May 5, 2024

Bhavana Tv

Its Your Channel

ಕರ್ತವ್ಯ ನಿರ್ವಹಿಸುತ್ತಿರುವ ಅರಣ್ಯ ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ತಾರತಮ್ಯ ನಡೆಸುತ್ತಿದ್ದಾರೆಂದು ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗೆ ಮನವಿ

ಭಟ್ಕಳ: ಭಟ್ಕಳ ಸಹಾಯಕ ಅರಣ್ಯ ಕ್ಷೇತ್ರದಲ್ಲಿ ಅಧಿಕಾರಿಗಳು ಕರ್ತವ್ಯವೆಸಗುವ ಸಂದರ್ಭದಲ್ಲಿ ತಾರತಮ್ಯ ನಡೆಸಿದ್ದಾರೆ ಎಂದು ತಾಲ್ಲೂಕಿನ ಹೇರೂರು ನಿವಾಸಿಯೋರ್ವರು ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗೆ ಮನವಿ ಸಲ್ಲಿಸಿದ್ದಾರೆ

ಭಟ್ಕಳ ಕ್ಷೇತ್ರದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಅರಣ್ಯ ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ತಾರತಮ್ಯ ಎಸಗುತ್ತಿದ್ದು ಆರ್ಥಿಕವಾಗಿ ಸಬಲರಾಗಿರುವ ಮತ್ತು ಮೇಲ್ಜಾತಿಯವರ ಹಿತಾಸಕ್ತಿಯನ್ನು ಕಾಯ್ದು ಕೊಡುತ್ತಿದ್ದು ಆರ್ಥಿಕವಾಗಿ ಹಿಂದುಳಿದ ಹಾಗೂ ಹಿಂದುಳಿದ ಜಾತಿಯವರಿಗೆ ತೊಂದರೆ ಕೊಡುತ್ತಿದ್ದಾರೆ. ಇದಕ್ಕೆ ಉದಾಹರಣೆಯೆಂದರೆ ಭಟ್ಕಳ ತಾಲ್ಲೂಕಿನ ಅರಣ್ಯ ಅತಿಕ್ರಮಣದಾರರು ಈಗಾಗಲೇ ಸಾಕಷ್ಟು ಸಂಕಷ್ಟದಲ್ಲಿ ಜೀವನ ನಡೆಸುತ್ತಿದ್ದು. ಹೀಗಿರುವಾಗ ನಿಮ್ಮ ಇಲಾಖೆಯ
ಅಧಿಕಾರಿಗಳು ಒಂದು ಕಣ್ಣಿಗೆ ಬೆಣ್ಣೆ ಇನ್ನೊಂದು ಕಣ್ಣಿಗೆ ಸುಣ್ಣ ಮಾಡುತ್ತಿದ್ದಾರೆ. ನಾನು ನಮ್ಮ ಗ್ರಾಮದ ಹೆರೂರು ಎಳಬಾರಿನಲ್ಲಿ ಮಾಲ್ಕಿ ಜಾಗಕ್ಕೆ ಲಗತ್ತಾಗಿರುವ ಅರಣ್ಯ ಸರ್ವೇ ನಂಬರ್ ೧೨ ರಲ್ಲಿ ಸಣ್ಣದಾದ ಮನೆಯೊಂದನ್ನು ನಿರ್ಮಿಸುವ ಹಂತದಲ್ಲಿ ಅರಣ್ಯ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಸಂಪೂರ್ಣ ನೆಲ ಸಮಗೊಳಿಸಿದ್ದಾರೆ. ಆದರೆ ನಮ್ಮ ಗ್ರಾಮದ ಪಕ್ಕದ ಗ್ರಾಮವಾದ ಹದ್ಲೂರ ಗ್ರಾಮದ ಅರಣ್ಯ ಸರ್ವೇ ನಂಬರ್ ೧೨ ರಲ್ಲಿ ಖಾಸಗಿ ವ್ಯಕ್ತಿಯೋರ್ವರು ೧೫೦೦ ಸ್ಕ್ವಾರ್ ಪಿಟ್ ಅಳತೆಯ ಭವ್ಯವಾದ ಆರ್ ಸಿಸಿ ಮನೆಯನ್ನು ನಿರ್ಮಿಸುತ್ತಿದ್ದು ಈಗ ಸಜ್ಜ ಹಂತಕ್ಕೆ ಬಂದಿರುತ್ತದೆ. ಈ ಬಗ್ಗೆ ನಾನು ನಿಮ್ಮ ಇಲಾಖೆ ಸಹಾಯಕ ಅರಣ್ಯಾಧಿಕಾರಿಗಳಿಗೆ ದೂರು ನೀಡಿದ್ದು. ಆದರೆ ಈ ಅಧಿಕಾರಿಗಳು ನಾನು ನೀಡಿರುವ ದೂರಿಗೆ ಯಾವುದೇ ಸ್ಪಂದನೆ ನೀಡುತ್ತಿಲ್ಲ. ಇದು ಒಂದು ಕಣ್ಣಿಗೆ ಬೆಣ್ಣೆ ಇನ್ನೊಂದು ಕಣ್ಣಿಗೆ ಸುಣ್ಣ ಎಂಬAತೆ ಆಗಿದೆ. ನಾನು ಆರ್ಥಿಕವಾಗಿ ದುರ್ಬಲನಾಗಿದ್ದು. ಹಿಂದುಳಿದ ವರ್ಗದವನಾಗಿದ್ದೇನೆ. ಅದೇ ಖಾಸಗಿ ವ್ಯಕ್ತಿ ಆರ್ಥಿಕವಾಗಿ ಹಾಗೂ ರಾಜಕೀಯವಾಗಿ ಸಬಲರಾಗಿದ್ದು ಮೇಲ್ವರ್ಗದವರಾಗಿದ್ದಾರೆ. ಇದಕ್ಕೆ ಕಾರಣ ನಿಮ್ಮ ಇಲಾಖೆ ಅಧಿಕಾರಿಗಳು ಸಿಬ್ಬಂದಿಗಳು ನನ್ನ ಮನೆಯನ್ನು ನೆಲಸಮ ಮಾಡಿದರೆ. ನನ್ನ ಮನೆಯ ಕಾನೂನು ಬಾಹಿರವಾಗಿ ನಿರ್ಮಾಣದ ಕಾರಣ ಇಲಾಖಾ ಅಧಿಕಾರಿಗಳು ನೆಲಸಮ ಮಾಡಿದ್ದೇ ಹೌದಾದರೆ ನಾನು ದೂರು ಅರ್ಜಿ ಸಲ್ಲಿಸಿದರೂ ಕೂಡ ಕಾನೂನು ಬಾಹಿರವಾಗಿ ನಿರ್ಮಾಣ ಮಾಡುತ್ತಿರುವ ಮನೆಯನ್ನು ಯಾಕೆ ನೆಲಸಮ ಮಾಡಿಲ್ಲ. ಎಂಬುದು ನನ್ನ ಪ್ರಶ್ನೆಯಾಗಿದೆ. ಇದು ನಿಮ್ಮ ಇಲಾಖೆ ಅಧಿಕಾರಿಗಳು ಕರ್ತವ್ಯ ನಿರ್ವಹಿಸುತ್ತಿರುವ ಸಂದರ್ಭದಲ್ಲಿ ಮೇಲು ವರ್ಗದವರ ಹಿತಾಸಕ್ತಿ ಕಾಯ್ದುಕೊಳ್ಳಲು ಹಾಗೂ ಹಣದ ಆಮಿಷಕ್ಕೆ ಮಾರು ಹೋಗಿರುವುದು ಸ್ಪಷ್ಟವಾಗುತ್ತದೆ. ಆದ್ದರಿಂದ ದಕ್ಷ ಅಧಿಕಾರಿಗಳಾದ ತಾವು ನನ್ನ ಮನೆಯನ್ನು ನಿಮ್ಮ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಯಾವ ಕಾನೂನು ಅಡಿಯಲ್ಲಿ ಅರಣ್ಯ ಕಾನೂನು ವಿರುದ್ಧ ನಿರ್ಮಾಣವಾಗುತ್ತಿರುವ ಖಾಸಗಿ ವ್ಯಕ್ತಿಯವರ ನಿರ್ಮಾಣ ಹಂತದ ಮನೆಯನ್ನು ಕೆಡವಿ ಹಾಕಿ ಕಾನೂನಿನ ಮೂಲಕ ಕ್ರಮ ಕೆ?ಗೊಳ್ಳಬೇಕು ಹಾಗೂ ನಿಮ್ಮ ಇಲಾಖೆ ಅಧಿಕಾರಿಗಳು ಮಾಡಿರುವ ಒಂದು ಕಣ್ಣಿಗೆ ಬೆಣ್ಣೆ ಇನ್ನೊಂದು ಕಣ್ಣಿಗೆ ಸುಣ್ಣ ಮಾಡಿರುವುದನ್ನು ಸರಿಪಡಿಸಿ ಕರ್ತವ್ಯಲೋಪ ಎಸಗಿರುವ ನಿಮ್ಮ ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು. ಒಂದು ವೇಳೆ ತಾವು ಕ್ರಮ ಕೈಗೊಳ್ಳದಿದ್ದರೆ ನಾನು ಅನಿವಾರ್ಯವಾಗಿ ಹೈಕೋರ್ಟ್ ಮೊರೆ ಹೋಗಿ ನ್ಯಾಯವನ್ನು ಪಡೆದುಕೊಳ್ಳಬೇಕಾಗುತ್ತದೆ ಎಂದು ಈ ಮೂಲಕ ಮನವಿಯಲ್ಲಿ ಉಲ್ಲೇಖಿಸಿದ್ದಾರೆ

error: