May 4, 2024

Bhavana Tv

Its Your Channel

ಭಟ್ಕಳ ಸರಕಾರಿ ಆಸ್ಪತ್ರೆಯಲ್ಲಿ ಅಕ್ಟೋಬರ್ 1 ರಂದು ರಂದು ಸೂಪರ್ ಸ್ಪೆಷಾಲಿಟಿ ಉಚಿತ ಬೃಹತ್ ಆರೋಗ್ಯ ಶಿಬಿರ

ಭಟ್ಕಳ ತಾಲೂಕಿನ ಜನರಿಗೆ ಗುಣಮಟ್ಟದ ಆರೋಗ್ಯ ಸೇವೆಯನ್ನು ಒದಗಿಸುವ ನಿಟ್ಟಿನಲ್ಲಿ ಮಂಗಳೂರಿನ ಶ್ರೀನಿವಾಸ ಮೆಡಿಕಲ್ ಕಾಲೇಜು ಸಹಯೋಗದೊಂದಿಗೆ ಆಕ್ಟೋಬರ್ 1 ರಂದು ಸೂಪರ್ ಸ್ಪೆಷಾಲಿಟಿ ಉಚಿತ ಬೃಹತ್ ಆರೋಗ್ಯ ಶಿಬಿರವನ್ನು ಆಯೋಜಿಸಲಾಗಿದೆ ಎಂದು
ಭಟ್ಕಳ ಸರಕಾರಿ ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ಸವಿತಾ ಕಾಮತ್ ಹೇಳಿದರು.

ಅವರು ಭಟ್ಕಳ ಸರಕಾರಿ ಆಸ್ಪತ್ರೆಯಲ್ಲಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದರು. ಹೃದಯ ಸಮಸ್ಯೆ, ಸ್ತನ ಕ್ಯಾನ್ಸರ್ ಸೇರಿದಂತೆ ವರ್ತಮಾನದಲ್ಲಿ ಜನರಲ್ಲಿ ಹೆಚ್ಚಿನ ಆತಂಕ ಸೃಷ್ಟಿಸಿರುವ ಕಾಯಿಲೆಗಳಿಗೆ ಹೆಚ್ಚಿನ ಒತ್ತನ್ನು ನೀಡಿ ಈ ಶಿಬಿರವನ್ನು ಆಯೋಜಿಸಲಾಗುತ್ತಿದ್ದು, ಆಯುಷ್ಯಾನ್ ಆರೋಗ್ಯ ಕಾರ್ಡ ಅಡಿಯಲ್ಲಿ ಉಚಿತ ಶಸ್ತ್ರ ಚಿಕಿತ್ಸೆಗೂ ಏರ್ಪಾಟು ಮಾಡಲಾಗುವುದು. ಅ. 1ರಂದು ಬೆಳಿಗ್ಗೆ 9 ಗಂಟೆಯಿAದ ಮಧ್ಯಾಹ್ನ 2.30ವರೆಗೆ ಶಿಬಿರ ನಡೆಯಲಿದ್ದು, ಶ್ರೀನಿವಾಸ ಮೆಡಿಕಲ್ ಕಾಲೇಜಿನ ಹಿರಿಯ ಹೃದಯ ರೋಗ ತಜ್ಞ ಡಾ.ಸುಬ್ರಹ್ಮಣ್ಯ, ಮೆಡಿಕಲ್ ಸೂಪರಿಂಟೆAಡೆAಟ್ ಡಾ.ಡೇವಿಡ್. ರುಜಾರಿಯೋ ತಮ್ಮ ತಂಡದೊAದಿಗೆ ಶಿಬಿರದಲ್ಲಿ ಪಾಲ್ಗೊಳ್ಳುತ್ತಿದ್ದು, ಭಟ್ಕಳ ಹಾಗೂ ಸುತ್ತಮುತ್ತಲಿನ ತಾಲೂಕುಗಳ ಜನರು ಈ ಶಿಬಿರದ ಪ್ರಯೋಜನವನ್ನು ಪಡೆದುಕೊಳ್ಳಬೇಕು ಎಂದು ವಿವರಿಸಿದರು. ಶ್ರೀನಿವಾಸ ಮೆಡಿಕಲ್ ಕಾಲೇಜಿನ ಡಾ.ಡೆವಿಡ್ ರುಜಾರಿಯೋ ಮಾತನಾಡಿ, ಶ್ರೀನಿವಾಸ ಮೆಡಿಕಲ್ ಆಸ್ಪತ್ರೆಯು ಕಳೆದ 1 ದಶಕದಿಂದ ಆರೋಗ್ಯ ಸೇವೆ ಸಲ್ಲಿಸುತ್ತಿದ್ದು, ಇದೀಗ ಆಸ್ಪತ್ರೆಯ ಸೂಪರ್ ಸ್ಪೆಶಾಲಿಟಿ ವಿಭಾಗವನ್ನು ಸದೃಢಗೊಳಿಸುವ ಪ್ರಯತ್ನಕ್ಕೆ ಮುಂದಾಗಿದ್ದೇವೆ. ಹೆಚ್ಚಿನ ಜನರಿಗೆ ಆರೋಗ್ಯ ಸೇವೆಯನ್ನು ಒದಗಿಸುವ ನಿಟ್ಟಿನಲ್ಲಿ ಭಟ್ಕಳ ಸರಕಾರಿ ಆಸ್ಪತ್ರೆಯ ಸಹಯೋಗದೊಂದಿಗೆ ಈ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದ್ದೇವೆ. ಸಂಪೂರ್ಣ ಸುರಕ್ಷಾ ಸೌಲಭ್ಯವೂ ಶ್ರೀನಿವಾಸ ಆಸ್ಪತ್ರೆಯಲ್ಲಿ ಲಭ್ಯ ಇದೆ. ಅಲ್ಲದೇ ಬಡ ಜನರಿಗಾಗಿ ಕೇವಲ 50 ರುಪಾಯಿಗೆ 1 ವರ್ಷದ ಅವಧಿಗೆ ಶ್ರೀನಿವಾಸ ಆರೋಗ್ಯ ಕಾರ್ಡನ್ನು ಪರಿಚಯಿಸುತ್ತಿದ್ದು, ಜನರು ಇದರ ಸದುಪಯೋಗ ಪಡೆದುಕೊಳ್ಳಬಹುದು ಎಂದರು. ಡಾ.ಸುಬ್ರಹ್ಮಣ್ಯ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

error: