March 14, 2025

Bhavana Tv

Its Your Channel

ಮೃತ ದೇಹ ಅನುಮಾನಾಸ್ಪದವಾಗಿ ಕೊಳೆತ ಸ್ಥಿತಿಯಲ್ಲಿ ಪತ್ತೆ

ಭಟ್ಕಳ: ರಾತ್ರಿ ಹೊಟೇಲ ಕೆಲಸ ಮುಗಿಸಿ ಊಟ ಮಾಡಿ ಮದ್ಯ ಬಾಟಲಿ ತೆಗಡಿಕೊಂಡು ಹೋದ ವ್ಯಕ್ತಿಯೋರ್ವ ಮಂಗಳವಾರದAದು ಬೆಳಕೆ ಪಿನ್ನುಪಾಲ ರೈಲ್ವೆ ಹಳಿ ಸಮೀಪ ವ್ಯಕ್ತಿಯ ಮೃತ ದೇಹ ಅನುಮಾನಾಸ್ಪದವಾಗಿ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿರುವ ಘಟನೆ ನಡೆದಿದೆ.
ಮೃತ ವ್ಯಕ್ತಿಯನ್ನು ಶೇಖರ ಮಂಜಯ್ಯ ನಾಯ್ಕ ಎಂದು ಗುರುತಿಸಲಾಗಿದೆ. ಈತ ಆ. 5 ರ ರಾತ್ರಿ 11 ಗಂಟೆ ಸುಮಾರಿಗೆ ಪುರವರ್ಗ ದುರ್ಗಾ ಹೋಟೆಲ್ ಗೆ ಕೆಲಸಕ್ಕೆ ಹೋದವನು ಊಟ ಹಾಗೂ ಸಾರಾಯಿ ಬಾಟಲಿ ತೆಗಡಿಕೊಂಡು ಹೋದವನು ಮನೆಗೂ ಹೋಗದೆ ಇದ್ದವನು. ಇಂದು ಬೆಳಕೆ ಪಿನ್ನುಪಾಲ ರೈಲ್ವೆ ಹಳಿ ಪಕ್ಕದಲ್ಲಿ ಕೊಳೆತ ಸ್ಥಿತಿಯಲ್ಲಿ ಮೃತ ದೇಹ ಪತ್ತೆಯಾಗಿದೆ. ಈತನ ಸಾವಿನ ಬಗ್ಗೆ ಸಂಶಯವಿರುವ ಕಾರಣ ಭಟ್ಕಳ ಗ್ರಾಮೀಣ ಠಾಣೆಯಲ್ಲಿ ಮೃತನ ಸಂಬAಧಿ ವೆಂಕಟೇಶ ಮಂಜಯ್ಯ ನಾಯ್ಕ ದೂರು ನೀಡಿದ್ದು. ಪ್ರಕರಣ ದಾಖಲಿಸಿಕೊಂಡ ಗ್ರಾಮೀಣ ಠಾಣೆಯ ಸಿ.ಪಿ.ಐ ಚಂದನ್ ಗೋಪಾಲ ಶವವನ್ನು ಭಟ್ಕಳ ಸರ್ಕಾರಿ ಆಸ್ಪತ್ರೆಗೆ ಸಾಗಿಸಿ ಮರಣೋತ್ತರ ಪರೀಕ್ಷೆ ನಡೆಸಿ ನಂತರ ಮೃತ ದೇಹವನ್ನು ಕುಟುಂಬಸ್ಥರಿಗೆ ಹಸ್ತಾಂತರ ಮಾಡಲಾಗಿದೆ.
ಮೃತನ ಸಾವಿನ ನಿಖರ ಕಾರಣ ಪೊಲೀಸ ತನಿಖೆಯಿಂದ ತಿಳಿದು ಬರಬೇಕಾಗಿದೆ.

error: