March 29, 2025

Bhavana Tv

Its Your Channel

ನೂತನ ಪಿಂಚಣಿ ಯೋಜನೆ ಶೀಘ್ರವೇ ರದ್ದುಗೊಳಿಸುವಂತೆ ಶಾಸಕ ಸುನೀಲ್ ನಾಯ್ಕ ರಿಗೆ ಮನವಿ

ಭಟ್ಕಳ: ನೂತನ ಪಿಂಚಣಿ ಯೋಜನೆ ಶೀಘ್ರವೇ ರದ್ದುಗೊಳಿಸಿ ಹಳೆ ಪಿಂಚಣಿ ಯೋಜನೆ ಜಾರಿಗೆ ಒತ್ತಾಯಿಸಿ ಅಧಿವೇಶನದಲ್ಲಿ ರದ್ದತಿಗೊಳಿಸುವಂತೆ ಸರ್ಕಾರವನ್ನು ಆಗ್ರಹಿಸಲು ಶಾಸಕ ಶಾಸಕ ಸುನೀಲ್ ನಾಯ್ಕ ರಿಗೆ ಮನವಿ ಸಲ್ಲಿಸಿದರು

ಕರ್ನಾಟಕ ರಾಜ್ಯ ಸರ್ಕಾರಿ ಎನ್. ಪಿ. ಎಸ್. ನೌಕರರ ಸಂಘ (ರಿ) ಬೆಂಗಳೂರು ಇದರ ಉತ್ತರ ಕನ್ನಡ ಜಿಲ್ಲಾ ಘಟಕದ ಸದಸ್ಯರು ಬುಧವಾರ ಭಟ್ಕಳ ಹೊನ್ನಾವರ ವಿಧಾನಸಭಾ ಕ್ಷೇತ್ರದ ಶಾಸಕ ಶಾಸಕ ಸುನೀಲ್ ನಾಯ್ಕ ಅವರಿಗೆ, ದಿನಾಂಕ 01/04/2006 ರಿಂದ ಸರ್ಕಾರಿ ಸೇವೆಗೆ ಸೇರಿರುವ ನೌಕರರಿಗೆ ಜಾರಿಗೊಳಿಸಿರುವ ರಾಷ್ಟ್ರೀಯ ಪಿಂಚಣಿ ಯೋಜನೆ (ಎನ್‌ಪಿಎಸ್) ರದ್ದುಪಡಿಸಿ, ಈ ಹಿಂದೆ ಇದ್ದಂತೆ ನಿಶ್ಚಿತ ಪಿಂಚಣಿ ಯೋಜನೆ (ಹಳೆಯ ಪಿಂಚಣಿ ಯೋಜನೆ) ಯನ್ನು ಮರುಜಾರಿಗೆ ತರುವಂತೆ ಪ್ರಸ್ತುತ ಚಳಿಗಾಲದ ಅಧಿವೇಶನದಲ್ಲಿ ರದ್ದತಿಗೊಳಿಸುವಂತೆ ಸರ್ಕಾರವನ್ನು ಆಗ್ರಹಿಸಲು ಭಟ್ಕಳ ತಾಲ್ಲೂಕು ಆಡಳಿತ ಸೌಧದಲ್ಲಿ ಶಾಸಕರಿಗೆ ಮನವಿ ಸಲ್ಲಿಸಿದರು.
ಹೊಸ ಪಿಂಚಣಿ ಯನ್ನು ರದ್ದುಗೊಳಿಸಿ ಹಳೇ ಪಿಂಚಣಿಯನ್ನು ಜಾರಿಗೊಳಿಸಲು ಹಾಗೂ ನಿವೃತ್ತಿಯ ನಂತರ ಹೊಸ ಪಿಂಚಣಿ ಯೋಜನೆಯಿಂದ ಆಗುತ್ತಿರುವ ಸಮಸ್ಯೆಗಳ ಬಗ್ಗೆ ಹಾಗೂ ದಿನಾಂಕ 19 ಡಿಸೆಂಬರ್ 2022ರಂದು ಬೆಂಗಳೂರಿನಲ್ಲಿ ನಡೆಯುವ ಹೋರಾಟದ ಬಗ್ಗೆ ಪ್ರತಿಭಟನೆ ಬಗ್ಗೆ ಮಾನ್ಯ ಶಾಸಕರಿಗೆ ಗಣೇಶ ಹೆಗಡೆ ರವರು ವಿಸ್ಮತ ಮಾಹಿತಿಯನ್ನು ನೀಡಿದರು. ಹಾಗೆಯೇ ಇಡೀ ದೇಶದಲ್ಲಿ ಈಗಾಗಲೇ ಐದು ರಾಜ್ಯಗಳು ಎನ್‌ಪಿಎಸ್ ಬಗ್ಗೆ ಕ್ರಮ ವಹಿಸಿದೆ ಹಾಗೂ ಈಗಾಗಲೇ ಹರಿಯಾಣದಲ್ಲಿಯೂ ಕೂಡ ಈ ಬಗ್ಗೆ ಕ್ರಮ ವಹಿಸಲಾಗಿದೆ ಮತ್ತು ಎನ್‌ಪಿಎಸ್ ನೌಕರರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಮತ್ತು ಅದನ್ನು ಜಾರಿಗೆ ತರುವ ಬಗ್ಗೆ ಅಲ್ಲದೆ ಎನ್‌ಪಿಎಸ್ ನಿಂದ ಕಡಿತವಾಗುವ ಮೊತ್ತ 10% ಮತ್ತು ಸರ್ಕಾರದಿಂದ 14 % ಒಟ್ಟು 24 % ಮೊತ್ತ ಬಳಕೆಯ ಬಗ್ಗೆ ಹಾಗೂ ನಂತರ ಅದನ್ನು 33 % ನಂತೆ ಮೂರು ಭಾಗ ಮಾಡಿ ಷೇರು ಮಾರುಕಟ್ಟೆ ವಿಮೆ ಹಾಗೂ ಇತರೆ ಕಂಪನಿಗಳಲ್ಲಿ ಹೂಡಿಕೆ ಮಾಡುವುದರ ಬಗ್ಗೆ ಮತ್ತು ಅದರಿಂದ ಬರುವ ಮೊತ್ತವನ್ನು ನೌಕರರಿಗೆ ನೀಡುವ ಬಗ್ಗೆ ಅಲ್ಲದೆ ಬೇರೆ ದೇಶಗಳಲ್ಲಿ ಎನ್‌ಪಿಎಸ್ ನೌಕರರು ಎದುರಿಸುತ್ತಿರುವ ಸಮಸ್ಯೆಗಳು ಮತ್ತು ನಷ್ಟದ ಬಗ್ಗೆ ಮಾನ್ಯ ಶಾಸಕರಿಗೆ ಮಾಹಿತಿ ನೀಡಿದರು.

ನಂತರ ಶಾಸಕ ಸುನೀಲ್ ನಾಯ್ಕ ಈ ವಿಷಯ ವನ್ನು ಸದನದಲ್ಲಿ ಪ್ರಸ್ತಾಪ ಮಾಡುವುದಾಗಿ ಮತ್ತು ಎನ್‌ಪಿಎಸ್ ರದ್ದುಗೊಳಿಸುವ ಬಗ್ಗೆ ಮತ್ತು ಹಳೇ ಪಿಂಚಣಿಯನ್ನು ಜಾರಿಗೊಳಿಸುವ ಬಗ್ಗೆ ಮುಖ್ಯಮಂತ್ರಿಗಳೊAದಿಗೆ ಮಾತನಾಡುವ ಭರವಸೆಯನ್ನು ನೀಡಿದರು.

ಈ ಸಂದರ್ಭದಲ್ಲಿ ತಹಶಿಲ್ದಾರರ ಡಾ ಸುಮಂತ್,ಎನ್. ಪಿ. ಎಸ್. ನೌಕರರ ಸಂಘ ಜಿಲ್ಲಾಧ್ಯಕ್ಷರಾದ ಗಣೇಶ ಹೆಗಡೆ,ಹೆಸ್ಕಾಂ ಎಇಇ ಮಂಜುನಾಥ, ಗ್ರೇಡ್ 2 ದೈಹಿಕ ಶಿಕ್ಷಣ ಶಿಕ್ಷಕರ ಸಂಘ ರಾಜ್ಯಾಧ್ಯಕ್ಷ ಗಿರೀಶ ನಾಯಕ,ತಾಲ್ಲೂಕು ಅಧ್ಯಕ್ಷರಾದ ಶೇಖರ್ ಪೂಜಾರಿ,ಕೆ.ಪಿ.ಟಿ.ಸಿ.ಎಲ್ ತಾಲೂಕಾಧ್ಯಕ್ಷರಾದ
ರಾಮ ಪೂಜಾರಿ,ಸದಸ್ಯರಾದ ವಾಸು ಮೊಗೇರ್,ಕೆ ಶಂಭು, ವಿದ್ಯಾ ಹೆಗಡೆ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು

error: