March 29, 2025

Bhavana Tv

Its Your Channel

ಮೀನುಗಾರನೋರ್ವ ಆಕಸ್ಮಿಕ ಕಾಲು ಜಾರಿ ಸಮುದ್ರಕ್ಕೆ ಬಿದ್ದು ಸಾವು

ಭಟ್ಕಳ ತಾಲೂಕಿನ ಅಳ್ವೆಕೋಡಿ ಬಂದರಿನಿದ ಮೀನಿಗಾರಿಕೆಗೆ ತೆರಳಿದ ದೋಣಿಯೊಂದರಲ್ಲಿ ತೆರಳಿದ್ದ ಮೀನುಗಾರನೋರ್ವ ಅಕಸ್ಮಾತ್ ಕಾಲು ಜಾರಿ ಸಮುದ್ರಕ್ಕೆ ಬಿದ್ದು ಮೃತ ಪಟ್ಟ ಘಟನೆ ಸೋಮವಾರ ರಾತ್ರಿ ಸಂಭವಿಸಿದೆ.

ಮೃತನನ್ನು ಹೆಬಳೆ ಗ್ರಾಮದ ಕುಕ್‌ನೀರ್ ನಿವಾಸಿ ರಾಮಚಂದ್ರ ಅಣ್ಣಪ್ಪ ಮೊಗೇರ (66) ಎಂದು ಗುರುತಿಸಲಾಗಿದೆ. ಈತನು ಭಾನುವಾರ ಅಳ್ವೇಕೋಡಿ ಬಂದರಿನಿAದ ಮತ್ಸöದೀಪ ಎನ್ನುವ ಮೀನುಗಾರಿಕಾ ದೋಣಿಯಲ್ಲಿ ಅರಬ್ಬೀ ಸಮುದ್ರಕ್ಕೆ ಮೀನುಗಾರಿಕೆಗೆಂದು ತೆರಳಿರುವಾಗ ಸೋಮವಾರ ರಾತ್ರಿ ಮೀನುಗಾರಿಕಾ ಬಲೆಯನ್ನು ಬೀಸುವ ಸಂದರ್ಭದಲ್ಲಿ ಅಕಸ್ಮಾತ್ ಕಾಲು ಜಾರಿ ನೀರಿಗೆ ಬಿದ್ದ ಪರಿಣಾಮ ನೀರಿನಲ್ಲಿ ಮುಳುಗಿ ಮೃತ ಪಟ್ಟಿದ್ದಾನೆ. ಈ ಕುರಿತು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ನಡೆದಿದೆ.

error: