April 29, 2024

Bhavana Tv

Its Your Channel

ಮಹಿಳಾ ಅಭ್ಯುದಯ ಸಹಕಾರಿ ಸಂಘ ನಿಯಮಿತಕ್ಕೆ ಆಡಳಿತಾಧಿಕಾರಿಗಳ ನೇಮಕಕ್ಕೆ ಆಗ್ರಹ.

ಭಟ್ಕಳ: ಭಟ್ಕಳದ ಮಹಿಳಾ ಅಭ್ಯುದಯ ಸಹಕಾರಿ ಸಂಘ ನಿಯಮಿತವೂ ಅಭಿವೃದ್ಧಿಯಲ್ಲಿದ್ದು ನಿರ್ಣಾಯಕ ಪಾತ್ರವಹಿಸಿ ಸದ್ಯ 2 ಶಾಖೆಗಳನ್ನು ತೆರೆಯಲಾಗಿದ್ದು 35 ಕೋಟಿ ರೂ. ವ್ಯವಹಾರ ಹೊಂದಿದೆ ಹಾಲಿ ರೂ.32 ಲಕ್ಷ ಲಾಭವಾದಲ್ಲಿದೆ ಸಂಘಧ ವಿರುದ್ಧ ಸುಳ್ಳು ಆರೋಪ ಮಾಡಿರುವದರೊಂದಿಗೆ ಅಧ್ಯಕ್ಷ/ಉಪಾಧ್ಯಕ್ಷ ಆಯ್ಕೆ ಪ್ರಕ್ರಿಯೆಯು ಕಾನೂನಿನಂತೆ ಆಗದೇ ಇರುವದರಿಂದ ಸಂಘಕ್ಕೆ ಆಡಳಿತ ಅಧಿಕಾರಿಯನ್ನು ನೇಮಿಸಬೇಕೆಂದು ಹಾಲಿ ಸಂಘದ ನಿರ್ದೇಶಕಿ ಚಂದ್ರಪ್ರಭಾ ನಾಯ್ಕ ಆಗ್ರಹಿಸಿದರು.
ಜುಲೈ 17 ರಂದು ನಯನ ನಾಗೇಶ ನಾಯ್ಕ ಇವರು ಆಡಳಿತ ಮಂಡಳಿಯ ಅಧ್ಯಕ್ಷರ ಚುನಾವಣೆಗೆ ಅರ್ಜಿ ಸಲ್ಲಿಸಿದ್ದು, ಆದರೆ ಉಳಿದ ನಮ್ಮ ಮಹಿಳಾ ನಿರ್ದೇಶಕಿಯರು ಸದಸ್ಯತ್ವದ ಆಯ್ಕೆಯ ಬಗ್ಗೆ ತಕರಾರು ಮಾಡಿದ್ದು, ಆದರೆ ನಮ್ಮೆಲ್ಲರ ಆಕ್ಷೇಪಣೆಯನ್ನು ಪರಿಗಣಿಸದೆ ನಯನಾ ನಾಗೇಶ ನಾಯ್ಕ ಅವರನ್ನು ಅಧ್ಯಕ್ಷರಾಗಿ ಆಯ್ಕೆ ಮಾಡಲಾಗಿದೆ.
ಆದರೆ ಸದ್ಯ ಸದಸ್ಯತ್ವದ ಬಗ್ಗೆ ಸಹಾಯಕ ನಿಬಂಧಕರು ಸಹಕಾರಿ ಸಂಘಗಳು ಕುಮಟಾ ಅವರಲ್ಲಿ ಮೇಲ್ಮನವಿ ಸಲ್ಲಿಸಿದ್ದೇವೆ. ಹೀಗಿರುವಲ್ಲಿ ಜುಲೈ 31ರಂದು ಸದಸ್ಯರ ಸಭೆ ಕರೆದಿದ್ದು, ನಾವುಗಳು ಸಹ ಹಾಜರಿದ್ದು, ಸದ್ಯ ಮೇಲ್ಮನವಿಯು ಬಾಕಿ ಇರುವುದರಿಂದ ಸಭೆಯನ್ನು ಮುಂದೂಡಬೇಕಾಗಿ ತಕರಾರು ಮಾಡಲಾಗಿದೆ. ತಕರಾರಿನಂತೆಯೇ ಸಭೆಯನ್ನು ಮುಂದೂಡಲಾಗಿದೆ.
ಆದರೆ ಅಗಸ್ಟ 01 ರಂದು ಸಹಾಯಕ ನಿಬಂಧಕರ ಅಧೀನದಲ್ಲಿ ಸಭೆ ನಡೆದಿದ್ದು, ಕಾನೂನು ಬಾಹಿರವಾಗಿ ಸಭೆ ನಡೆಸಿದ್ದಾರೆ. ಎಲ್ಲಾ ಸದಸ್ಯರ ಪೈಕಿ 7 ಜನರು ಮಾತ್ರ ಹಾಜರಿದ್ದು, ತಕರಾರು ಮಾಡಿದ ಸದಸ್ಯರಿಗೆ ಯಾವುದೇ ಮಾಹಿತಿ ನೀಡದೇ, ಇಲ್ಲ ಸಲ್ಲದ ಆರೋಪ ಮಾಡಿ ಠರಾಯಿಸಿದ್ದು, ಅಲ್ಲದೇ ಸಂಘದ ಮುಖ್ಯ ಕಾರ್ಯ ನಿರ್ವಾಹಕರ ವಿರುದ್ಧವು ಇಲ್ಲ ಸಲ್ಲದ ಆರೋಪ ಮಾಡಿ, ಠರಾಯಿಸಿದ್ದಾರೆ.
ಅಲ್ಲದೇ ಸಂಘದ ಅಧ್ಯಕ್ಷರು ಪತ್ರಿಕಾಗೋಷ್ಠಿ ಮಾಡಿ ಸಂಘದಲ್ಲಿ ಭಾರಿ ಅವ್ಯವಹಾವಾಗಿದ್ದು, ಅಲ್ಲದೇ ಚಿನ್ನದ ಸಾಲದಲ್ಲಿಯೂ ವ್ಯತ್ಯಾಸ ಮಾಡಿರುತ್ತಾರೆ ಎಂದು ಆರೋಪ ಮಾಡಿರುವುದು ಸಂಘದ ಬಗ್ಗೆ ಇಲ್ಲ ಸಲ್ಲದ ಸುಳ್ಳು ಆರೋಪ ಮಾಡಿರುವುದು ಓರ್ವ ಹಾಲಿ ಸಂಘದ ನಿರ್ದೇಶಕಿಯಾಗಿ ನಿಮ್ಮ ಹೇಳಿಕೆ ಸಮಂಜಸವಲ್ಲ.
ಈ ಹಿಂದೆ ಲಕ್ಷ್ಮೀ ಮಂಜಪ್ಪ ನಾಯ್ಕ ಸಂಘದ ಮಾಜಿ ಅಧ್ಯಕ್ಷರು ಸಂಘದ ಅಭಿವೃದ್ಧಿಯಲ್ಲಿ ನಿರ್ಣಾಯಕ ಪಾತ್ರವಹಿಸಿ ಸಂಘ ಅಭಿವೃದ್ಧಿ ಹೊಂದಿ 2 ಶಾಖೆಗಳನ್ನು ಸಹ ಹೊಂದಿದೆ.. ಅಲ್ಲದೇ ಸಂಘದ ವ್ಯವಹಾರವು ರೂ.35 ಕೋಟಿ ವ್ಯವಹಾರವಾಗಿದ್ದು, ಹಾಲಿ ರೂ.32 ಲಕ್ಷ ಲಾಭವಾಗಿರುತ್ತದೆ.
ಸದ್ಯ ಸಂಘದ ವಿರುದ್ದ ಸುಳ್ಳು ಆರೋಪ ಮಾಡಿದ್ದಾರೆ. ಸದ್ಯ ಅಧ್ಯಕ್ಷರು, ಉಪಾಧ್ಯಕ್ಷರ ಆಯ್ಕೆ ಪ್ರಕ್ರಿಯೆಯು ಕಾನೂನಿನಂತೆ ಆಗದೇ ಇರುವುದರಿಂದ ಸಂಘಕ್ಕೆ ಆಡಳಿತ ಅಧಿಕಾರಿಯನ್ನು ನೇಮಿಸಬೇಕೆಂಬುವುದು ಸಂಘದ ನಮ್ಮೆಲ್ಲರ ನಿರ್ದೇಶಕಿಯರ ಆಗ್ರಹವಾಗಿದೆ ಎಂದು ಚಂದ್ರಪ್ರಬಾ ನಾಯ್ಕ ಒತ್ತಾಯಿಸಿದರು.
ಮಾಧ್ಯಮದ ಮುಂದೆ ಸಂಘದ ಅಭಿವೃದ್ಧಿಯ ಬಗ್ಗೆ ಸುಳ್ಳು ಆರೋಪ ಮಾಡಿದ್ದು ಅವರು ಅದೇ ಮಾಧ್ಯಮದ ಮುಂದೆ ಕ್ಷಮೆ ಕೇಳಬೇಕೆಂದು ಚಂದ್ರಪ್ರಭಾ ನಾಯ್ಕ ಒತ್ತಾಯಿಸಿದರು.
ಇದೇ ಸಂದರ್ಭದಲ್ಲಿ ಸಂಘದ ಇನ್ನೋರ್ವ ಹಿರಿಯ ನಿರ್ದೇಶಕಿ ಲಕ್ಷ್ಮೀ ನಾಯ್ಕ ಮಾತನಾಡಿ ‘ನಾನು ಕಳೆದ 27 ವರ್ಷದಿಂದ ನಿರ್ದೇಶಕಳಾಗಿ ಕಾರ್ಯನಿರ್ವಯಿಸಿದ್ದೇನೆ ಲಕ್ಷ್ಮೀ ನಾಯ್ಕ ಅವರು ನನ್ನನ್ನು ನಿರ್ದೇಶಕರಾಗಿ ಮಾಡಿದ್ದು, ನಾನು ಈ ಹಿಂದೆ ಅಧ್ಯಕ್ಷೆ ಹಾಗೂ ಉಪಾದ್ಯಾಕ್ಷಿಯಾಗಿ ಕೆಲಸ ಮಾಡಿದ್ದೇನೆ. ಸಂಘವು ಆಗಿನಿಂದ ಈವರೆಗೆ ಪಾಲುದಾರು ಕಷ್ಟ-ನಷ್ಟಗಳನ್ನು ಎದುರಿಸುತ್ತಾ ಒಳ್ಳೆಯ ಪ್ರಗತಿಯನ್ನು ಸಾಧಿಸಿದ್ದೇವೆ ಎಂದರು.
ರಾಜಶ್ರೀ ಮುರಾರಿ ನಾಯ್ಕ ಅವರು ಕಳೆದ 25 ವರ್ಷದಿಂದ ಸಂಘದ ವ್ಯವಸ್ಥಾಪಕರಾಗಿ ಸಂಘದ ಬೆಳವಣಿಗೆಯಲ್ಲಿ ಅವರ ಪಾತ್ರವಿದೆ. ಸಂಘದ ಸಾಲಗಾರರಿಂದ ಸಾಲ ವಸೂಲಿ ಮಾಡುವಲ್ಲಿ ಸಿಬ್ಬಂದಿಗಳೂ ಹಿಂಜರಿದರೂ ಕೂಡ ಹಾಗೂ ಒತ್ತಡಕ್ಕೂ ವಸೂಲಾತಿಗೂ ಮಣಿಯದೇ ಸ್ವತಃ ತಾವೇ ತೆರಳಿ ಸಾಲ ವಸೂಲಾತಿ ಮಾಡಿದ ಉದಾಹರಣೆ ಇದೆ.
ಸಂಘದ ಪ್ರಗತಿಗೆ ಶ್ರಮಿಸಿದ ಅವರ ಶ್ರಮವನ್ನು ಪರಿಗಣಿಸದೇ ಈವರೆಗಿನ ತಮ್ಮ ವ್ಯವಸ್ಥಾಪಕರ ಕರ್ತವ್ಯದಲ್ಲಿ ಯಾವುದೇ ಕಪ್ಪು ಚುಕ್ಕೆ ಹೊಂದಿಲ್ಲದೇ ಕಾರ್ಯನಿರ್ವಹಿಸಿದ ಅವರ ಬಗ್ಗೆ ಇಲ್ಲ-ಸಲ್ಲದ ಆರೋಪವನ್ನು ನಮೂದಿಸಿ ಠರಾವು ಮಾಡಿದ್ದಾರೆ. ಈ ನಡುವೆ ಸಂಘದ ಬಗ್ಗೆ ಸುಳ್ಳು ಆರೋಪ ಮಾಡಿ ಶೇರುದಾರರಲ್ಲಿ ಆತಂಕ ಸ್ರಷ್ಟಿಸಿದ್ದಾರೆ ಇದಕ್ಕೆ ನಮ್ಮ ಖಂಡನೆ ಇದೆ ಎಂದರು.
ಈ ಸಂದರ್ಭದಲ್ಲಿ ಸಂಘದ ನಿರ್ದೇಶಕಿಯರಾದ ಲಕ್ಷ್ಮೀ ಮೋಹನ ಗೊಂಡ, ಭವಾನಿ ನಾಯ್ಕ, ಬಿಬಿ ಹಾಜಿರಾ ಇದ್ದರು.

error: