April 29, 2024

Bhavana Tv

Its Your Channel

ಭಟ್ಕಳ ಹೊನ್ನಾವರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಹಾಲಿ ಶಾಸಕ ಸುನೀಲ ನಾಯ್ಕರಿಂದ ನಾಮಪತ್ರ ಸಲ್ಲಿಕೆ

ಭಟ್ಕಳ: ಭಟ್ಕಳ ಹೊನ್ನಾವರ ವಿಧಾನ ಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸುನೀಲ ನಾಯ್ಕ ಅವರು ಮಂಗಳವಾರದ0ದು ಕಾರ್ಯಕರ್ತರೊಂದಿಗೆ ಮೆರವಣಿಗೆಯಲ್ಲಿ ತಾಲೂಕು ಆಡಳಿತ ಸೌದಕ್ಕೆ ಬಂದು ಚುನಾವಣಾಧಿಕಾರಿ ಹಾಗೂ ಸಹಾಯಕ ಆಯುಕ್ತೆ ಮಮತಾದೇವಿ ಜಿ.ಎಸ್. ಅವರಿಗೆ ನಾಮ ಪತ್ರ ಸಲ್ಲಿಸಿದರು.

ನಾಮಪತ್ರ ಸಲ್ಲಿಕೆಗೂ ಪೂರ್ವದಲ್ಲಿ ಇಲ್ಲಿನ ಗ್ರಾಮ ದೇವರಾದ ಶ್ರೀ ಚೆನ್ನಪಟ್ಟಣ ಹನುಮಂತ ದೇವರಿಗೆ ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಹಾಗೂ ಬಿಜೆಪಿ ಮಂಡಲದವರು ವಿಶೇಷ ಪೂಜೆ ಸಲ್ಲಿಸಿ ಈ ಬಾರಿ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಸುನೀಲ ನಾಯ್ಕ ಅವರು ಅತ್ಯಧಿಕ ಮತಗಳಿಂದ ಗೆಲುವು ಸಾಧಿಸುವಂತೆ ಆಶೀರ್ವದಿಸು ಎಂದು ಸಂಕಲ್ಪ ಮಾಡಿದರು.

ಹಾಲಿ ಬಿಜೆಪಿ ಅಭ್ಯರ್ಥಿ ಹಾಗೂ ಶಾಸಕ ಸುನೀಲ ನಾಯ್ಕ ಅವರ ಪಿತ್ರ ವಿಯೋಗದ ಹಿನ್ನೆಲೆ ದೇವಸ್ಥಾನದ ಹೊರಗಡೆಗೆ ನಿಂತು ದೇವರಿಗೆ ನಮಸ್ಕರಿಸಿದರು.

ನಂತರ ಇಲ್ಲಿನ ಮಾರಿಕಾಂಬಾ ದೇವಸ್ಥಾನ (ಮಾರಿಗುಡಿ) ದೇವಸ್ಥಾನಕ್ಕೆ ತೆರಳಿ ಅಲ್ಲಿಯೂ ಸಹ ವಿಶೇಷ ಪೂಜೆಯನ್ನು ಬಿಜೆಪಿ ಮಂಡಲದಿAದ ಸಲ್ಲಿಸಿದ ಅವರು ಇತ್ತೀಚೆಗೆ ಪುನರ ಪ್ರತಿಷ್ಠಾಪನೆಗೊಂಡ ರಾಜಾಂಗಣ ನಾಗಬನ ದೇವರಿಗೆ, ಕಳಿ ಹನುಮಂತ ದೇವರಿಗೆ ಹಾಗೂ ಅರ್ಬನ ಬ್ಯಾಂಕ್ ಎದುರಿನ ಜಟಗ ದೇವರಿಗೆ ಪೂಜೆಯನ್ನು ಸಲ್ಲಿಸಿದರು.
ಅಲ್ಲಿಂದ ಬಿಜೆಪಿ ಕಾರ್ಯಕರ್ತರ ಜೊತೆ ಗೂಡಿ ಕಾಲ್ನಡಿಗೆಯಲ್ಲಿ ಮೆರವಣಿಗೆಯ ಮೂಲಕ ಪೇಟೆ ಮುಖ್ಯ ರಸ್ತೆ ಮಾರ್ಗವಾಗಿ ಹಳೇ ಬಸ್ ನಿಲ್ದಾಣದಿಂದ ತಾಲೂಕಾ ಆಡಳಿತ ಸೌಧದ ತನಕ ಸಾಗಿ ಬಂದ ಅವರಿಗೆ ಜಿಲ್ಲಾ ಉಸ್ತುವಾರಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿ, ಮಾಜಿ ಸಚಿವ ಪ್ರಮೋದ್ ಮಧ್ವರಾಜ ಭಟ್ಕಳ ಬಿಜೆಪಿ ಮುಖಂಡರು ಸಾಥ್ ನೀಡಿದರು.

ಮೆರವಣಿಗೆ ಯೂದ್ದಕ್ಕೂ ಮೋದಿ ಹಾಗೂ ಸುನೀಲ ನಾಯ್ಕ ಪರವಾದ ಘೋಷಣೆ ಕಾರ್ಯಕರ್ತರು ಕೂಗಿದರು. ಈ ವೇಳೆ ಬಿಜೆಪಿ ಅಭ್ಯರ್ಥಿ ಸುನೀಲ ನಾಯ್ಕ ಅವರಿಗೆ 6-7 ಸಾವಿರಕ್ಕೂ ಅಧಿಕ ಕಾರ್ಯಕರ್ತರು ನೂರಾರು ಮುಖಂಡರು ನಾಮಪತ್ರ ಸಲ್ಲಿಕೆಯಲ್ಲಿ ಸಾಥ್ ನೀಡಿದರು.
ಮೆರವಣಿಗೆಯ ಹಿನ್ನೆಲೆ ಪೋಲೀಸ ಇಲಾಖೆಯಿಂದ ಬಂದೋಬಸ್ತ ನೀಡಲಾಗಿತ್ತು.
ನಂತರ ಮಾಧ್ಯಮದರೊಂದಿಗೆ ಮಾತನಾಡಿದ ಸುನೀಲ ನಾಯ್ಕ ‘ಕ್ಷೇತ್ರದ ದೇವರಿಗೆ ಪೂಜೆ ಸಲ್ಲಿಸಿ ಬಿಜೆಪಿ ಪಕ್ಷದಿಂದ ಚುನಾವಣಾ ಸ್ಪರ್ಧೆಗೆ ನಾಮಪತ್ರ ಸಲ್ಲಿಕೆ ಮಾಡಿದ್ದು, ಅದರಲ್ಲು ಸಹಸ್ರಾರು ಸಂಖ್ಯೆಯಲ್ಲಿ ನನ್ನ ಜೊತೆಗೆ ಬಂದ ಬಿಜೆಪಿ ಕಾರ್ಯಕರ್ತರು ಸಾಥ್ ನೀಡಿದ್ದು ನನ್ನಲ್ಲಿನ ಆತ್ಮ ವಿಶ್ವಾಸ ಹೆಚ್ಚಿಸಿದೆ. ಈ ವಿಶ್ವಾಸದಿಂದ 2023 ರ ಚುನಾವಣೆಯಲ್ಲಿ ನೂರಕ್ಕೆ ನೂರು ಬಿಜೆಪಿ ಗೆಲುವು ಸಾಧಿಸುವದರ ಜೊತೆಗೆ ಹೆಚ್ಚು ಮತಗಳ ಅಂತರದಿAದ ಗೆಲುವು ಸಾಧಿಸಲಿದೆ ಎಂಬ ನಂಬಿಕೆ ಇದೆ. ಎಲ್ಲಾ ಸಮಾಜದ ಅಧ್ಯಕ್ಷರಿಗೆ, ಹಿರಿಯರಿಗೆ, ಕಾರ್ಯಕರ್ತರಿಗೆ, ಮುಖಂಡರಿಗೆ ಅಭಿನಂದನೆ ಸಲ್ಲಿಸಿದರು.
ಕಳೆದ ಐದು ವರ್ಷದಲ್ಲಿ ಕ್ಷೇತ್ರದಲ್ಲಿನ ಜಟಿಲವಾದ ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಕೆಲಸವನ್ನು ಮಾಡಿದ್ದೇನೆ.
ಪ್ರಮುಖವಾಗಿ ಕುಡಿಯುವ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರಕ್ಕೆ ನನ್ನ ಶತಪ್ರಯತ್ನ ನಡೆಯುತ್ತಿದೆ. ಇನ್ನು ಕ್ಷೇತ್ರದಲ್ಲಿ ಏತ ನೀರಾವರಿ ಯೋಜನೆಯ ಚಿಂತನೆ ನಡೆಯುತ್ತಿದ್ದು, ಈಗಾಗಲೇ 1300 ಕೋಟಿ ರೂ ವೆಚ್ಚದಲ್ಲಿ ಉಸ್ತುವಾರಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಅವರ ನೇತ್ರತ್ವದಲ್ಲಿ ಕೆಲಸವು ಶೇ. 95 ರಷ್ಟು ಕೆಲಸವು ಮುಗಿದಿದೆ ಮುಂದಿನ ಅವಧಿಯಲ್ಲಿ ಅದು ಪೂರ್ಣಗೊಳ್ಳಲಿದೆ. ಉದ್ಯೋಗ ಸ್ರಷ್ಟಿಗಾಗಿ ಮಹತ್ವಾಕಾಂಕ್ಷೆಯ ಯೋಜನೆಯಲ್ಲಿ ಒಂದು ಬ್ರಹತ ಪ್ಯಾಕಿಂಗ್ ಯೂನಿಟ್ ನಿರ್ಮಾಣದ ಮಾಡಿದ್ದಲ್ಲಿ 25 ಸಾವಿರ ಯುವಕರು ಹಾಗೂ ಮಹಿಳೆಯರಿಗೆ ಇದರ ಅನೂಕೂಲ ಸಿಗಲಿದೆ. ಇದಕ್ಕಾಗಿ ಸರಕಾರದಿಂದ 3 ವರ್ಷದಿಂದ ಪ್ರಯತ್ನ ಮುಂದುವರೆದಿದೆ.
ಓರ್ವ ಬೂತ ಮಟ್ಟದ ಕಾರ್ಯಕರ್ತರಿಂದ ಹಿರಿಯ ಮುಖಂಡರ ಶ್ರಮದಿಂದ ಭಟ್ಕಳದಲ್ಲಿ ಬಿಜೆಪಿ ಗೆಲುವು ಸಾಧಿಸಲಿದೆ ಎಂಬ ವಿಶ್ವಾಸ ಈ ಬಾರಿ ದುಪ್ಪಟ್ಟಾಗಿದೆ.
ಜಿಲ್ಲಾ ಉಸ್ತುವಾರಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಮಾತನಾಡಿ ‘ ಕಾರ್ಯಕರ್ತರ ಹುಮ್ಮಸ್ಸು ವಿಜಯೋತ್ಸವ ರೀತಿಯಲ್ಲಿ ಕಂಡು ಬಂದಿದ್ದು ಭಟ್ಕಳದಲ್ಲಿ ಬಿಜೆಪಿ ಪಕ್ಷದ ಗೆಲುವು ನಿಶ್ಚಿತವಾಗಿದೆ ಎಂದರು.
ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಮಾತನಾಡಿ ‘ನಾಮಪತ್ರ ಸಲ್ಲಿಕೆಯ ಮೆರವಣಿಗೆಯಲ್ಲಿ ಸುನೀಲ ನಾಯ್ಕ ಅವರು ಮೇಲಿನ ಪ್ರೀತಿ ಅಭಿಮಾನದಿಂದ ಸೇರಿದ ಕಾರ್ಯಕರ್ತರ ಉತ್ಸಾಹವು ನೂರಕ್ಕೆ ನೂರು ಗೆಲುವು ಸಾಧಿಸಿದಂತಾಗಿದೆ. ಇನ್ನೇನಿದ್ದರು ಚುನಾವಣೆಯಲ್ಲಿ ಮತಗಳ ಅಂತರ ಗೆಲುವು ಮಾತ್ರ ಕಾಯಬೇಕಿದೆ. ಕ್ಷೇತ್ರದಲ್ಲಿ ಮೀನುಗಾರರು ಸಹಿತ ಎಲ್ಲಾ ವರ್ಗದ ಜನರ ವಿಶ್ವಾಸ ಪಡೆದಿರುವ ಸುನೀಲ ನಾಯ್ಕ ಅವರು ಈ ಬಾರಿ ಮತ್ತೆ ಗೆಲುವು ಸಾಧಿಸುವುದು ಖಚಿತ ಎಂದರು.

400ಕ್ಕೂ ಅಧಿಕ ದೇವಸ್ಥಾನದಲ್ಲಿ ಸುನೀಲ ನಾಯ್ಕ ಪರ ಪೂಜೆ ಸಲ್ಲಿಕೆ

ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಸುನೀಲ ನಾಯ್ಕ ಗೆಲುವು ಸಾಧಿಸಲು ಎನ್ನುವ ನಿಟ್ಟಿನಲ್ಲಿ ಅವರ ಅಭಿಮಾನಿಗಳು, ಬಿಜೆಪಿಯ ಕಾರ್ಯಕರ್ತರು ಆಯಾ ಭಾಗದಲ್ಲಿ ಕ್ಷೇತ್ರದ 400ಕ್ಕೂ ಅಧಿಕ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ನಂತರ ನಾಮಪತ್ರ ಸಲ್ಲಿಸಲು ಬಂದ ಸುನೀಲ ನಾಯ್ಕ ಅವರಿಗೆ ಪ್ರಸಾದವನ್ನು ನೀಡಿದ್ದಾರೆ.

ಸುನೀಲ ನಾಯ್ಕರಿಂದ ಎರಡೆರಡು ಬಾರಿ ನಾಮಪತ್ರ ಸಲ್ಲಿಕೆ:
ಬಿಜೆಪಿ ಅಭ್ಯರ್ಥಿ ಸುನೀಲ ನಾಯ್ಕ ಅವರು ಎರಡು ಬಾರಿ ನಾಮಪತ್ರ ಸಲ್ಲಿಕೆ ಮಾಡಲಾಗಿದ್ದು, ಮೊದಲು ಜಿಲ್ಲಾ ಉಸ್ತುವಾರಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿ, ಮಾಜಿ ಸಚಿವ ಪ್ರಮೋದ್ ಮದ್ವರಾಜ್, ಬಿಜೆಪಿ ಮಾಜಿ ಮಂಡಲಾಧ್ಯಕ್ಷ, ನ್ಯಾಯವಾದಿ ರಾಜೇಶ ನಾಯ್ಕ ಅವರೊಂದಿಗೆ ಮಧ್ಯಾಹ್ನ ಒಂದು ಗಂಟೆಗೆ ಸಲ್ಲಿಸಿದರೆ ತದನಂತರ ಸುನೀಲ ನಾಯ್ಕ ಅವರ ಪತ್ನಿ ಹಾಗೂ ಬಿಜೆಪಿ ಮಂಡಲಾಧ್ಯಕ್ಷ ಸುಬ್ರಾಯ ದೇವಾಡಿಗ, ಮೋಹನ ನಾಯ್ಕ, ಭಾಸ್ಕರ ದೈಮನೆ ಅವರೊಂದಿಗೆ ಬಂದು ಎರಡನೇ ಬಾರಿ ನಾಮಪತ್ರ ಸಲ್ಲಿಕೆ ಮಾಡಿದರು.

error: