May 4, 2024

Bhavana Tv

Its Your Channel

ಕಳೆದ 2 ದಿನಗಳಿಂದ ಭಟ್ಕಳ ತಾಲೂಕಿನಾದ್ಯಂತ ಭುಗಿಲೆದ್ದ ಗೇಟ್ ನಿರ್ಮಾಣ ವಿವಾದ, ಕಾಮಗಾರಿ ಸದ್ಯ ಸ್ಥಗಿತ

ಭಟ್ಕಳ: ಕಳೆದ 2 ದಿನಗಳಿಂದ ತಾಲೂಕಿನಾದ್ಯಂತ ಭುಗಿಲೆದ್ದ ಆಸರಕೇರಿ ನಿಶ್ಚಿಲಮಕ್ಕಿ ಶ್ರೀ ತಿರುಮಲ ವೆಂಕಟರಮಣ ದೇವಸ್ಥಾನ ಮಹಾದ್ವಾರ ನಿರ್ಮಾಣ ಹಾಗೂ ಟಿಪ್ಪು ಗೇಟ್ ನಿರ್ಮಾಣ ವಿವಾದ ಕಾಮಗಾರಿ ಸದ್ಯ ಸ್ಥಗಿತಗೊಂಡಿದೆ.

ಕಳೆದ ಹಲವು ದಿನಗಳ ಹಿಂದಷ್ಟೇ ಶಾಸಕ ಸುನೀಲ ನಾಯ್ಕ ತಮ್ಮ ವೈಯಕ್ತಿಕ ವೆಚ್ಚದಲ್ಲಿ ಆಸರಕೇರಿ ನಿಶ್ಚಿಲಮಕ್ಕಿ ಶ್ರೀ ತಿರುಮಲ ವೆಂಕಟರಮಣ ದೇವಸ್ಥಾನ ಮಹಾದ್ವಾರ ನಿರ್ಮಾಣಕ್ಕೆ ಗುದ್ದಲಿ ಪೂಜೆ ನೆರವೇರಿಸಿದ್ದರು. ಬಳಿಕ ಪುರಸಭೆ ವ್ಯಾಪ್ತಿಯ ವಿ.ಟಿ ರೋಡ್ ವೆಂಕಟರಮಣ ದೇವಸ್ಥಾನ ನಮೀಪದ ರಸ್ತೆಯಲ್ಲಿ ಮಹಾದ್ವಾರ ನಿರ್ಮಾಣ ಕಾಮಗಾರಿಯು ಪ್ರಾರಂಭವಾಗಿತ್ತು. ಆದರೆ ಮಹಾದ್ವಾರ ನಿರ್ಮಾಣ ಇನ್ನೊಂದು ಕೋಮಿನವರ ಜನರು ತಕರಾರು ತೆಗೆದಿದ್ದಾರೆ. ಇದಕ್ಕೆ ವಿರುದ್ಧವಾಗಿ ಗುರುವಾರ ಮಧ್ಯಾಹ್ನ ವೇಳೆಗೆ ಹಳೆ ಬಸ್ ನಿಲ್ದಾಣದ ಸುಲ್ತಾನ್ ಸ್ಟ್ರೀಟ್ ಮಾರ್ಗ ಮಧ್ಯೆ ಟಿಪ್ಪು ಸುಲ್ತಾನ್ ಗೇಟ್ ನಿರ್ಮಿಸಲು ಇನ್ನೊಂದು ಕೋಮಿನ ಜನರು ಇಂದು ಸಂಜೆ 5 ಗಂಟೆಗೆ ಹಜ್ರತ್ ಟಿಪ್ಪು ಸುಲ್ತಾನ್ ಗೇಟ್ ಕಾಮಗಾರಿಗೆ ಚಾಲನೆ ನೀಡುವ ಪ್ಲೆಕ್ಸ್ ಹಾಕಿ ಸ್ಥಳದ ಗುರುತು ಮಾಡಿದ್ದರು.

ಆದರೆ ಇಂದು ಬೆಳ್ಳಿಗ್ಗೆ ಟಿಪ್ಪು ಸುಲ್ತಾನ್ ಗೇಟ್ ನಿರ್ಮಾಣ ಕಾಮಗಾರಿ ಚಾಲನೆ ಮಾಡಿದ್ದರಿಂದ ಸ್ಥಳಕ್ಕೆ ತಹಶೀಲ್ದಾರ್, ಪುರಸಭೆ ಮುಖ್ಯಾಧಿಕಾರಿ ಹಾಗೂ ಸಿ.ಪಿ.ಐ ಸ್ಥಳಕ್ಕೆ ಭೇಟಿ ನೀಡಿ ಕೆಲಸವನ್ನು ಸ್ಥಗಿತಗೊಳಿಸಿದರು. ಬಳಿಕ ಮಹಾದ್ವಾರ ನಿರ್ಮಾಣ ಸ್ಥಳ ಮತ್ತು ಟಿಪ್ಪು ಗೇಟ್ ನಿರ್ಮಾಣ ಮಾಡುವ ಸ್ಥಳದಲ್ಲಿ ಬಿಗಿ ಪೊಲೀಸ ಬಂದೋಬಸ್ತ್ ಇರ್ಪಡಿಸಾಲಾಗಿತ್ತು.

ಅಧಿಕಾರಿಗಳಿಗೆ ತರಾಟೆಗೆ ತೆಗೆದುಕೊಂಡ ಭಟ್ಕಳ ನಾಮಧಾರಿ ಸಮಾಜದ ಅಧ್ಯಕ್ಷ ಕೃಷ್ಣ ನಾಯ್ಕ:

ಪುರಸಭೆಯಿಂದ ಮಹಾದ್ವಾರ ನಿರ್ಮಾಣ ಮಾಡಲು ಯಾವುದೇ ಪರವಾನಿಗೆ ಪಡೆಯದ ಹಿನ್ನೆಲೆ ಕಾನೂನಿನ ಪ್ರಕಾರ ಪುರಸಭೆ ಮುಖ್ಯಾಧಿಕಾರಿಗಳು ಆಸರಕೇರಿ ನಿಶ್ಚಿಲಮಕ್ಕಿ ಶ್ರೀ ತಿರುಮಲ ವೆಂಕಟರಮಣ ದೇವಸ್ಥಾನ ಮಹಾದ್ವಾರ ನಿರ್ಮಾಣದ ಕೆಲಸಕ್ಕೆ ಬಳಸಿದ ಸಾಮಗ್ರಿಗಳನ್ನು ಜಪ್ತಿ ಮಾಡಿ ತಮ್ಮ ವಾಹನದಲ್ಲಿ ತುಂಬುವ ವೇಳೆ ಭಟ್ಕಳ ನಾಮಧಾರಿ ಸಮಾಜದ ಅಧ್ಯಕ್ಷ ಕೃಷ್ಣ ನಾಯ್ಕ ಈ ಭಾಗದಿಂದ ಒಂದು ಮೊಳೆಯನ್ನು ಕೂಡ ತೆಗೆದುಕೊಂಡು ಹೋಗಲು ಬಿಡುವುದಿಲ್ಲ ಹೆಣ ಬೇಕಾದ್ರೂ ಬಿಳಲಿ ಎಂದು ಅಧಿಕಾರಿಗಳಿಗೆ ತರಾಟೆಗೆ ತೆಗೆದುಕೊಂಡರು. ಬಳಿಕ ಅಧಿಕಾರಿಗಳು ಸಾಮಗ್ರಿಗಳನ್ನು ಅಲ್ಲೇ ಬಿಟ್ಟು ತೆರಳಿದರು.

ಕಾಮಗಾರಿ ನಡೆಯುತ್ತಿದ್ದ ಸ್ಥಳವನ್ನು ಸಿಜ್ ಮಾಡಿದ ಅಧಿಕಾರಿಗಳು:

ಮಹಾದ್ವಾರ ಹಾಗೂ ಟಿಪ್ಪು ಸುಲ್ತಾನ್ ಗೇಟ್ ನಿರ್ಮಾಣ ಮಾಡುವ ಸ್ಥಳವನ್ನು ತಹಶೀಲ್ದಾರ್ , ಪುರಸಭೆ ಮುಖ್ಯಾಧಿಕಾರಿ ಹಾಗೂ ಸಿ.ಪಿ.ಐ ಮುಂದಾಳತ್ವದಲ್ಲಿಕಾಮಗಾರಿ ನಡೆಸದಂತೆ
ಸ್ಥಳವನ್ನು ಸಿಜ್ ಮಾಡಿ ಟಿಪ್ಪು ಗೇಟ್ ನಿರ್ಮಾಣಕ್ಕೆ ಹಾಕಲಾದ ಪ್ಲೆಕ್ಸ ತೆರವುಗೊಳಿಸಿದರು. ಇದರರಿಂದಾಗಿ ಎರಡು ದಿನಗಳಿಂದ ಗೊಂದಲ ಉಂಟಾದ ಮಹಾದ್ವಾರ ಹಾಗೂ ಟಿಪ್ಪು ಸುಲ್ತಾನ್ ಗೇಟ್ ನಿರ್ಮಾಣ ಕಾಮಗಾರಿಗೆ ಸದ್ಯ ಸ್ಥಗಿತಗೊಂಡಿದೆ.

error: