May 8, 2024

Bhavana Tv

Its Your Channel

ಭಟ್ಕಳ ತಾಲೂಕು ಕಸಾಪದಿಂದ ಕನಕಜಯಂತಿ ಆಚರಣೆ

ಭಟ್ಕಳ :- ಮುರ್ಡೆಶ್ವರದ ಜನತಾ ವಿದ್ಯಾಲಯ ಹಾಗೂ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಕನಕ ಜಯಂತಿಯನ್ನು ಆಚರಿಸಲಾಯಿತು.

ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಕಸಾಪ ತಾಲೂಕಾಧ್ಯಕ್ಷ ಗಂಗಾಧರ ನಾಯ್ಕ ಮಾತನಾಡಿ ಕನಕದಾಸರು ಕೀರ್ತನಕಾರ, ಸಾಹಿತಿ,ಕವಿ,ದಾರ್ಶನಿಕ, ಸಮಾಜ ಸುಧಾರಕರಾಗಿ ಬಹುಮುಖ ವ್ಯಕ್ತಿತ್ವದಿಂದ ಈ ನಾಡಿನ ಇತಿಹಾಸದಲ್ಲಿ ಚಿರಸ್ಥಾಯಿಯಾಗಿದ್ದಾರೆ. ಮೌಢ್ಯ, ಅಂಧಶ್ರದ್ಧೆ, ಕಂದಾಚಾರ, ಅಸಮಾನತ ತಾಂಡವವಾಡುತ್ತಿದ್ದ ಕಾಲಘಟ್ಟದಲ್ಲಿ ಸಾಹಿತ್ಯದ ಮೂಲಕ ಸಮಾಜ ಸುಧಾರಣೆಗೆ ಕಾರಣರಾದರರು. .ಇಂಥ ಮಹಾನುಭಾವರ ಜಯಂತಿಗಳು ಅವರ ವ್ಯಕ್ತಿತ್ವ, ಸಾಧನೆ, ಸಮಾಜಕ್ಕೆ ಅವರ ಕೊಡುಗೆಗಳನ್ನು ಸ್ಮರಿಸಿಕೊಂಡು ನಮ್ಮ ವ್ಯಕ್ತಿತ್ವವನ್ನೂ ಮತ್ತಷ್ಟು ಎತ್ತರಕ್ಕೆ ಏರಿಸಿಕೊಳ್ಳಲು ಪ್ರೇರಣೆ ನೀಡುತ್ತವೆ ಎಂದರಲ್ಲದೇ ಕನಕದಾಸರ ಭಕ್ತಿರಸ, ತತ್ವ ಬೋಧನೆ, ಸಾಮರಸ್ಯ ಮತ್ತು ತಾಳ್ಮೆ ಮುಂತಾದ ಜೀವನ ಪಾಠಗಳನ್ನು ಹೇಳುವ ಆಯ್ದ ಕೆಲವು ಕೀರ್ತನೆಗಳ ಸಾಲುಗಳನ್ನು ಹಾಡಿದರರು. ವೇದಿಕೆಯಲ್ಲಿ ಉಪಸ್ಥಿತರಿದ್ದ ಸಾಹಿತಿ ಮಾನಾಸುತ ಶಂಭು ಹೆಗಡೆ ಮಾತನಾಡಿ ಕನಕದಾಸರ ಜೀವನ ಸಾದನೆಗಳ ಕುರಿತು ಮಾತನಾಡಿ ಕನಕದಾಸರ ಕುರಿತಾದ ಸ್ವರಚಿತ ಕವಿತೆ ವಾಚಿಸಿದರು. ಕಸಾಪ ಕಾರ್ಯಕಾರಿ ಸಮಿತಿ ಸದಸ್ಯ ಎಂ.ಪಿ.ಬAಢಾರಿ ಕನಕದಾಸರ ಜೀವನದ ಸ್ವಾರಸ್ಯಕರ ಘಟನೆಗಳ ಕುರಿತು ತಿಳಿಸಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮುಖ್ಯ ಶಿಕ್ಷಕಿ ಆಶಾ ಕಲ್ಮನೆ ಮಾತನಾಡಿ ಸಾಹಿತ್ಯ ಪರಿಷತ್ತಿನ ಸಹಯೋಗದಲ್ಲಿ ಕನಕದಾಸ ಜಯಂತಿಯನ್ನು ಅರ್ಥಪೂರ್ಣವಾಗಿ ಆಚರಿಸಿದಂತಾಗಿದ್ದು ಕನಕದಾಸರ ಬದುಕು ಸಾಹಿತ್ಯ ನೀಡುವ ಸಂದೇಶವು ಪ್ರೇರಣಾದಾಯಕವಾಗಿದೆ ಎಂದರು. ಕಾರ್ಯಕ್ರಮದ ವೇದಿಕೆಯಲ್ಲಿ ಶಿಕ್ಷಕರಾದ ಪ್ರಹ್ಲಾದ ಮತ್ತು ರವಿಶಂಕರ್ ಉಪಸ್ಥಿತರಿದ್ದರು. ಶಿಕ್ಷಕ ಮಹೇಶ ನಿರೂಪಿಸಿ ವಂದಿಸಿದರು. ಹೇಮಶ್ರೀ ಸಂಗಡಿಗರು ಸ್ವಾಗತಿಸಿದರು.ಕಾರ್ಯಕ್ರಮದ ಆರಂಭದಲ್ಲಿ ಕನಕದಾಸರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಲಾಯಿತು. ಶಾಲಾ ವಾಚನಾಲಯಕ್ಕೆ ಮಾನಾ ಹಾಗೂ ಮಾನಾಸುತರ ಕೃತಿಗಳನ್ನು ನೀಡಲಾಯಿತು. ಕಾರ್ಯಕ್ರಮದಲ್ಲಿ ಶಾಲಾ ಶಿಕ್ಷಕ ವೃಂದ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಕಾರ್ಯಕ್ರಮದ ಕೊನೆಯಲ್ಲಿ ವಿದ್ಯಾರ್ಥಿಗಳಿಗೆ ಸಿಹಿ ವಿತರಿಸಲಾಯಿತು.

error: