
ಭಟ್ಕಳ : ಅಂಜುಮನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಅಂಡ್ ಮ್ಯಾನೇಜ್‌ಮೆಂಟ್‌ನ ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಷನ್ ಎಂಜಿನಿಯರಿAಗ್ ವಿಭಾಗ ಹಾಗೂ ವಿದ್ಯಾರ್ಥಿಗಳ ವೇದಿಕೆ ಟೆಕ್ನೋವೇಟ್‌ನ ಸಹಯೋಗದೊಂದಿಗೆ ಟೆಕ್ವಿನಾಕ್ಸ್-2022 ಕಾಲೇಜು ಮಟ್ಟದ ಫೆಸ್ಟ್ ಆಯೋಜಿಸಿತ್ತು.
ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದು ಮಾತನಾಡಿದ ಅಬುಧಾಬಿಯ ಎತಿಸಲಾತ್ ಸಂಸ್ಥೆಯಲ್ಲಿನ ಹಿರಿಯ ನೆಟ್‌ವರ್ಕ್ ಇಂಜಿನಿಯರ್ ಮೊಹಮ್ಮದ್ ಹುರೈಸ್ ಶಾಬಂದ್ರಿ ಮಾತನಾಡಿ ಇ-ಸಂಪನ್ಮೂಲಗಳನ್ನು ಬಳಸಿಕೊಂಡು ಜ್ಞಾನವನ್ನು ಪಡೆಯಲು ಹಾಗೂ ತಂತ್ರಜ್ಞಾನದಲ್ಲಿನ ಪ್ರಗತಿಯನ್ನು ಅತ್ಯುತ್ತಮವಾಗಿ ಬಳಸಿಕೊಳ್ಳುವಂತೆ ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಕಾಲೇಜಿನ ಕಾರ್ಯದರ್ಶಿ ಮೊಹಿದ್ದೀನ್ ರುಕ್ನದ್ದೀನ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಇನ್ನೋರ್ವ ಅತಿಥಿ ಡೆಲಾಯ್ಟ್ ಸಂಸ್ಥೆಯ ಅಸೋಸಿಯೇಟ್ ಡೈರೆಕ್ಟರ್ ವಾಸೀಮ್ ಅಹ್ಮದ್ ಮಾತನಾಡಿ ಇಂತಹ ಕಾರ್ಯಕ್ರಮಗಳನ್ನು ಆಯೋಜಿಸುವ ಮಹತ್ವವನ್ನು ತಿಳಿಸಿದರು ಮತ್ತು ಇನ್ನಷ್ಟು ಕಾರ್ಯಕ್ರಮಗಳನ್ನು ಆಯೋಜಿಸಲು ವಿದ್ಯಾರ್ಥಿಗಳನ್ನು ಹುರಿದುಂಬಿಸಿದರು.
ವಿದ್ಯಾರ್ಥಿ ವೇದಿಕೆ ಟೆಕ್ನೋವೇಟ್‌ನ ಅಧ್ಯಕ್ಷ ದರ್ಶನ್ ಆಚಾರ್ಯ ಟೆಕ್ನೋವೇಟ್‌ನ ಚಟುವಟಿಕೆಗಳ ಒಳನೋಟವನ್ನು ನೀಡಿದರು. ಇದೇ ಸಂದರ್ಭದಲ್ಲಿ ಟೆಕ್ನೋವೇಟ್ ಸುದ್ದಿ ಪತ್ರವನ್ನು ಬಿಡುಗಡೆ ಮಾಡಲಾಯಿತು. ಸಂಯೋಜಕ ಪ್ರೊ. ಶ್ರೀಶೈಲ್ ಭಟ್ ಅತಿಥಿಗಳನ್ನು ಪರಿಚಯಿಸಿದರು.
ಸಮಾರಂಭದಲ್ಲಿ ಪ್ರಾಂಶುಪಾಲ ಡಾ. ಕೆ. ಫಜಲುರ್ ರಹಮಾನ್, ರಿಜಿಸ್ಟ್ರಾರ್ ಪ್ರೊ. ಜಾಹಿದ್ ಖರೂರಿ ಮುಂತಾದವರು ಉಪಸ್ಥಿತರಿದ್ದರು.
ವಿಭಾಗದ ಮುಖ್ಯಸ್ಥ ಡಾ.ಟಿ.ಎಂ.ಪಿ.ರಾಜ್‌ಕುಮಾರ್ ಸ್ವಾಗತಿಸಿದರು. ಫಾತಿಮಾ ಇನಾಸ್ ಮತ್ತು ಆಯಷಾ ಉಮೈಮಾ ನಿರ್ವಹಿಸಿದರು. ಉಪಾಧ್ಯಕ್ಷ ಇಹಾಬ್ ಪಿಲ್ಲೂರ್ ವಂದಿಸಿದರು.

More Stories
ಜನವರಿ 7 ಭಟ್ಕಳ ತಾಲೂಕ 11ನೆ ಸಾಹಿತ್ಯ ಸಮ್ಮೇಳ
ಭಟ್ಕಳ ತಾಲೂಕು ಕಸಾಪದಿಂದ ರಸಪ್ರಶ್ನೆ ಸ್ಪರ್ಧೆ – ಬಹುಮಾನ ವಿತರಣೆ.
ಭಟ್ಕಳದ ಶ್ರೀ ಜ್ಞಾನೇಶ್ವರಿ ಶಿಕ್ಷಣ ಮಹಾವಿದ್ಯಾಲಯದಲಿ ದೀಪದಾನ ಕಾರ್ಯಕ್ರಮ