March 29, 2025

Bhavana Tv

Its Your Channel

ಮುರುಡೇಶ್ವರ ದೇವಸ್ಥಾನದಲ್ಲಿ ವಸ್ತ್ರ ಸಂಹಿತೆ ಜಾರಿಗೆ ಸಂಘ ಪರಿವಾರ ಸಂಘಟನೆಗಳ ಆಗ್ರಹ

ಭಟ್ಕಳ: ವಿಶ್ವಪ್ರಸಿದ್ಧ ಶ್ರೀ ಮುರುಡೇಶ್ವರ ದೇವಸ್ಥಾನದಲ್ಲಿ ಸಾತ್ವಿಕ ಉಡುಪು ಧಾರಣೆಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ವಸ್ತ್ರ ಸಂಹಿತೆಯನ್ನು ಜಾರಿಗೊಳಿಸಬೇಕು ಎಂದು ಆಗ್ರಹಿಸಿ ಭಟ್ಕಳ ತಾಲೂಕಿನ ವಿವಿಧ ಸಂಘ ಸ0ಘಟನೆಗಳ ಪರಿವಾರ ಹಿಂದೂ ಜನಜಾಗೃತಿ ಸಮಿತಿಯ ನೇತೃತ್ವದಲ್ಲಿ ಮುರುಡೇಶ್ವರ ದೇವಸ್ಥಾನದ ವ್ಯವಸ್ಥಾಪಕರಿಗೆ ಮನವಿ ಸಲ್ಲಿಸಿದರು.

ಸದಸ್ಯರು ಪಾಶ್ಚಾತ್ಯ ಉಡುಪುಗಳನ್ನು ಧರಿಸಿ ಸ0ಸ್ಕೃತಿಯ ದೇವಸ್ಥಾನಕ್ಕೆ ಬರುವುದರಿಂದ ಸಾತ್ವಿಕ ಪ್ರಜ್ಞೆಗೆ ಧಕ್ಕೆ ಉಂಟಾಗುತ್ತದೆ. ವಿದೇಶಿ ಸಂಸ್ಕೃತಿಯ ರಜ, ತಮ ಪ್ರಧಾನ ಉಡುಪುಗಳನ್ನು ಧರಿಸಿ ಬರುವುದರಿಂದ ಭಾವುಕ ಭಕ್ತರು ದೈವಿ ಚೈತನ್ಯದ ಪೂರ್ಣ ಲಾಭ ಪಡೆಯುವುದರಿಂದ ವಂಚಿತರಾಗುತ್ತಿದ್ದಾರೆ. ಹಿಂದೂ ಸಂಸ್ಕೃತಿಗೆ ಪೂರಕವಾದ ಉಡುಪುಗಳು ಈಶ್ವರಿ ಚೈತನ್ಯವನ್ನು ತಂದುಕೊಡುತ್ತವೆ. ದೇವಸ್ಥಾನದಲ್ಲಿ ಪಾವಿತ್ರ‍್ಯತೆ, ಆಧ್ಯಾತ್ಮಿಕತೆಗೆ ಪೂರಕವಾದ ಪರಿಸರವನ್ನು ಕಾಪಾಡಿಕೊಳ್ಳುವುದು ಭಕ್ತರ ಆದ್ಯ ಕರ್ತವ್ಯವಾಗಿದ್ದು, ದೇವಸ್ಥಾನದಲ್ಲಿ ವಸ್ತ್ರಸಂಹಿತೆ ಜಾರಿಗೆ ಕ್ರಮ ಕೈಗೊಳ್ಳಬೇಕು ಎಂದು ಮನವಿ ಪತ್ರದಲ್ಲಿ ಉಲ್ಲೇಖಿಸಲಾಗಿದೆ.
ಮುರುಡೇಶ್ವರ ದೇವಸ್ಥಾನದ ವ್ಯವಸ್ಥಾಪಕ ಮಂಜುನಾಥ ಶೆಟ್ಟಿ ಮನವಿಯನ್ನು ಸ್ವೀಕರಿಸಿದರು. ಈ ಸಂದರ್ಭದಲ್ಲಿ ಹಿಂದೂ ಜನ ಜಾಗೃತಿ ಸಮಿತಿಯ ಜಿಲ್ಲಾ ಸಮನ್ವಯಕ ಶರತ್‌ಕುಮಾರ್ ನಾಯ್ಕ, ಶ್ರೀರಾಮಸೇನೆಯ ಜಿಲ್ಲಾ ಅಧ್ಯಕ್ಷ ಜಯಂತ ನಾಯ್ಕ, ಭಟ್ಕಳ ಪುರಸಭಾ ನಾಮ ನಿರ್ದೇಶನ ಸದಸ್ಯ ಶ್ರೀಕಾಂತ ನಾಯ್ಕ, ಶ್ರೀನಿವಾಸ ನಾಯ್ಕ, ದಿನೇಶ ನಾಯ್ಕ, ಪಾಂಡುರoಗ ನಾಯ್ಕ, ಸಂತೋಷ ಆಚಾರ್ಯ, ರಾಜು ನಾಯ್ಕ, ಮೋಹನ ನಾಯ್ಕ, ಸಂತೋಷ ಭಟ್ಕಳ ಉಪಸ್ಥಿತರಿದ್ದರು.

error: