March 29, 2025

Bhavana Tv

Its Your Channel

ಭಟ್ಕಳದ ಆನಂದ ಆಶ್ರಮ ಕಾನ್ವೆಂಟ್ ಪ್ರೌಢಶಾಲೆ ರಾಜ್ಯಮಟ್ಟಕ್ಕೆ

ಜಿಲ್ಲಾ ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ಕವ್ವಾಲಿ ಪ್ರಥಮ, ಜಾನಪದ ನೃತ್ಯ ದ್ವಿತೀಯ

ಭಟ್ಕಳ :- ದಿನಾಂಕ: 14-12-2022ರ ಬುಧವಾರ ಅಂಕೋಲಾದಲ್ಲಿ ಸ್ವಾತಂತ್ರ‍್ಯ ಸಂಗ್ರಾಮ ಸ್ಮಾರಕ ಭವನದಲ್ಲಿ ನಡೆದ ಜಿಲ್ಲಾ ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ಭಟ್ಕಳದ ಆನಂದ ಆಶ್ರಮ ಕಾನ್ವೆಂಟ್ ಪ್ರೌಢಶಾಲೆ ಸಾಮೂಹಿಕ ವಿಭಾಗದ ಕವ್ವಾಲಿಯಲ್ಲಿ ಪ್ರಥಮ ಸ್ಥಾನ ಪಡೆಯುವ ಮೂಲಕ ರಾಜ್ಯ ಮಟ್ಟಕ್ಕೆ ಪ್ರವೇಶ ಪಡೆದಿದೆ. ಸ್ಪರ್ಧಾಳುಗಳಾದ ಮಹ್ಮದ್ ಅನ್ಸಾಲ್ , ತೈಸಿ, ತಮೀಮ್, ರಾಜೀಫ್, ಹುಮೈದ್, ಶ್ರೀವತ್ಸ ಜಿಲ್ಲಾಮಟ್ಟದಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದರು. ಜಿಲ್ಲಾ ಮಟ್ಟದ ಜಾನಪದ ನೃತ್ಯದಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿ ವರ್ಷಿತಾ ಸಂಗಡಿಗರು ದ್ವಿತೀಯ ಸ್ಥಾನ ಪಡೆದುಕೊಂಡರು. ಪಿ.ಯು.ಸಿ. ವಿಭಾಗ ಮಟ್ಟದ ಚಟುವಟಿಕೆಯಲ್ಲಿ ಪ್ರಥಮ ಪಿ.ಯು.ಸಿ. ವಿಜ್ಞಾನ ವಿಭಾಗದ ವಿದ್ಯಾರ್ಥಿ ದರ್ಶನ ನಾಯ್ಕ ರಾಜ್ಯಮಟ್ಟಕ್ಕೆ ಆಯ್ಕೆಯಾಗಿರುವುದು ಶ್ಲಾಘನೀಯ. ಕವ್ವಾಲಿಗೆ ತರಬೇತಿ ನೀಡಿದ ಶಿಕ್ಷಕ ಪೆಟ್ರಿಕ್ ಟೆಲ್ಲಿಸ್ ಹಾಗೂ ಜಾನಪದ ನೃತ್ಯಕ್ಕೆ ತರಬೇತಿ ನೀಡಿದ ಶಿಕ್ಷಕಿಯರು ಶ್ರೀಮತಿ ಲತಾ ನಾಯ್ಕ ಹಾಗೂ ಕುಮಾರಿ ಜಮೀಲಾ ಆಲ್ಮೇಡಾ ಇವೆಲ್ಲಕ್ಕೂ ಸಹಕರಿಸಿದ ಶಿಕ್ಷಕಿ ಪ್ರಿಯಾ ನಾಯ್ಕ ಇವರಿಗೆ ಹಾಗೂ ವಿಜೇತರಾದ ಎಲ್ಲಾ ವಿದ್ಯಾರ್ಥಿಗಳಿಗೆ ಆಡಳಿತ ಮಂಡಳಿ ಹಾಗೂ ಕಾಲೇಜಿನ ಪ್ರಾಂಶುಪಾಲರು ಮನದುಂಬಿ ಶ್ಲಾಘಿಸಿದ್ದಾರೆ ಮತ್ತು ರಾಜ್ಯಮಟ್ಟಕ್ಕೆ ಉತ್ತಮ ಪ್ರದರ್ಶನಕ್ಕೆ ಶುಭ ಹಾರೈಸಿದ್ದಾರೆ.

error: