March 29, 2025

Bhavana Tv

Its Your Channel

ಉತ್ತರಕನ್ನಡ ದಂತವೈದ್ಯ ಶಾಖೆಯ ವೈದ್ಯರು ರಾಷ್ಟ್ರೀಯ ಕಾರ್ಯಕಾರಿಣಿಗೆ ಆಯ್ಕೆ.

ಭಟ್ಕಳ:- ಭಾರತೀಯ ದಂತ ವೈದ್ಯ ಸಂಘದ ಸಕ್ರೀಯ ಸದಸ್ಯರು ಹಾಗೂ ಮಾಜಿ ಅಧ್ಯಕ್ಷರಾದ ಭಟ್ಕಳದ ಖ್ಯಾತ ದಂತ ವೈದ್ಯ ಡಾ.ಕೀರ್ತಿ ಶೆಟ್ಟಿ ಹಾಗೂ ಗೋಕರ್ಣದ ಖ್ಯಾತ ವೈದ್ಯ ಡಾ.ರಾಮಚಂದ್ರ ಮಲ್ಲನ್ ಇವರನ್ನು ಗುಲ್ಬರ್ಗಾದಲ್ಲಿ ನಡೆದ ದಂತ ವೈದ್ಯ ಸಂಘದ ರಾಜ್ಯ ಮಟ್ಟದ ಸಮಾವೇಶದಲ್ಲಿ ಕೇಂದ್ರೀಯ ಸಮಾಲೋಚನಾ ಸದಸ್ಯ (Central Council Member)ರನ್ನಾಗಿ ಸರ್ವಾನುಮತದಿಂದ ನೇಮಕ ಮಾಡಲಾಗಿದೆ.

ಇದೊಂದು ಮಹತ್ವದ ಬೆಳವಣಿಗೆಯಾಗಿದ್ದು. ಸದರಿ ವೈದ್ಯರ ನೇಮಕ ನಮ್ಮ ಉತ್ತರಕನ್ನಡ ಜಿಲ್ಲಾ ದಂತ ವೈದ್ಯರ ಸಂಘದ ಕೀರ್ತಿ ರಾಷ್ಟ್ರ ಮಟ್ಟದಲ್ಲಿ ಬೆಳಗುವಂತಾಗಿದೆ ಎಂದು ಸಂಘದ ಅಧ್ಯಕ್ಷರಾದ ಡಾ. ರೂಪೇಶ್ ಭಗತ್, ಕಾರ್ಯದರ್ಶಿ ಡಾ.ಕೃಷ್ಣಾ ಪ್ರಭು ಹಾಗೂ ಖಜಾಂಚಿ ಡಾ.ಸೂರಜ ಹೆಗಡೆ ಸಂತಸ ವ್ಯಕ್ತಪಡಿಸಿದ್ದಾರೆ.

error: