March 19, 2025

Bhavana Tv

Its Your Channel

ಭಟ್ಕಳ ಪುರಸಭೆಯ ಸಾಮಾನ್ಯ ಸಭೆಯಲ್ಲಿ ಅಂಗಡಿ ಮಳಿಗೆಗಳ ಹರಾಜು ಪ್ರಕರಣ ಸಂಬoಧಿಸಿದoತೆ ಸದಸ್ಯರ ನಡುವೆ ಮಾತಿನ ಚಕಮಕಿ

ಭಟ್ಕಳ : ಪುರಸಭೆಯ ಒಡೆತನದ ೧೮ ಅಂಗಡಿ ಮಳಿಗೆಗಳ ಹರಾಜು ಪ್ರಕರಣ ಸಂಬAಧಿಸಿದAತೆ ಪುರಸಭೆಯ ಸಾಮಾನ್ಯ ಸಭೆಯಲ್ಲಿ ಬಾರಿ ಕೊಲಾಹಲಕ್ಕೆ ಏರ್ಪಟ್ಟು ಸದಸ್ಯರ ನಡುವೆ ಮಾತಿನ ಚಕಮಕಿ ನಡೆಯಿತು.

ಗುರುವಾರ ಪುರಸಭೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಮಾತನಾಡಿದ ಮುಖ್ಯಾಧಿಕಾರಿ ಎಂ.ಕೆ.ಸುರೇಶ ,ಫೆ.೭ರಂದು ನಡೆಯಬೇಕಾಗಿದ್ದ ಅಂಗಡಿ ಮಳಿಗೆಯ ಹರಾಜನ್ನು ಕಾರಣಾಂತರಗಳಿAದ ಮುಂದೂಡಲಾಗಿತ್ತು. ಟೆಂಡರ್ ಮುಂದೂಡಿಕೆಗೆ ಇದ್ದ ಸಮಸ್ಯೆ ಬಗೆಹರಿದ ಕಾರಣ ಸಭೆಯೂ ಸೂಚಿಸಿದ ಮರು ದಿನಾಂಕದAದು ಹರಾಜು ಪ್ರಕಿಯೆ ಮಾಡಿ ಮುಗಿಸಲಾಗುವುದು ಎಂದು ಸಭೆಯ ಗಮನಕ್ಕೆ ತಂದರು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಸದಸ್ಯ ಅಲ್ತಾಫ ಖರೂರಿ ಹರಾಜು ಪ್ರಕಿಯೆ ನಡೆಸುವ ಪೂರ್ವದಲ್ಲಿ ಇನ್ನಷ್ಟು ಜನರಿಂದ ಡಿಡಿ ಪಡೆಯಲು ಅವಕಾಶ ನೀಡಬೇಕು. ಇದರಿಂದ ಇನ್ನೂ ಹಲವಾರು ಜನರು ಟೆಂಡರ್ ನಲ್ಲಿ ಭಾಗವಹಿಸಲು ಅನುಕೂಲವಾಗುತ್ತದೆ. ಪುರಸಭೆಗೂ ಆದಾಯ ಬರುತ್ತದೆ ಎಂದರು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿ ಮಾತನಾಡಿದ ನಾಮನಿರ್ದೇಶಿತ ಸದಸ್ಯ ಶ್ರೀಕಾಂತ ಒಂದು ತಿಂಗಳು ಕಾಲವಕಾಶ ನೀಡಿ ಕರೆದ ಹರಾಜಿನಲ್ಲಿ ೪೫ ಜನರು ಭಾಗವಹಿಸಿದ್ದಾರೆ. ಟೆಂಡರ್ ನಿಯಮದ ಪ್ರಕಾರ ಹರಾಜು ಪ್ರಕ್ರಿಯೆ ನಡೆಸಲಾಗುತ್ತಿದೆ. ಆದರೂ ನಿಮ್ಮ ಪ್ರಕಾರ ಯಾರು ಹರಾಜಿಗೆ ಬರಬೇಕು ಎಂದು ಪ್ರಶ್ನಿಸಿದರು. ಇದೆ ವಿಷಯಕ್ಕೆ ಸಂಬAಧಿಸಿದAತೆ ಸದಸ್ಯರಾದ ಶ್ರೀಕಾಂತ ನಾಯ್ಕ ಮತ್ತು ಸ್ಥಾಯಿ ಸಮಿತಿ ಅಧ್ಯಕ್ಷ ಇಂಶಾದ ಹಾಗೂ ಸದಸ್ಯರಾದ ಅಬ್ದುಲ್ ರವೂಪ್, ಅಲ್ತಾಪ ಖರೂರಿ ನಡುವೆ ಮಾತಿನ ಮಾತಿನ ಚಕಮಕಿ ನಡೆದು ಸಭೆ ಕೊಲಾಹಲಕ್ಕೆ ಕಾರಣವಾಯಿತು. ಮಧ್ಯಪ್ರವೇಶಿಸಿ ಮಾತನಾಡಿದ ಅಧ್ಯಕ್ಷ ಪರ್ವೇಜ್ ಕಾಶೀಂಜೀ ಸದಸ್ಯರನ್ನು ಸಂತೈಸಿ ಈಗಿನ ಟೆಂಡರ್ ನು ರದ್ದುಪಡಿಸುವ ಬಗ್ಗೆ ಹಾಗೂ ಹಾಲಿ ಪ್ರಕ್ರಿಯೆ ಮುಂದುವೆರೆಸುವ ಸದಸ್ಯರ ಬಹುಮತ ಕೇಳಿದಾಗ ಸಭೆಯಲ್ಲಿದ್ದ ೭ ಸದಸ್ಯರ ಹೊರತುಪಡಿಸಿ ಉಳಿದ ಸದಸ್ಯರು ಮರು ಟೆಂಡರ್ ಮಾಡುವಂತೆ ಆಗ್ರಹಿಸಿದರು. ಇದಕ್ಕೆ ಸ್ಪಷ್ಟನೆ ನೀಡಿದ ಮುಖ್ಯಾಧಿಕಾರಿ ಕೆ.ಎಂ.ಸುರೇಶ ಹಾಲಿ ಹರಾಜು ಪ್ರಕ್ರಿಯೆಯನ್ನು ರದ್ದುಪಡಿಸಲು ನಿಯಮದಲ್ಲಿ ಅವಕಾಶ ಇಲ್ಲ. ಮುಂದೂಡಿದ ಮರುಹರಾಜಿನ ದಿನಾಂಕವನ್ನು ಸಭೆ ನಿರ್ಧರಿಸಿ ನೀಡಬೇಕು ಎಂದು ಕೋರಿಕೊಂಡರು. ಇದಕ್ಕೆ ಒಪ್ಪದ ಅಧ್ಯಕ್ಷ ಪರ್ವೇಜ್ ಕಾಶೀಂಜೀ ನಮ್ಮ ಸಭೆಯ ನಡಾವಳಿಯನ್ನು ನಿಮಗೆ ನೀಡಲಿದ್ದು ನೀವು ಮುಂದಿನ ಕ್ರಮ ಕೈಗೊಳ್ಳಿ ಎಂದರು.
ಹೊಸ ಮೀನು ಮಾರುಕಟ್ಟೆ ಸ್ಥಳದಲ್ಲಿ ಫೀ ವಸೂಲಿ ಮಾಡಲು ಟೆಂಡರ್ ಕರೆದರೆ ಯಾರು ಮುಂದೆ ಬರುತ್ತೀಲ್ಲ. ಇದರಿಂದ ಪುರಸಭೆಗೆ ಬರಬೇಕಾದ ಆದಾಯ ಬರುತ್ತಿಲ್ಲ. ಹೊಸ ಮಾರುಕಟ್ಟೆಗೆ ಸ್ಥಳಾಂತರ ಆಗುವ ತನಕ ಹಳೇ ಮೀನು ಮಾರುಕಟ್ಟೆಯಲ್ಲಿ ಫೀ ವಸೂಲಿ ಮಾಡಲು ಅವಕಾಶ ನೀಡಬೇಕು ಎಂದು ಮುಖ್ಯಾಧಿಕಾರಿ ಎಂ.ಕೆ.ಸುರೇಶ ಸಭೆಯ ಗಮನಕ್ಕೆ ತಂದರು. ಇದಕ್ಕೆ ಆಕ್ಷೇಪ ವ್ಯಕ್ತ ಪಡಿಸಿದ ಸದಸ್ಯ ಅಜೀಮ ಮೊದಲು ಮೀನು ಮಾರುಕಟ್ಟೆ ಸ್ಥಳಾಂತರ ಮಾಡಿ ಹಳೇ ಮೀನು ಮಾರುಕಟ್ಟೆಯಲ್ಲಿ ಫೀ ವಸೂಲಿ ಮಾಡಲು ಅವಕಾಶ ನೀಡುವುದಿಲ್ಲ ಎಂದರು. ಸದಸ್ಯ ಶ್ರೀಕಾಂತ ನಾಯ್ಕ ಮಾತನಾಡಿ ಹಳೇ ಹಾಗೂ ಹೊಸ ಎರಡು ಮೀನು ಮಾರುಕಟ್ಟೆಯಲ್ಲಿ ಫೀ ವಸೂಲಿಗೆ ಟೆಂಡರ್ ಕರೆಯಬೇಕು. ರಸ್ತೆಯಲ್ಲಿ ಕುಳಿತು ಮೀನು ಮಾರಾಟ ಮಾಡುವ ಮಹಿಳೆಯರನ್ನು ಹೊಸ ಮಾರುಕಟ್ಟೆ ಸ್ಥಳಾಂತರಿಸಬೇಕು ಇದರಿಂದ ಎರಡು ಮೀನು ಮಾರುಕಟ್ಟೆಯಿಂದ ಪುರಸಭೆಗೆ ಆದಾಯ ಬರುತ್ತದೆ ಎಂದರು. ಭಟ್ಕಳ ಕೆ.ಎಸ್.ಆರ್.ಟಿಸಿ ಬಸ್ ನಿಲ್ದಾಣಕ್ಕೆ ಡಾ.ಚಿತ್ತರಂಜನ್ ಹೆಸರಿಡುವಂತೆ ಎನ್.ಡಬ್ಲೂ.ಕೆ.ಎಸ್.ಆರ್.ಟಿ.ಸಿ ಶಿರಿಸಿಯಿಂದ ಪತ್ರಕ್ಕೆ ೭ ಸದಸ್ಯರು ಹೊರತುಪಡಿಸಿ ಉಳಿದ ಸದಸ್ಯರ ಆಕ್ಷೇಪ ವ್ಯಕ್ತಪಡಿಸಿದರು.
ಮಳೆಗಾಲದ ಪೂರ್ವದಲ್ಲಿ ಪಟ್ಟಣ ವ್ಯಾಪ್ತಿಯಲ್ಲಿ ಸಮರ್ಪಕ ಹೂಳೆತ್ತುವಂತೆ ಸದಸ್ಯರ ಆಗ್ರಹಿಸಿದರು. ಪುರಸಭೆ ವ್ಯಾಪ್ತಿಯ ಅಂಗಡಿ ಮಳಿಗೆಯ ಟ್ರೇಡ್ ಲೈಸೆನ್ಸ ದರ ಪರಿಷ್ಕರಣೆ ಹಾಗು ಮಹಾಯೋಜನೆ ಅನುಮೋದನೆಗೆ ಪ್ರತ್ಯೇಕ ಸಮಿತಿ ರಚನೆ ಮಾಡಿ ಸಾಧಕ ಬಾಧಕಗಳ ಬಗ್ಗೆ ಚರ್ಚಿಸಲು ಸಭೆ ತೀರ್ಮಾನಿಸಿತು.
ಉಪಾಧ್ಯಕ್ಷ ಕೈಸರ್ ಮೊಹತಿಶ್ಯಾಂ, ಇಂಜಿನೀಯರ್ ಅರವಿಂದ ಇದ್ದರು.

error: