April 6, 2025

Bhavana Tv

Its Your Channel

ಅಂಜುಮಾನ್ ಹಾಮಿ-ಏ-ಮುಸ್ಲಿಮೀನ್ ಸಂಸ್ಥೆಯ ಶತಮಾನೋತ್ಸವ ವರ್ಷಾಚರಣೆಯ ಮುಕ್ತಾಯ ಸಮಾರಂಭ

ಭಟ್ಕಳ: ಮೋದಿಯವರನ್ನು ಮೆಚ್ಚಿಸಲು ಹೋಗಿ ಕರ್ನಾಟಕ ಸರಕಾರ ಹೊಸ ಶಿಕ್ಷಣ ನೀತಿಯನ್ನು ತರಾತುರಿಯಲ್ಲಿ ಜಾರಿಗೆ ತಂದಿದೆ ಎಂದು ಕರ್ನಾಟಕ ವಿಧಾನ ಪರಿಷತ್ ಸದಸ್ಯ ಬಿ.ಎಂ.ಫಾರೂಕ್ ಹೇಳಿದರು.
ಅವರು ಇಲ್ಲಿನ ಅಂಜುಮಾನ್ ಹಾಮಿ-ಏ-ಮುಸ್ಲಿಮೀನ್ ಸಂಸ್ಥೆಯ ಶತಮಾನೋತ್ಸವ ವರ್ಷಾಚರಣೆಯ ಮುಕ್ತಾಯ ಸಮಾರಂಭದ ಎರಡನೇ ದಿನದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದು ಮಾತನಾಡುತ್ತಿದ್ದರು.
ಮೋದಿ ಸರಕಾರ ಜಾರಿಗೆ ತಂದಿರುವ ನೂತನ ಶಿಕ್ಷಣ ನೀತಿಯಲ್ಲಿ ಅನೇಕ ಬದಲಾವಣೆಗಳಾಗಬೇಕಾಗಿದ್ದು ಅವುಗಳ್ಯಾವುದನ್ನೂ ಲೆಕ್ಕಿಸದೇ ಕರ್ನಾಟಕದಲ್ಲಿ ಜಾರಿಗೊಳಿಸಲಾಗಿದೆ. ನಮ್ಮಲ್ಲಿ ಅನೇಕ ಶಾಲೆಗಳಲ್ಲಿ ಮೂಲಭೂತ ಸೌಕರ್ಯವೇ ಇಲ್ಲವಾಗಿದೆ. ನೂತನ ಶಿಕ್ಷಣ ಜಾರಿಗೊಳಿಸುವ ಪೂರ್ವದಲ್ಲಿ ಅವುಗಳಾವುದನ್ನೂ ಲೆಕ್ಕಿಸದೇ ಜಾರಿಗೊಳಿಸಿರುವುದು ಸರಿಯಲ್ಲ ಎಂದರು.
ದೇಶದಲ್ಲಿ ಮುಸ್ಲೀಮರು ರಾಜಕೀಯವಾಗಿ ಹಾಗೂ ಶೈಕ್ಷಣಿಕವಾಗಿ ತೀರಾ ಹಿಂದುಳಿದಿದ್ದಾರೆ. ಇಲ್ಲಿನ ತನಕ ಎಲ್ಲಾ ಆಯೋಗಗಳೂ ಕೂಡಾ ಇದನ್ನೇ ವರದಿ ಮಾಡಿದ್ದು ನಾವು ಸಂಘಟಿತರಾಗಿ ಶೈಕ್ಷಣಿಕವಾಗಿ, ರಾಜಕೀಯವಾಗಿ ಮುಂದೆ ಬರಬೇಕಾಗಿದೆ ಎಂದ ಅವರು ಜಸ್ಟೀಸ್ ಆಚಾರ್ಯ ಅವರು ಕೂಡಾ ತಮ್ಮ ಆಯೋಗದ ವರದಿಯಲ್ಲಿ ಇದನ್ನೇ ಹೇಳಿದ್ದಾರೆ ಎಂದರು. ನಾವು ಪರಸ್ಪರ ಒಗ್ಗಟ್ಟಾಗದೇ ಇದ್ದಲ್ಲಿ ಮುಂದಕ್ಕೆ ಬರುವುದು ಕಷ್ಟವಾಗುವುದು ಎಂದ ಅವರು ಮುಂದಿನ ದಿನಗಳಲ್ಲಿ ನಾವು ರಾಜಕೀಯ ಅಸ್ತಿತ್ವಕ್ಕಾಗಿ ಹಾಗೂ ಶೈಕ್ಷಣಿಕ ಏಳ್ಗಿಗೆಗಾಗಿ ಒಂದಾಗುವAತೆ ಕರೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಅಂಜುಮಾನ್ ಹಾಮಿ-ಏ-ಮುಸ್ಲಿಮೀನ್ ಸಂಸ್ಥೆಯ ಅಧ್ಯಕ್ಷ ಮುಹಮ್ಮದ್ ಮುಝಮ್ಮಿಲ್ ಖಾಜಿಯಾ ಅಂಜುಮಾನ್ ಸಂಸ್ಥೆಯು ಮೊದಲಿನಿಂದಲೂ ಶಿಕ್ಷಣಕ್ಕೆ ಹೆಚ್ಚು ಆದ್ಯತೆಯನ್ನು ನೀಡುತ್ತಾ ಬಂದಿದೆ. ಅಂದಿನಿAದ ಇಂದಿನ ತನಕ ಅಂಜುಮಾನ್ ಶಿಕ್ಷಣ ಸಂಸ್ಥೆಗಾಗಿ ಕೈಚಾಚುವ ಸಂದರ್ಭ ಒದಗಿ ಬಂದಿಲ್ಲ, ಅದಕ್ಕೆ ನಮ್ಮಲ್ಲಿರುವ ಉದಾರ ದಾನಿಗಳೇ ಕಾರಣ. ಹಲವರು ಜಮೀನು, ಕಟ್ಟಡ, ವಾಣಿಜ್ಯ ಕಟ್ಟಡಗಳನ್ನು ಅಂಜುಮಾನ್ ಸಂಸ್ಥೆಗೆ ದಾನವಾಗಿ ನೀಡಿದ್ದಾರೆ. ಹಲವರು ಒಂದೊAದು ಬ್ಲಾಕ್, ಕಟ್ಟಡವನ್ನೇ ಕಟ್ಟಿ ಕೊಟ್ಟಿರುವ ಉದಾರ ದಾನಿಗಳನ್ನು ನೆನೆಸುವುದು ನಮ್ಮ ಕರ್ತವ್ಯ ಎಂದ ಅವರು ಅಂಜುಮಾನ್ ಸಂಸ್ಥೆ ನಡೆಸಲು ಅವುಗಳಿಂದ ಬರುವ ಆದಾಯವೂ ಕೂಡಾ ಸಹಕಾರಿಯಾಗಿದೆ ಎಂದರು. ನಮ್ಮವರ ದಾನಗುಣ ಶ್ಲಾಘನೀಯ ಎಂದ ಅವರು ಅನೇಕ ಗಣ್ಯರು ದಾನವಾಗಿ ಕೊಟ್ಟ ಜಮೀನು ಕಟ್ಟಡಗಳನ್ನು ಸಂಸ್ಥೆ ಉತ್ತಮವಾಗಿ ನಿರ್ವಹಣೆ ಮಾಡುತ್ತಾ ಬಂದಿದೆ ಎಂದರು.
ಕಾರ್ಯಕ್ರಮದಲ್ಲಿ ಅಂತಾರಾಷ್ಟಿçÃಯ ಭಾಷಣಕಾರ ರಾಶಿದ್ ಗಝಾಲಿ ಮಾತನಾಡಿ ವಿದ್ಯಾರ್ಥಿಗಳು ಕೇವಲ ಸರ್ಟಿಫಿಕೇಟ್ ಪಡೆದರೆ ಸಾಲದು, ಕೌಶಲ್ಯವನ್ನು ತಮ್ಮದಾಗಿಸಿಕೊಳ್ಳಬೇಕು ಎಂದರು. ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಕೇವಲ ಪ್ರಮಾಣ ಪತ್ರ ಹೊಂದಿದವ ಯಾವುದಕ್ಕೂ ಪ್ರಯೋಜನಕ್ಕೆ ಬರುವುದಿಲ್ಲ, ಆತನಲ್ಲಿ ಪ್ರಮಾಣ ಪತ್ರದ ಜೊತೆಗೆ ಕೌಶಲ್ಯವಿದ್ದರೆ ಮಾತ್ರ ಆತನ ಸರಿಯಾದ ಸ್ಥಾನವನ್ನು ಪಡೆಯುತ್ತಾನೆ ಎಂದರು. ಪ್ರಮಾಣ ಪತ್ರದಲ್ಲಿ ಇರುವ ಅಂಕಗಳನ್ನು ನೋಡಿ ಎಲ್ಲಿಯೂ ನಿಮಗೆ ಅವಕಾಶ ದೊರೆಯುವುದಿಲ್ಲ, ಆದರೆ ನಿಮ್ಮಲ್ಲಿರುವ ಕೌಶಲ್ಯವನ್ನು ನೋಡಿ ಅವಕಾಶವನ್ನು ನೀಡುತ್ತಾರೆ ಎಂದೂ ಅವರು ಹೇಳಿದರು.
ಕಾರ್ಯಕ್ರಮದ ವೇದಿಕೆಯಲ್ಲಿ ಸರ್ವೊಚ್ಚ ನ್ಯಾಯಾಲಯದ ವಿಶ್ರಾಂತ ನ್ಯಾಯಮೂರ್ತಿ ಮಾರ್ಕಂಡೇಯ ಕಾಟ್ಜು, ತಂಜೀA ಅಧ್ಯಕ್ಷ ಇನಾಯತುಲ್ಲಾ ಶಾಬಂದ್ರಿ, ಮುಹಮ್ಮದ್ ಯುನುಸ್ ಖಾಜಿಯಾ, ಮೌಲಾನಾ ಅಬ್ದುಲ್ ರಬ್ ನದ್ವಿ, ಮೊಹಮ್ಮದ್ ಶಫಿ ಶಾಬಂದ್ರಿ ಪಟೇಲ್, ಸೈಯದ್ ಮೊಹಿದ್ದೀನ ಮಾರ್ಕೆಟ್, ಮೌಲಾನಾ ಅಬ್ದುಲ್ ಅಲೀಮ ಕಾಸ್ಮಿ, ಅಬ್ದುಲ್ ಮಜೀದ್ ಜುಕಾಕೊ, ಉಮ್ಮರ್ ಫಾರೂಕ್ ಮುಸ್ಬಾ, ಮೊಹಮ್ಮದ್ ಸಾಧಿಕ್ ಪಿಲ್ಲೂರ್, ಇಷಾಕ್ ಶಾಬಂದ್ರಿ ಮುಂತಾದವರು ಉಪಸ್ಥಿತರಿದ್ದರು.
ಮೊಹಮ್ಮದ್ ಇಷಾಕ್ ಶಾಬಂದ್ರಿ ಸ್ವಾಗತಿಸಿದರು. ಅಫ್ತಾಬ್ ಹುಸೇನ್ ಕೋಲಾ, ಮುಷ್ತಾಕ್ ಅಹಮ್ಮದ್ ಭಾವಿಕಟ್ಟಿ ನಿರೂಪಿಸಿದರು. ಅಫ್ತಾಬ್ ಖಮರಿ ವಂದಿಸಿದರು.

error: