March 29, 2025

Bhavana Tv

Its Your Channel

ಭಟ್ಕಳ ತಾಲೂಕಿನಲ್ಲಿ ಬಿಗಡಾಯಿಸುತ್ತಿರುವ ಸಂಚಾರ ವ್ಯವಸ್ಥೆ, ಪೊಲೀಸ್ ಇಲಾಖೆ ಸುಗಮ ಸಂಚಾರಕ್ಕೆ ವಿವಿಧ ಕ್ರಮ

ಭಟ್ಕಳ ತಾಲೂಕಿನಲ್ಲಿ ದಿನದಿಂದ ದಿನಕ್ಕೆ ಸಂಚಾರ ವ್ಯವಸ್ಥೆ ಬಿಗಡಾಯಿಸುತ್ತಿರುವುದನ್ನು ಅರಿತ ಪೊಲೀಸ್ ಇಲಾಖೆ ಸುಗಮ ಸಂಚಾರಕ್ಕೆ ವಿವಿಧ ಕ್ರಮಗಳನ್ನು ಮುಂದುವರೆಸಿದ್ದು, ಇಲ್ಲಿನ ಪಿಎಲ್‌ಡಿ ಬ್ಯಾಂಕ್ ಎದುರು ನೂತನವಾಗಿ ನಿಯಂತ್ರಣಾ ಕೇಂದ್ರ ಸ್ಥಾಪನೆಗೆ ಚಾಲನೆ ನೀಡಿದೆ.

ಭಟ್ಕಳ ಶಹರ ಠಾಣಾ ಸಿಪಿಐ ದಿವಾಕರ ನೇತೃತ್ವದಲ್ಲಿ ಪಿಎಲ್‌ಡಿ ಬ್ಯಾಂಕ್ ಎದುರು ರಾಷ್ಟ್ರೀಯ ಹೆದ್ದಾರಿ ಹಾಗೂ ಹಳೆಬಸ್ ನಿಲ್ದಾಣ ರಸ್ತೆ ಕೂಡುವ ಸ್ಥಳದಲ್ಲಿ ಇದ್ದ ಹಳೆಯ ಕಟ್ಟೆಯೊಂದನ್ನು
ತೆರವುಗೊಳಿಸಲಾಗಿದ್ದು, ಹೊಸ ದಾಗಿ ಚಿಕ್ಕ ಸೂರನ್ನು ನಿರ್ಮಿಸಿ ಸಂಚಾರ ನಿಯಂತ್ರಣಕ್ಕೆ ವ್ಯವಸ್ಥೆ ಮಾಡಿಕೊಳ್ಳಲಾಗುತ್ತಿದೆ. ಇದರಿಂದಾಗಿ ಪಿಎಲ್‌ಡಿ ಬ್ಯಾಂಕ್ ಎದುರು ವಾಹನ ದಟ್ಟಣೆ ಕಡಿಮೆಯಾಗು ವುದರೊಂದಿಗೆ ರಸ್ತೆ ದಾಟಲು ಇದ್ದ ಆತಂಕ ದೂರವಾಗಬಹುದು ಎಂದು ನಿರೀಕ್ಷಿಸಲಾಗಿದೆ. ವಾರದ ಹಿಂದೆ ಯಷ್ಟೇ ಭಟ್ಕಳ ಸಂಶುದ್ದೀನ್ ಸರ್ಕಲ್‌ನಲ್ಲಿ ಬ್ಯಾರಿಕೇಡ್ ಹಾಗೂ ದ್ವಿಭಾಜಕ ಅಳವಡಿಸಿ ಸಂಚಾರ ಗೊಂದಲ ತಡೆಗೆ ಕ್ರಮ ಕೈಗೊಂಡಿದ್ದಲ್ಲಿ ಸ್ಮರಿಸಿಕೊಳ್ಳಬಹುದು.

error: