

ಭಟ್ಕಳ: ಭಟ್ಕಳ ರಂಜಾನ್ ಮಾರ್ಕೆಟ್ ನಲ್ಲಿ ಮಹಿಳೆಯನ್ನು ಮುಟ್ಟಿದ ವಿಚಾರಕ್ಕೆ ಗಲಾಟೆ ನಡೆದ ವೇಳೆ ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದು ಕರೆದುಕೊಂಡು ಹೋಗುವ ವೇಳೆ ಪೊಲೀಸ್ ಜಿಪ್ ಅಡ್ಡಗಟ್ಟಿ ಕಲ್ಲಿನಿಂದ ಜಿಪ್ ಗ್ಲಾಸ್ ಒಡೆದಿರುವ ಘಟನೆ ತಡ ರಾತ್ರಿ ನಡೆದಿದೆ.
ಮಹಿಳೆಯರೊಂದಿಗೆ ಅಸಭ್ಯವಾಗಿ ವರ್ತಿಸಿದ ಈರ್ವರು ಯುವಕರನ್ನು ಪೊಲೀಸರು ವಶಕ್ಕೆ ಪಡೆದು ಜೀಪಿನಲ್ಲಿ ಠಾಣೆಗೆ ಕೊಂಡೊಯ್ಯಲು ಮುಂದಾಗಿದ್ದಾರೆ. ಅಷ್ಟರಲ್ಲೇ ಮುಸ್ಲಿಂ ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಜಮಾವಣೆಗೊಂಡು ‘ಅವರನ್ನ ನಮಗೆ ಕೊಡಿ, ನೀವ್ಯಾಕೆ ಕರೆದೊಯ್ಯುತ್ತೀರಿ’ ಎಂದು ಕೇಳಿ ಜೀಪು ತಡೆದಿದ್ದಾರೆ. ಅದಕ್ಕೆ ಸೊಪ್ಪು ಹಾಕದೆ ಪೊಲೀಸರು ಜೀಪನ್ನು ಚಲಾಯಿಸಿದ್ದು, ಇದರಿಂದಾಗಿ ಸಿಟ್ಟಿಗೆದ್ದ ಯುವಕರು ಕಲ್ಲೊಂದನ್ನ ಜೀಪಿನ ಮೇಲೆ ಎಸೆದಿದ್ದಾರೆ. ಕಲ್ಲೆಸೆತದಿಂದ ಜೀಪಿನ ಗಾಜು ಒಡೆದಿದ್ದು, ಈ ವಿಡಿಯೋ ಸದ್ಯ ಎಲ್ಲೆಡೆ ವೈರಲ್ ಆಗಿದೆ.
ಸರ್ಕಾರಿ ಕರ್ತವ್ಯಕ್ಕೆ ಅಡ್ಡಿ ಆತಂಕವನ್ನು0ಟು ಮಾಡಿದ್ದಲ್ಲದೇ ಆರೋಪಿ ಒಬ್ಬ ಪೊಲೀಸ ಸಿಬ್ಬಂದಿ ಗೌತಮ ಅವರ ಬಲ ಕೈಬೆರಳುಗಳನ್ನು ತಿರುವಿ ನೋವುಪಡಿಸಿದ್ದರಿಂದ ಆರೋಪಿತರ ಮೇಲೆ ಭಟ್ಕಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬಂಧಿತ ಏಳು ಮಂದಿಯಲ್ಲಿ ಈರ್ವರು ಹಿಂದೂ ಯುವಕರು ಹಾಗೂ ಐವರು ಮುಸ್ಲಿಂ ಯುವಕರಾಗಿದ್ದಾರೆ.
ಘಟನೆ ಬಗ್ಗೆ ಚುನಾವಣಾಧಿಕಾರಿ ಹಾಗೂ ಸಹಾಯಕ ಆಯುಕ್ತೆ ಮಮತಾ ದೇವಿ ಜಿ.ಸ್ ಪ್ರತಿಕ್ರಿಯಿಸಿದ್ದು ಚುನಾವಣೆ ಹಿನ್ನೆಲೆಯಲ್ಲಿ ಈ ಬಾರಿ ರಂಜಾನ್ ಮಾರ್ಕೇಟ್ ನಡೆಸಲು ಯಾವುದೇ ಅನುಮತಿ ನೀಡಿಲ್ಲ. ಹಾಗೂ ನಿನ್ನೆ ನಡೆದ ಘಟನೆ ಬಗ್ಗೆ ಮೇಲಾಧಿಕಾರಿಗಳೊಂದಿಗೆ ಮಾತುಕತೆ ನಡೆಸಲಾಗಿತ್ತಿದ್ದು ಇಂದು ರಾತ್ರಿ ತನಕ ರಂಜಾನ್ ಮಾರ್ಕೆಟ್ ನಡೆಸ ಬೇಕೋ ಬೇಡ ಎಂದು ಪರಿಸ್ಥಿತಿಗೆ ಅನುಗುಣವಾಗಿ ತೀರ್ಮಾನಿಸುತ್ತೇವೆ ಹಾಗೂ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮುಂಜಾಗ್ರತೆ ವಹಿಸುತ್ತೇವೆ ಎಂದರು.
More Stories
ಜನವರಿ 7 ಭಟ್ಕಳ ತಾಲೂಕ 11ನೆ ಸಾಹಿತ್ಯ ಸಮ್ಮೇಳ
ಭಟ್ಕಳ ತಾಲೂಕು ಕಸಾಪದಿಂದ ರಸಪ್ರಶ್ನೆ ಸ್ಪರ್ಧೆ – ಬಹುಮಾನ ವಿತರಣೆ.
ಭಟ್ಕಳದ ಶ್ರೀ ಜ್ಞಾನೇಶ್ವರಿ ಶಿಕ್ಷಣ ಮಹಾವಿದ್ಯಾಲಯದಲಿ ದೀಪದಾನ ಕಾರ್ಯಕ್ರಮ