March 18, 2025

Bhavana Tv

Its Your Channel

ಮುಟ್ಟಳ್ಳಿಯಲ್ಲಿ ಗುಡ್ಡ ಕುಸಿತ ಉಂಟಾದ ಪ್ರದೇಶಕ್ಕೆ ಭೂಕುಸಿತ ಅಧ್ಯಯನ ಸಮಿತಿ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಪರಿಶೀಲನೆ

ಭಟ್ಕಳ ತಾಲೂಕಿನ ಮುಟ್ಟಳ್ಳಿಯಲ್ಲಿ ಗುಡ್ಡ ಕುಸಿತ ಉಂಟಾಗಿ ನಾಲ್ವರು ಮೃತ ಪಟ್ಟಿರುವ ಪ್ರದೇಶಕ್ಕೆ ಭೂಕುಸಿತ ಅಧ್ಯಯನ ಸಮಿತಿ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಪರಿಶೀಲಿಸಿದರು.

ಪಶ್ಚಿಮ ಘಟ್ಟ ಸಂರಕ್ಷಣಾ ಕಾರ್ಯಪಡೆಯ ಅಧ್ಯಕ್ಷ ಗೋವಿಂದ ನಾಯ್ಕ, ಉತ್ತರ ಕನ್ನಡ ಜಿಲ್ಲಾ ಪರಿಸರ ಸಂರಕ್ಷಣಾ ಸಮಿತಿ, ವೃಕ್ಷಲಕ್ಷ ಆಂದೊಲನ ಇವರ ಜಂಟಿ ಆಶ್ರಯದಲ್ಲಿ ಪರಿಸರ ತಜ್ಞರ ತಂಡದ ಸದಸ್ಯರಾಗಿ ರಾಜ್ಯ ಸರ್ಕಾರ ನೇಮಿಸಿದ್ದ ಭೂಕುಸಿತ ಅಧ್ಯಯನ ಸಮಿತಿ ಅಧ್ಯಕ್ಷರಾಗಿದ್ದ ಅನಂತ ಹೆಗಡೆ ಅಶೀಸರ, ರಾಜ್ಯ ಸಿ.ಆರ್.ಜೆಡ್ ಪ್ರಾಧಿಕಾರದ ಸದಸ್ಯ ಡಾ| ಸುಭಾಸಚಂದ್ರನ್ ಜೀವವೈವಿಧ್ಯ ಮಂಡಳಿ ಸದಸ್ಯರಾದ ಡಾ| ಪ್ರಕಾಶ ಮೇಸ್ತ, ಪರಿಸರ ವಿಜ್ಞಾನಿ ಡಾ| ಕೇಶವ ಕೊರ್ಸೆ ಕರಾವಳಿ ಪರಿಸರ ಕಾನೂನು ತಜ್ಞ, ಡಾ| ಮಹಾಬಲೇಶ್ವರ ಮುಂತಾದವರು ಅಧಿಕಾರಿಗಳೊಂದಿಗೆ ಭೇಟಿ ನೀಡಿ ಪರಿಶೀಲಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಭೂಕುಸಿತ ಅಧ್ಯಯನ ಸಮಿತಿ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದ ಅನಂತ ಹೆಗಡೆ ಅಶೀಸರ ಮುಟ್ಟಳ್ಳಿಯಲ್ಲಿ ಆಗಿರುವ ಭೂ ಕುಸಿತದಿಂದ ನಿರಾಶ್ರಿತರಾಗುವ 7 ಮನೆಯವರಿಗೆ ಪುನರ್ವಸತಿ ಸೌಲಭ್ಯ ಕಲ್ಪಿಸುವಂತಾಗಬೇಕು. ಗುಡ್ಡಕುಸಿತ ಪ್ರದೇಶದಲ್ಲಿ ಅಧ್ಯಯನವಾಗಬೇಕು, ಮುಂದೆ ಈ ರೀತಿಯಾಗಿ ಕುಸಿಯದಂತೆ ಸೂಕ್ತ ಮುಂಜಾಗ್ರತಾ ಕ್ರಮಕ್ಕೆ ಮುಂದಾಗಬೇಕು ಎಂದರು.
ಈ ರೀತಿಯ ಭೂ ಕುಸಿತಕ್ಕೆ ಮೈಕ್ರೋ ಪ್ಲಾನ್ ಹಾಕಿಕೊಂಡು ಆಯಾ ಪ್ರದೇಶಕ್ಕೆ ಅನುಗುಣವಾಗಿ ಭೂಕುಸಿತ ತಡೆ ಕಾರ್ಯತಂತ್ರವನ್ನು ರೂಪಿಸಬೇಕು. ಇಲ್ಲಿರುವ ಜನರನ್ನು ಬೇರೆ ಕಡೆಗೆ ಹೋಗಿ ಎಂದರೆ ಅವರು ಹೇಗೆ ಹೋಗಬೇಕು, ಅವರಿಗೆ ಮಿಟಿಗೇಶನ್ ಪ್ಲಾ???ನಲ್ಲಿ ಸರಕಾರದ ಮಟ್ಟದಲ್ಲಿ ಪುನರ್ವಸತಿಗೆ ಯೋಜನೆ ರೂಪಿಸಬೇಕು ಎಂದೂ ಅವರು ಅಧಿಕಾರಿಗಳಲ್ಲಿ ತಿಳಿಸಿದರು. ಸರಕಾರ ಇವರನ್ನು ಬೇರೆಡೆಗೆ ಸ್ಥಳಾಂತರಿಸುವ ಮೊದಲು ಕನಿಷ್ಟ ಅವರಿಗೆ ಮನೆ ಕಟ್ಟಿಕೊಳ್ಳುವುದಕ್ಕಾದರೂ ಧನ ಸಹಾಯ ವದಗಿಸಬೇಕು ಎಂದ ಅವರು ಜಿಲ್ಲಾಧಿಕಾರಿಗಳು ಇದೊಂದು ವಿಷೇಶ ಪ್ರಕರಣ ಎಂದು ಪರಿಗಣಿಸಿ ಕ್ರಮ ಕೈಗೊಳ್ಳಬೇಕು ಎಂದರು.
ಪಶ್ಚಿಮಘಟ್ಟ ಕಾರ್ಯಪಡೆಯ ಅಧ್ಯಕ್ಷ ಗೋವಿಂದ ನಾಯ್ಕ ಅವರು ಮಾತನಾಡಿ ಮುಟ್ಟಳ್ಳಿ ಭಾಗದಲ್ಲಿ ಅನೇಕ ವರ್ಷಗಳಿಂದ ವಾಸ್ತವ್ಯ ಮಾಡಿ ಬಂದವರನ್ನು ಮನೆ ಖಾಲಿ ಮಾಡಿ ಎಂದರೆ ಅದು ಸಾಧ್ಯವಾಗುವುದಿಲ್ಲ. ಸರಕಾರ ಅವರಿಗೆ ಪರ್ಯಾಯವಾಗಿ ಉಳಿಯುವ ವ್ಯವಸ್ಥೆ ಮಾಡಬೇಕು. ಕಾಳಜಿಕೇಂದ್ರದಲ್ಲಿ ಖಾಯಂ ಉಳಿಯಲು ಸಾಧ್ಯವಿಲ್ಲ. ಅವರೆಲ್ಲರಿಗೆ ಖಾಯಂ ಆಗಿ ವಾಸ್ತವ್ಯ ಮಾಡಿ ಬರುವ ಕುರಿತು ಬೇರೆಯೇ ವ್ಯವಸ್ಥೆಯಾಗಬೇಕು. ಸರಕಾರಕ್ಕೆ ಸ್ಥಳೀಯವಾಗಿ ಜಿಲ್ಲಾಧಿಕಾರಿಗಳ ಮೂಲಕ ವರದಿ ಸಲ್ಲಿಸಿ ಅದನ್ನು ಮಂಜೂರಿ ಮಾಡಿವುವಲ್ಲಿ ಕ್ರಮ ತೆಗೆದುಕೊಳ್ಳಲಾಗುವುದು ಎಂದರು.
ಸಭೆಯಲ್ಲಿ ಉಪಸ್ಥಿತರಿದ್ದ ರಾಜ್ಯ ಸಿ.ಆರ್.ಜೆಡ್ ಪ್ರಾಧಿಕಾರದ ಸದಸ್ಯ ಡಾ| ಸುಭಾಸಚಂದ್ರನ್ ಇಂತಹ ಪ್ರದೇಶದಲ್ಲಿ ಜೆ.ಸಿ.ಬಿ. ಯಂತ್ರಗಳು, ಅತಿಭಾರದ ವಾಹನಗಳ ಓಡಾಟಕ್ಕೆ ಅವಕಾಶ ನೀಡಬಾರದರು. ಜಿಲ್ಲೆಯಲ್ಲಿಯೇ ಅತೀ ಹೆಚ್ಚು ಮಳೆ ಹಲವಾರು ವರ್ಷದಿಂದ ಭಟ್ಕಳದಲ್ಲಿ ಬೀಳುತ್ತಿದೆ ಎಂದರು.
ಜೀವವೈವಿಧ್ಯ ಮಂಡಳಿ ಸದಸ್ಯರಾದ ಡಾ| ಪ ??ಕಾಶ ಮೇಸ್ತ ಮಾತನಾಡಿ ಇಂತಹ ಪ್ರವಾಹ ಪರಿಸ್ಥಿತಿಯನ್ನು ನಿಭಾಯಿಸುವಲ್ಲಿ ಯುವಕರಿಗೆ ತರಬೇತಿ ನೀಡುವ ಅವಶ್ಯತೆ ಇದೆ ಎಂದರು.
ಪರಿಸರ ವಿಜ್ಞಾನಿ ಡಾ| ಕೇಶವ ಕೊರ್ಸೆ ಭೂ ಕುಸಿತ ಪ್ರದೇಶಗಳಲ್ಲಿ ಮೊದಲೇ ಸೂಚನೆ ನೀಡುವ ವ್ಯವಸ್ಥೆಯನ್ನು ಅಳವಡಿಸಿಕೊಳ್ಳುವ ಅವಶ್ಯಕತೆಯನ್ನು ತಿಳಿಸಿದರು. ಕರಾವಳಿಯಲ್ಲಿ ಇದು ತೀರಾ ಅವಶ್ಯಕ ಎಂದ ಅವರು ಸರಕಾರ ಈ ಕುರಿತು ಚಿಂತನೆ ನಡೆಸುತ್ತಿದೆ ಎಂದರು.
ಕರಾವಳಿ ಪರಿಸರ ಕಾನೂನು ತಜ್ಞ ಡಾ| ಮಹಾಬಲೇಶ್ವರ ಮಾತನಾಡಿ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಅವೈಜ್ಞಾನಿಕವಾಗಿರುವುದರಿಂದ ಪದೇ ಪದೇ ನೆರೆ ಹಾವಳಿಯಾಗುತ್ತಿದೆ ಅದನ್ನು ಸರಿಪಡಿಸುವ ಅಗತ್ಯತೆ ಇದೆ ಎಂದರು.
ಈ ಸಂದರ್ಭದಲ್ಲಿ ತಹಸೀಲ್ದಾರ್ ಡಾ. ಸುಮಂತ್ ಬಿ.ಇ., ಎ.ಸಿ.ಎಫ್. ಕೆ.ಟಿ. ಬೋರಯ್ಯ, ತಾ.ಪಂ. ಕಾ.ನಿ.ಅಧಿಕಾರಿ ಪ್ರಭಾಕರ ಚಿಕ್ಕನಮನೆ, ವಲಯ ಅರಣ್ಯಾಧಿಕಾರಿ ಶರತ್ ಶೆಟ್ಟಿ, ಪಂಚಾಯತ್ ಅಭಿವೃದ್ಧಿ ಅಧಿಕಾರಿ ರಾಜೇಶ್ವರಿ, ಗ್ರಾಮ ಪಂಚಾಯತ್ ಅಧ್ಯಕ್ಷ ಶೇಷಗಿರಿ ನಾಯ್ಕ, ಗ್ರಾಮಸ್ಥರು ಉಪಸ್ಥಿತರಿದ್ದರು.

error: