವಾರ ಬೆಳಿಗ್ಗೆ ಬಾಲಕನನ್ನು ಗೋವಾದಲ್ಲಿ ವಶಪಡಿಸಿಕೊಂಡ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಪ್ರಕರಣದ ಹಿಂದೆ ಇನ್ನಷ್ಟು ಆರೋಪಿಗಳಿದ್ದು, ಅವರ ಬಂಧನಕ್ಕೆ ಬಲೆ ಬೀಸಲಾಗಿದೆ.
ಬಾಲಕನ ಅಪಹರಣಕ್ಕೆ ಸಂಬAಧಿಸಿ ಭಾನುವಾರ ಬಾಲಕ ಶಿವಮೊಗ್ಗದಲ್ಲಿ ಪತ್ತೆಯಾಗಿರುವುದಾಗಿ ಸುದ್ದಿ ಹರಡಿಸಲಾಗಿರುವ ಆರೋಪಿಗಳು ಗೋವಾದಲ್ಲಿ ಬಾಲಕನ ಅಪಹರಣಕ್ಕೆ ಸಂಬAಧಿಸಿ ಭಾನುವಾರ ಬಾಲಕ ಶಿವಮೊಗ್ಗದಲ್ಲಿ ಪತ್ತೆಯಾಗಿರುವುದಾಗಿ ಸುದ್ದಿ ಹರಡಿಸಲಾಗಿದ್ದು, ಸುದ್ದಿ ತಿಳಿದ ಆರೋಪಿಗಳು ಗೋವಾದಲ್ಲಿ ಆರಾಮವಾಗಿದ್ದರು ಎನ್ನಲಾಗಿದೆ. ಆರೋಪಿಗಳ ಬಗ್ಗೆ ವಿವರಗಳು, ಅಪಹರಣದ ಕಾರಣಗಳು ತಿಳಿದು ಬಂದಿಲ್ಲ.

error: