March 18, 2025

Bhavana Tv

Its Your Channel

ಹಳೆಯ ರಸ್ತೆ ಪೂರ್ಣಗೊಳಿಸದೇ ಭೂಮಿಪೂಜೆಗೆ ವಿರೋಧ-ಗ್ರಾಮಸ್ತರು ಹಾಗೂ ಶಾಸಕ ಸುನಿಲ್ ನಾಯ್ಕ ನಡುವೆ ಮಾತಿನ ಚಕಮಕಿ

ಭಟ್ಕಳ: ಶಾಸಕರಿಗೆ ರಸ್ತೆ ಪೂರ್ಣ ಮಾಡಿಕೊಡಿ ಎಂದು ಗ್ರಾಮಸ್ಥರು ಕೇಳಿದ್ದಕ್ಕೆ ಬೆದರಿಕೆ ಹಾಕಿದ ಘಟನೆ ಭಟ್ಕಳದ ಬೈಲೂರು ಗ್ರಾಮದಲ್ಲಿ ನಡೆದಿದೆ.
ಕೇವಲ 400 ಮೀ ರಸ್ತೆ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಆಗಮಿಸಿದ್ದ ಭಟ್ಕಳ ಶಾಸಕ ಸುನೀಲ್ ನಾಯ್ಕರಿಗೆ ಗ್ರಾಮಸ್ಥರು ತರಾಟೆ ತೆಗೆದುಕೊಂಡಿದ್ದು ಗ್ರಾಮದ 1.8 ಕಿಮೀ ರಸ್ತೆ ಹಾಳಾಗಿದ್ದು, ಸರಿಪಡಿಸಿಕೊಡುವಂತೆ ಸಾಕಷ್ಟು ಬಾರಿ ಮನವಿ ಮಾಡಲಾಗಿದೆ. ಸರಿಪಡಿಸಿಕೊಡದೇ ಕೇವಲ 400 ಮೀಟರ್ ರಸ್ತೆಗೆ ಭೂಮಿ ಪೂಜೆ ನೆರವೇರಿಸಲು ಆಗಮಿಸಿದ್ದಕ್ಕೆ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದು ಭೂಮಿ ಪೂಜೆ ಮಾಡದಂತೆ ಪ್ರತಿಭಟಿಸಿದ್ದಾರೆ. ಈವೇಳೆ ಸಿಟ್ಟಿಗೆದ್ದ ಶಾಸಕ ಸುನಿಲ್ ನಾಯ್ಕ ಯಾವಾಗ ರಸ್ತೆ ಮಾಡಬೇಕು ನನಗೆ ಗೊತ್ತಿದೆ, ನಾನು ಮಾಡೋದು ಇಷ್ಟು, ನಾನು ಶಾಸಕ, ರಸ್ತೆ ಮಾಡಲು ನನಗೆ ಯಾವ ದೊಡ್ಡ ನಾಯಕನ ಅಪ್ಪಣೆ ಬೇಕಿಲ್ಲ, ತಾಕತ್ತಿದ್ದರೆ ಭೂಮಿ ಪೂಜೆ ನಿಲ್ಲಿಸಿ ಎಂದು ಗ್ರಾಮಸ್ಥರಿಗೆ ಆವಾಜ್ ಹಾಕಿದ್ದಾರೆ.

ಈ ಬಗ್ಗೆ ಸ್ಪಷ್ಟನೆ ನೀಡಿದ ಶಾಸಕರು ಈ ಗ್ರಾಮಕ್ಕೆ ಹಲವು ಅಭಿವೃದ್ಧಿ ಕಾಮಗಾರಿಗಳನ್ನು ತರಲಾಗಿದೆ. ಇಂದು 400 ಮೀಟರ್ ರಸ್ತೆ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಲಾಯಿತು .ಆದ್ರೆ ಕಾಂಗ್ರೆಸ್ ಕಾರ್ಯಕರ್ತರು ಭೂಮಿ ಪೂಜೆ ನೆರವೇರಿಸಲು ಅಡೆಒಡ್ಡಿದರು, ಈ ರೀತಿ ಯಾವಾಗ ರಸ್ತೆ ಮಾಡಬೇಕು ನನಗೆ ಗೊತ್ತಿದೆ, ನಾನು ಮಾಡೋದು ಇಷ್ಟು,ನಾನು ಶಾಸಕ, ರಸ್ತೆ ಮಾಡಲು ನನಗೆ ಯಾವ ದೊಣ್ಣೆ ನಾಯಕನ ಅಪ್ಪಣೆ ಬೇಕಿಲ್ಲ,ತಾಕತ್ತಿದ್ದರೆ ಭೂಮಿ ಪೂಜೆ ನಿಲ್ಲಿಸಿ ಎಂದು ಹೇಳಿದ್ದೇನೆ ಎಂದರು.

error: