March 26, 2025

Bhavana Tv

Its Your Channel

ಜ. 24ರಂದು ಭಟ್ಕಳ ತಾಲೂಕು ಆಸ್ಪತ್ರೆಯಲ್ಲಿ ಕಿಡ್ನಿ ಹಾಗೂ ಪ್ಲಾಸ್ಟಿಕ್ ಸರ್ಜರಿಯ ಬೃಹತ್ ಉಚಿತ ಆರೋಗ್ಯ ತಪಾಸಣಾ ಶಿಬಿರ

ಭಟ್ಕಳ: ಮಂಗಳೂರಿನ ಎಜೆ ಆಸ್ಪತ್ರೆ ಸಹಯೋಗದಲ್ಲಿ ಜನವರಿ 24ರಂದು ಭಟ್ಕಳ ತಾಲೂಕು ಆಸ್ಪತ್ರೆಯಲ್ಲಿ ಕಿಡ್ನಿ ಹಾಗೂ ಪ್ಲಾಸ್ಟಿಕ್ ಸರ್ಜರಿಯ ಉಚಿತ ಆರೋಗ್ಯ ತಪಾಸಣಾ ಶಿಬಿರ ಹಮ್ಮಿಕೊಳ್ಳಲಾಗಿದೆ ಎಂದು ಭಟ್ಕಳ ಸರ್ಕಾರಿ ಆಸ್ಪತ್ರೆ ಆಡಳಿತ ವೈದ್ಯಾಧಿಕಾರಿ ಡಾ| ಸವಿತಾ ಕಾಮತ್ ಹೇಳಿದರು, ತಾಲೂಕು ಸರ್ಕಾರಿ ಆಸ್ಪತ್ರೆಯಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಅಂಗಾAಗ ಜೋಡಣೆಯ ಖ್ಯಾತಿ ಹೊಂದಿರುವ ಡಾ| ಪ್ರಶಾಂತ ಮಾರ್ಲ ಶಿಬಿರದಲ್ಲಿ ಹಾಜರಿರಲಿದ್ದು, ಅವರು ಅಂಗಾAಗಗಳ ದಾನ ಹಾಗೂ ಜೋಡಣೆ ಬಗ್ಗೆ ಮಾಹಿತಿ ನೀಡಲಿದ್ದಾರೆ. ಅಂಗಾAಗಗಳ ದಾನಗಳ ಬಗ್ಗೆ ಸಾಮಾನ್ಯ ಜನರಲ್ಲಿ ಜಾಗೃತಿ ಮೂಡಿಸುವ ಅಗತ್ಯತೆ ತೀರಾ ಇದ್ದು, ಈ ಶಿಬಿರದಿಂದ ಸಹಾಯಕವಾಗಬಹುದು. ಮೆದುಳು ನಿಷ್ಕ್ರಿಯಗೊಂಡ ವ್ಯಕ್ತಿಯ ಅಂಗಾAಗಗಳನ್ನು ದಾನ ಮಾಡುವುದರಿಂದ ಇನ್ನೊಂದು ವ್ಯಕ್ತಿಗೆ ಜೀವದಾನ ನೀಡಬಹುದಾಗಿದೆ. ರಕ್ತದಾನ, ನೇತ್ರ ದಾನದಂತೆ ಅಂಗಾAಗ ದಾನಗಳ ಬಗ್ಗೆಯೂ ಜನರಲ್ಲಿ ತಿಳಿವಳಿಕೆ ಮೂಡಿಸಿದರೆ ಕ್ಲಿಷ್ಟಕರ ಸನ್ನಿವೇಶದಲ್ಲಿ ಜನರು ಸ್ವಯಂ ಪ್ರೇರಿತರಾಗಿ ಅಂಗಾAಗ ದಾನಕ್ಕೆ ಮುಂದೆ ಬರುತ್ತಾರೆ ಎಂದರು.
ಎ.ಜೆ. ಆಸ್ಪತ್ರೆ ವೈದ್ಯ ಡಾ| ಪ್ರೀತಮ್ ಮಾತನಾಡಿ, ಜ. 24ರಂದು ನಡೆಯುವ ಆರೋಗ್ಯ ತಪಾಸಣಾ ಶಿಬಿರದಲ್ಲಿ ಮೂತ್ರಪಿಂಡ ಶಸ್ತ್ರ ಚಿಕಿತ್ಸಕ ಡಾ| ಪ್ರಶಾಂತ ಮಾರ್ಲ ಹಾಗೂ ಪ್ಲಾಸ್ಟಿಕ್ ಸರ್ಜನ ಡಾ|| ದಿನೇಶ ಕದಂ ಭಾಗವಹಿಸಲಿದ್ದಾರೆ. ಶಿಬಿರದಲ್ಲಿ ಮೂತ್ರಪಿಂಡ, ಮೂತ್ರ ಕೋಶ ಕಲ್ಲು ಹಾಗೂ ಸೋಂಕುಗಳಿಗೆ ಸಂಬAಧಪಟ್ಟ ಪರೀಕ್ಷೆ ಹಾಗೂ ಚಿಕಿತ್ಸೆ ನಡೆಸಿ ಅಗತ್ಯವಿದ್ದಲ್ಲಿ ಶಸ್ತ್ರಚಿಕಿತ್ಸೆಗೆ ಶಿಫಾರಸು ಮಾಡಲಾಗುವುದು. ಅದೇ ರೀತಿ ಸೀಳುತುಟಿ, ಸೀಳು ಬಾಯಿ ಹಾಗೂ ಸುಟ್ಟಗಾಯಗಳಿಗೆ ಉಚಿತ ತಪಾಸಣೆ, ಅಗತ್ಯವಿದ್ದಲ್ಲಿ ಆಯುಷ್ಮಾನ್ ಯೋಜನೆಯಡಿ ಚಿಕಿತ್ಸೆ ನೀಡಲಾಗುತ್ತದೆ ಎಂದರು. ಎಜೆ ಆಸ್ಪತ್ರೆ ಪ್ರತಿನಿಧಿ ಅಶ್ರಫ್ ಇದ್ದರು.

error: