
ಭಟ್ಕಳ: ಕನ್ನಡ ರಾಜ್ಯೋತ್ಸವ ಹಿನ್ನೆಲೆಯಲ್ಲಿ ಭಟ್ಕಳ ಪಟ್ಟಣದ ಹೃದಯಭಾಗವಾದ ಶಂಸುದ್ದಿನ ವೃತ್ತ ಹಳದಿ, ಕೆಂಪು ಬಣ್ಣದ ಪತಾಕೆಗಳಿಂದ ರಾರಾಜಿಸುತ್ತಿದೆ.

ಆಸರಕೇರಿಯ ಭುವನೇಶ್ವರಿ ಕನ್ನಡ ಸಂಘದ ರಜತ ಮಹೋತ್ಸವದ ಹಿನ್ನೆಲೆಯಲ್ಲಿ ಸಂಘದ ಸದಸ್ಯರು ಪಟ್ಟಣದ ವೃತ್ತವನ್ನು ರಾಜ್ಯೋತ್ಸವ ಆಚರಣೆಯ ಅಂಗವಾಗಿ ಹಳದಿ, ಕೆಂಪು ಪತಾಕೆಗಳಿಂದ ರಾರಾಜಿಸುವಂತೆ ಮತ್ತು ವೃತ್ತದ ಗೋಪುರವನ್ನೂ ಹಳದಿ, ಕೆಂಪು ಬಣ್ಣದ ಪತಾಕೆ ಮತ್ತು ವಿದ್ಯುತ್ ದೀಪಗಳಿಂದ ಅಲಂಕರಿಸಿ ಕಂಗೊಳಿಸುವAತೆ ಮಾಡಿದ್ದಾರೆ.
ಭುವನೇಶ್ವರಿ ಕನ್ನಡ ಸಂಘದ ಸದಸ್ಯರು ಸುಮಾರು ಮರ‍್ನಾಲ್ಕು ತಾಸುಗಳ ಕಾಲ ಶ್ರಮಪಟ್ಟು ಕನ್ನಡ ರಾಜ್ಯೋತ್ಸವಕ್ಕೆ ವೃತ್ತವನ್ನು ರಾರಾಜಿಸುವಂತೆ ಮಾಡಿದ್ದು, ಇವರ ಕಾರ್ಯ ಮೆಚ್ಚುಗೆಗೆ ಪಾತ್ರವಾಗಿದೆ.
ರಾಷ್ಟ್ರೀಯ ಹೆದ್ದಾರಿಯೂ ವೃತ್ತದಲ್ಲೇ ಹಾದು ಹೋಗಿದ್ದರಿ೦ದ ಹಳದಿ, ಕೆಂಪು ಬಣ್ಣದ ಗಳಿಂದ ಕ೦ಗೊಳಿಸುತ್ತಿರುವ ವೃತ್ತವನ್ನು ಹೆದ್ದಾರಿಯಲ್ಲಿ ಸಂಚರಿಸುವ ವಿವಿಧ ಪ್ರದೇಶದ ಜನರು ಹಾಗೂ ಸ್ಥಳೀಯರು ವೀಕ್ಷಿಸಿ ಸಂತಸ ಪಡುತ್ತಿದ್ದಾರೆ. ರಾತ್ರಿ ಸಂದರ್ಭದಲ್ಲಿ ಭಟ್ಕಳ ವೃತ್ತ ಸು೦ದರವಾಗಿ ಕಾಣಿಸುವಂತಾಗಿದೆ.
ಕಳೆದ ಎರಡು ವರ್ಷಗಳಿಂದ ಕೊರೋನಾ ಹಿನ್ನೆಲೆಯಲ್ಲಿ ಕನ್ನಡ ರಾಜ್ಯೋತ್ಸವ ಈ ಬಾರಿ ಸರಳವಾಗಿ ಆಚರಿಸಲಾಗಿದ್ದ ಎಲ್ಲೆಡೆ ಅದ್ಧೂರಿಯಾಗಿ ಆಚರಿಸಲಾಗುತ್ತಿದೆ. ಭಟ್ಕಳದಲ್ಲೂ ಸಂಭ್ರಮದ ರಾಜ್ಯೋತ್ಸವ ನಡೆಸಲಾಗಿದೆ.

More Stories
ಜನವರಿ 7 ಭಟ್ಕಳ ತಾಲೂಕ 11ನೆ ಸಾಹಿತ್ಯ ಸಮ್ಮೇಳ
ಭಟ್ಕಳ ತಾಲೂಕು ಕಸಾಪದಿಂದ ರಸಪ್ರಶ್ನೆ ಸ್ಪರ್ಧೆ – ಬಹುಮಾನ ವಿತರಣೆ.
ಭಟ್ಕಳದ ಶ್ರೀ ಜ್ಞಾನೇಶ್ವರಿ ಶಿಕ್ಷಣ ಮಹಾವಿದ್ಯಾಲಯದಲಿ ದೀಪದಾನ ಕಾರ್ಯಕ್ರಮ