March 29, 2025

Bhavana Tv

Its Your Channel

ಡಿಸೆಂಬರ್ 7ರ ಬುಧವಾರದಂದು ಶ್ರೀಧರ ಪದ್ಮಾವತಿ ದೇವಿಯ ರಥೋತ್ಸವ

ಭಟ್ಕಳ : ಡಿಸೆಂಬರ್ 7ರ ಬುಧವಾರ ತಿಮ್ಮಯ್ಯ ದಾಸರಿಂದ ಸಂಸ್ಥಾಪಿಸಲ್ಪಟ್ಟ ಶ್ರೀಧರ ಪದ್ಮಾವತಿ ದೇವಿಯ ಸನ್ನಿಧಿಯಲ್ಲಿ ದತ್ತಜಯಂತಿ ಉತ್ಸವ ಹಾಗೂ ಶ್ರೀ ಪದ್ಮಾವತಿ ದೇವಿಯ ರಥೋತ್ಸವವು ನಡೆಯಲಿದೆ.

ಆ ದಿನ ಮುಂಜಾನೆಯಿAದ ದೇವಿಯ ಸನ್ನಿಧಿಯಲ್ಲಿ ವಿವಿಧ ಧಾರ್ಮಿಕ ಕಾರ್ಯಗಳು ನಡೆಯಲಿದ್ದು ಮಧ್ಯಹ್ನ 12.30ಕ್ಕೆ ಮಹಾಪೂಜೆ, ತೀರ್ಥ ಪ್ರಸಾದ ವಿತರಣೆ ನಂತರ ಅನ್ನಸಂತರ್ಪಣೆ ನಡೆಯಲಿದೆ. ಸಂಜೆ 4 ಗಂಟೆಗೆ ಪುರಬೀದಿಯಲ್ಲಿ ಪದ್ಮಾವತಿ ದೇವಿಯ ರಥೋತ್ಸವದ ಮೆರವಣಿಗೆ ನಡೆಯಲಿದೆ. ರಥೋತ್ಸವದ ಮೆರವಣಿಗೆ ದೇವಾಲಯದಿಂದ ಹೊರಟು ರಘುನಾಥ ರಸ್ತೆಯ ಮೂಲಕ ಪುಷ್ಪಾಂಜಲಿ ಚಿತ್ರಮಂದಿರ ಅಲ್ಲಿಂದ ಹಿಂದಿರುಗಿ ವೀರವಿಠಲ ರಸ್ತೆಯ ವಡೇರಮಠದ ಮಾರ್ಗ ನಾಡಘರ ದೇವಸ್ಥಾನ ನೆಹರು ರಸ್ತೆಯ ಮೂಲಕ ಹೂವಿನ ಚೌಕ ಹಾಗೆ ಮುಖ್ಯರಸ್ತೆಯ ಮೂಲಕ ಅರ್ಬನಬ್ಯಾಂಕ ತಲುಪಿ ಅಲ್ಲಿಂದ ಹಿಂದಿರುಗಿ ಕಳಿಹನುಮಂತ ದೇವಸ್ಥಾನದ ಮೂಲಕ ದೇವಾಲಯಕ್ಕೆ ಹಿಂದಿರುಗಲಿದೆ. ಈ ಎಲ್ಲ ಕಾರ್ಯಕ್ರಮಗಳಿಗೆ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಶ್ರೀದೇವರ ಪ್ರಸಾದ ಸ್ವೀಕರಿಸಬೇಕೆಂದು ದೇವಾಲಯದ ಧರ್ಮದರ್ಶಿಗಳು ಕೋರಿದ್ದಾರೆ.

error: