May 3, 2024

Bhavana Tv

Its Your Channel

ಮಾರುಕೇರಿಯಲ್ಲಿ ಸೆ. 17 ರಂದು ನಡೆಯುವ ಉಚಿತ ಆರೋಗ್ಯ ತಪಾಸಣಾ ಶಿಬಿರದ ಪೂರ್ವಭಾವಿ ಸಭೆ

ಭಟ್ಕಳ : ಮಾರುಕೇರಿ ಹೈಸ್ಕೂಲಿನಲ್ಲಿ ಸೆ 17 ರಂದು ಕೆ ಎಸ್ ಹೆಗ್ಡೆ ಆಸ್ಪತ್ರೆಯವರಿಂದ ನಡೆಯುತ್ತಿರುವ ಉಚಿತ ಆರೋಗ್ಯ ತಪಾಸಣಾ ಶಿಬಿರದ ಕರಪತ್ರ ಬಿಡುಗಡೆಗೊಳಿಸಲಾಯಿತು.
ತಾಲ್ಲೂಕಿನ ಮಾರುಕೇರಿಯ ಎಸ್.ಪಿ ಹೈಸ್ಕೂಲಿನಲ್ಲಿ ಸೆ. 17 ರಂದು ಶನಿವಾರ ಬೆಳಿಗ್ಗೆಯಿಂದ ಮಧ್ಯಾಹ್ನದ ವರೆಗೆ ಮಂಗಳೂರಿನ ಕೆ ಎಸ್ ಹೆಗ್ಡೆ ಆಸ್ಪತ್ರೆಯವರಿಂದ ವಿವಿಧ ಸಂಸ್ಥೆಗಳ ಸಹಯೋಗದಲ್ಲಿ ನಡೆಯುವ ಉಚಿತ ಆರೋಗ್ಯ ತಪಾಸಣಾ ಶಿಬಿರದ ಯಶಸ್ವಿಗೋಸ್ಕರ ಪೂರ್ವಭಾವಿ ಸಭೆ ನಡೆಯಿತು.
ಸಭೆಯಲ್ಲಿ ಉಪಸ್ಥಿತರಿದ್ದ ಎಸ್ಪಿ ಹೈಸ್ಕೂಲ್ ಹಾಗೂ ಮಾರುಕೇರಿ ಸೊಸೈಟಿ ಅಧ್ಯಕ್ಷ ಶ್ರೀಕಂಠ ವಿ ಹೆಬ್ಬಾರ ಮಾತನಾಡಿ, ನಮ್ಮ ಊರಿನಲ್ಲಿ ಪ್ರಪ್ರಥಮವಾಗಿ ಕೆ ಎಸ್ ಹೆಗ್ಡೆ ಆಸ್ಪತ್ರೆಯ ತಜ್ಞ ವೈದ್ಯರ ತಂಡದಿAದ ನಡೆಯುವ ಉಚಿತ ಆರೋಗ್ಯ ತಪಾಸಣಾ ಶಿಬಿರಕ್ಕೆ ಎಲ್ಲರ ಸಹಕಾರದ ಜೊತೆಗೆ ಎಲ್ಲರೂ ಶಿಬಿರದ ಪ್ರಯೋಜವನ್ನು ಪಡೆಯಬೇಕೆಂದರು. ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಎಂ ಆರ್ ಮಾನ್ವಿ ಮಾತನಾಡಿ, ಗ್ರಾಮೀಣ ಭಾಗವಾದ ಮಾರುಕೇರಿಯಲ್ಲಿ ಆರೋಗ್ಯ ತಪಾಸಣಾ ಶಿಬಿರ ನಡೆಯುತ್ತಿರುವುದರಿಂದ ಈ ಭಾಗದ ಜನರಿಗೆ ಆರೋಗ್ಯ ತಪಾಸಣೆ ಮಾಡಿಕೊಳ್ಳಲು ಅನುಕೂಲವಾಗಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಶಿಬಿರದಲ್ಲಿ ಪಾಲ್ಗೊಂಡು ಪ್ರಯೋಜನ ಪಡೆಯಬೇಕೆಂದರು. ಮಾರುಕೇರಿ ಗ್ರಾ.ಪಂ. ಉಪಾಧ್ಯಕ್ಷೆ ನಾಗವೇಣಿ ಗೊಂಡ ಅವರು ಎಲ್ಲರಿಗೂ ಆರೋಗ್ಯ ಮುಖ್ಯವಾಗಿರುವುದರಿಂದ ನಮ್ಮೂರಿನ ಜನತೆ ಶಿಬಿರದ ಸದುಪಯೋಗ ಪಡೆಯಬೇಕೆಂದರು. ಎಸ್ಪಿ ಹೈಸ್ಕೂಲ್ ಕಾರ್ಯದರ್ಶಿ ಹಾಗೂ ಗ್ರಾ.ಪಂ. ಮಾಜಿ ಅಧ್ಯಕ್ಷ ನಾರಾಯಣ ಹೆಬ್ಬಾರ,ಭಟ್ಕಳ ಲ್ಯಾಂಪ್ಸ ಸೊಸೈಟಿ ಅಧ್ಯಕ್ಷ ಮೋಹನ ಗೊಂಡ, ಹೈಸ್ಕೂಲ್ ಮುಖ್ಯ ಶಿಕ್ಷಕ ಪಿ ಟಿ ಚವ್ವಾಣ, ಜಟಕೇಶ್ವರ ಸಮಿತಿಯ ಉಪಾಧ್ಯಕ್ಷ ಕೃಷ್ಣಮೂರ್ತಿ ಹೆಗಡೆ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸೇವಾನಿರತೆ ರೇವತಿ ನಾಯ್ಕ ಅವರು ನಮ್ಮೂರಿನಲ್ಲಿ ನಡೆಯುತ್ತಿರುವ ಆರೋಗ್ಯ ತಪಾಸಣಾ ಶಿಬಿರದಲ್ಲಿ ಹೆಚ್ಚಿನ ಜನರು ಪಾಲ್ಗೊಂಡು ಪ್ರಯೋಜನ ಪಡೆಯುವುದರೊಂದಿಗೆ ಶಿಬಿರವನ್ನು ಯಶಸ್ಸಿಗೊಳಿಸಬೇಕೆಂದು ಕರೆ ನೀಡಿದರು. ರಾಘವೇಂದ್ರ ಹೆಬ್ಬಾರ ಆರೋಗ್ಯ ಶಿಬಿರದ ರೂಪುರೇಷೆಗಳ ಬಗ್ಗೆ ಚರ್ಚಿಸಿ ಅಗತ್ಯ ಸಹಕಾರ ಕೋರಿದರು. ಸಭೆಯಲ್ಲಿ ಹಿರಿಯ ಪತ್ರಕರ್ತ ರಾಧಾಕೃಷ್ಣ ಭಟ್ಟ, ಮಾರುಕೇರಿ ಸೊಸೈಟಿಯ ನಿರ್ದೇಶಕ ನಾರಾಯಣ ಭಟ್ಟ, ಹೂತ್ಕಳದ ಧನ್ವಂತರಿ ವಿಷ್ಣುಮೂರ್ತಿಗಣಪತಿ ದೇವಸ್ಥಾನದ ಪ್ರಧಾನ ಅರ್ಚಕ ಶಂಕರ ಭಟ್ಟ,ಗಜಾನನ ಯುವಕ ಸಂಘದ ಅಧ್ಯಕ್ಷ ರಾಘವೇಂದ್ರ ವಿ ನಾಯ್ಕ, ಯುವ ಮುಖಂಡ ರವಿ ನಾಯ್ಕ, ಮಾರುಕೇರಿ ಸೊಸೈಟಿಯ ಮುಖ್ಯಕಾರ್ಯನಿರ್ವಾಹಕ ಶ್ರೀಧರ ಹೆಬ್ಬಾರ ಮುಂತಾದವರಿದ್ದರು.

error: