May 6, 2024

Bhavana Tv

Its Your Channel

ಎಸ್ಪಿ ಸ್ಕ್ವಾಡ್ ನ ಅಧಿಕಾರಿಗಳಿಂದ ನಡೆದ ಹಲ್ಲೆ ಖಂಡನೆ; ಸಿರಿಗನ್ನಡ ಗೆಳೆಯರ ಬಳಗ ಬಸ್ತಿಮಕ್ಕಿ ಮುಡೇಶ್ವರ ದಿಂದ ಮನವಿ

ಭಟ್ಕಳ: ಎಸ್ಪಿ ಸ್ಕ್ವಾಡ್ ನ ಅಧಿಕಾರಿಗಳಿಂದ ನಡೆದ ಹಲ್ಲೆಯನ್ನು ಖಂಡಿಸಿ ಸಿರಿಗನ್ನಡ ಗೆಳೆಯರ ಬಳಗ ಬಸ್ತಿಮಕ್ಕಿ ಮುಡೇಶ್ವರ ಹಾಗೂ ಕರ್ನಾಟಕ ರಕ್ಷಣಾ ವೇದಿಕೆ ಗಜಸೇನೆ ಹೊನ್ನಾವರದಿಂದ ಸಹಾಯಕ ಆಯುಕ್ತರಿಗೆ ಮನವಿಯನ್ನು ಸಲ್ಲಿಸಿದರು

ನಾವು ಸಿರಿಗನ್ನಡ ಗೆಳೆಯರ ಬಳಗ ಎಂಬ ಸಂಘವು ಕಟ್ಟಿ ಸುಮಾರು 10 ರಿಂದ 12 ವರ್ಷವಾಗುತ್ತಿದೆ. ನಮ್ಮ ಸಂಘಟನೆಯಿAದ ಹಲವಾರು ಸಾಮಾಜಿಕ ಕಾರ್ಯಕ್ರಮಗಳನ್ನು ಮಾಡಿರುತ್ತೆವೆ ಹಾಗೂ ಕನ್ನಡ ನಾಡು ನುಡಿಯ ವಿಷಯದಲ್ಲಿ ಯಾರಾದರೂ ತಪ್ಪು ಮಾಹಿತಿಯನ್ನು ಕೊಟ್ಟಲ್ಲಿ ಅವರ ವಿರುದ್ಧದ ಹೋರಾಟವನ್ನು ಮಾಡಿರುತ್ತೇವೆ .ನಮ್ಮ ಸಂಘದ ಅಧ್ಯಕ್ಷರಾದ ವಾಸು ಮಂಜಪ್ಪ ನಾಯ್ಕ ಸುಮಾರು 1 ವರ್ಷದಿಂದ ಅನಾರೋಗ್ಯದಿಂದ ಬಳಲುತ್ತಿದ್ದು ಮಂಗಳೂರಿನ ಸಿಟಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಕೆಲ ದಿನಗಳಿಂದ ಮತ್ತೆ ಹೊಟ್ಟೆನೋವು ಕಾಣಿಸಿಕೊಂಡ ಹಿನ್ನೆಲೆ ಸೆಪ್ಟೆಂಬರ 7 ರ ರಾತ್ರಿ 12 ಗಂಟೆಗೆ ನಮ್ಮ ಸಂಘದ ಅಧ್ಯಕ್ಷರಾದ ವಾಸು ಮಂಜಪ್ಪ ನಾಯ್ಕ ತಮ್ಮ ಸಂಬAಧಿಕರಾದ ಗಣಪತಿ ನಾಯ್ಕ ಇವರೊಂದಿಗೆ ತನ್ನ ಮನೆ ನೀರಗದ್ದೆ ಬಸ್ತಿಮಕ್ಕಿಯಿಂದ ಆಸ್ಪತ್ರೆಗೆ ಹೊಗುವಾಗ ಎನ್.ಎಚ್.66ರ ದೊಡ್ಡಬಲ್ಸೆ ಕ್ರಾಸ್ ನ ಸ್ವಲ್ಪ ದೂರದಲ್ಲಿರುವ ಹವ್ಯಕ ಸಭಾಭವನದ ಸಮೀಪ ಮೂತ್ರ ವಿಸರ್ಜನೆ ಮಾಡಲು ತನ್ನ ಕಾರು ನಿಲ್ಲಿಸಿ ಪುನಃ ಕಾರು ಹತ್ತುವ ಸಮಯದಲ್ಲಿ ಅವರ ಮೇಲಡ ಹಲ್ಲೆ ಮಾಡಿದ್ದಾರೆ, ನಂತರ ಅವರು ಎಸ್ಪಿ ಸ್ಕ್ವಾಡ್ ಕಾರವಾರದವರು ಎಂದು ತಿಳಿದು ಬಂದಿರುತ್ತದೆ .ಎಸ್ಪಿ ಸ್ಕ್ವಾಡ್ ಪಿ.ಎಸ್.ಐ ಪ್ರೇಮನಗೌಡ ಪಾಟೀಲ್, ಮಂಕಿ ಪಿ.ಎಸ್ ಐ ಮನಗುಣಿ, ಭಗವಾನ್ ಇದ್ದು ಒಟ್ಟು 8 ಸಿಬ್ಬಂದಿಗಳು ಇದ್ದರು ಎಂದು ತಿಳಿದು ಬಂದಿದೆ, ಈ ಘಟನೆ ಬಗ್ಗೆ ದೂರು ಕೊಟ್ಟರೂ ಅದನ್ನು ರಜಿಸ್ಟರ್ ಮಾಡದೆ ಎನ್ ಸಿ ಪ್ರಕರಣ ಎಂದು ಮುರ್ಡೇಶ್ವರ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಕೊಂಡಿರುತ್ತಾರೆ. ಈ ರೀತಿಯಲ್ಲಿ ಮಾರಣಾಂತಿಕ ಹಲ್ಲೆ ಮಾಡಿರುವುದು ರಜಿಸ್ಟರ್ ಮಾಡದಿರುವುದು ಖಂಡನೀಯವಾಗಿದೆ .

ಇವರು ಸಿರಿಗನ್ನಡ ಗೆಳೆಯರ ಬಳಗದ ಅಧ್ಯಕ್ಷ ನಾಗಿದ್ದು ಹಾಗೂ ಬೈಲೂರು ಗ್ರಾಮ ಪಂಚಾಯತ್ ಸದಸ್ಯರು ಹಾಗೂ ಸಾಮಾಜಿಕ ಕಾರ್ಯಕರ್ತರಾಗಿದ್ದಾರೆ.ಇಂಥವರಿಗೆ ನ್ಯಾಯ ಸಿಗದಿರುವುದು ಮನುಕುಲಕ್ಕೆ ಅವಮಾನವಾಗಿರುತ್ತದೆ ಆದರೆ ಇದು ಮಾನವ ಹಕ್ಕುಗಳ ಸ್ಪಷ್ಟ ಉಲ್ಲಂಘನೆ ಯಾಗಿರುತ್ತದೆ. ಪೊಲೀಸರು ಅಮಾನುಷವಾಗಿ ನಾಗರಿಕರ ಮೇಲೆ ದಬ್ಬಾಳಿಕೆ ದೌರ್ಜನ್ಯ ನಡೆಸಿ ಕಾನೂನಿಗೆ ವಿರುದ್ಧವಾಗಿರುತ್ತದೆ ಯಾವುದೇ ತಪ್ಪು ಮಾಡದೆ ಒಬ್ಬ ವ್ಯಕ್ತಿಯ ಮೇಲೆ ಹಲ್ಲೆ ನಡೆಸಿದ್ದು ಆರಕ್ಷಕರೇ ಭಕ್ಷಕರಾಗಿಧಕ್ಕೆ ಸ್ಪಷ್ಟ ಉದಾಹರಣೆ ಯಾಗಿ ರುತ್ತದೆ .ಕರ್ತವ್ಯಲೋಪ ಎಸಗಿರುವ ಪೊಲೀಸರ ಮೇಲೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯವರು ಇಲ್ಲಿಯವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ. ಅಲ್ಲದೆ ಸದ್ರಿ ಘಟನೆ ನಡೆದೆ ಇಲ್ಲ ಎಂಬ ಬೇಜವಾಬ್ದಾರಿ ಹೇಳಿಕೆ ಕೊಟ್ಟಿರುತ್ತಾರೆ .ಆದ್ದರಿಂದ ದಯಾಳುಗಳಾದ ತಾವು ಈ ಘಟನೆಗೆ ಕಾರಣವಾದ ಪೊಲೀಸ್ ಅಧಿಕಾರಿಗಳ ಮೇಲೆ ಸೂಕ್ತ ಕ್ರಮ ಕೈಗೊಂಡು ನ್ಯಾಯ ಕೊಡಿಸಬೇಕು ಎಂದು ಮನವಿಯಲ್ಲಿ ಉಲ್ಲೇಖಿಸಿದ್ದಾರೆ .

ನ್ಯಾಯ ದೊರಕದೆ ಇದ್ದಲ್ಲಿ ಮುಂದಿನ ದಿನಗಳಲ್ಲಿ ಉಳಿದ ಕನ್ನಡಪರ ಸಂಘಟನೆಗಳ ನೆರವಿನಿಂದ ಜಿಲ್ಲಾದ್ಯಂತ ಉಗ್ರ ಹೋರಾಟ ಮಾಡುವುದಾಗಿ ತಿಳಿಸಿದ್ದಾರೆ

error: