March 14, 2025

Bhavana Tv

Its Your Channel

ಭಟ್ಕಳ ತಾಲೂಕಿನ ೧೬ ಗ್ರಾಮ ಪಂಚಾಯ ತಗಳ ೨ನೇ ಅವಧಿಗೆ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ಪ್ರಕ್ರಿಯೆ.

ಭಟ್ಕಳ : ಒಟ್ಟೂ ೧೬ ಪಂಚಾಯತಗಳ ಪೈಕಿ ೧೨ ಪಂಚಾಯತಗಳಲ್ಲಿ ಕಾಂಗ್ರೆಸ್ ಬೆ೦ಬಲಿತರು ಅಧ್ಯಕ್ಷ ಹುದ್ದೆಗೆ ಏರಿದ್ದರೆ, ೪ ಪಂಚಾಯತಗಳಲ್ಲಿ ಬೆಂಬಲಿತರು ಬಿಜೆಪಿ ಅಧಿಕಾರ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ಕನಿಷ್ಠ ೬ ಪಂಚಾಯತಗಳಲ್ಲಿ ಕಾಂಗ್ರೆಸ್, ಬಿಜೆಪಿ ಬೆಂಬಲಿತರು ಬಂಡಾಯ ಬಾವುಟ ಹಾರಿಸಿರುವುದು ಸ್ಪಷ್ಟವಾಗಿದೆ. ಅತಿ ದೊಡ್ಡ ಗ್ರಾಮ ಪಂಚಾಯತ
ಆಗಿರುವ ಶಿರಾಲಿ ಗ್ರಾಮ ಪಂಚಾಯತನಲ್ಲಿ ಕಾಂಗ್ರೆಸ್ ಕೈ ಸುಟ್ಟುಕೊಂಡಿದೆ. ಇಲ್ಲಿ ಭಟ್ಕಳ ಬಿಜೆಪಿ ಮಂಡಲದ ಪ್ರಧಾನ ಕಾರ್ಯದರ್ಶಿ ಭಾಸ್ಕರ ದೈಮನೆ ಅಧ್ಯಕ್ಷ ಪಟ್ಟ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ಹೆಬಳೆಯಲ್ಲಿ ಕಾಂಗ್ರೆಸ್ ಲೆಕ್ಕಾಚಾರ ತಲೆ ಕೆಳಗಾಗಿದ್ದು, ಅಧ್ಯಕ್ಷ, ಉಪಾಧ್ಯಕ್ಷ ಹುದ್ದೆಯ ಆಯ್ಕೆಯಲ್ಲಿ ಕಾಂಗ್ರೆಸ್ ಬೆಂಬಲಿತರು ಬಾವುಟ ಬಂಡಾಯದ ಹಾರಿಸಿ ಬೆಂಬಲಿತರ ಕೈ ಹಿಡಿದು ದಡ ಮುಟ್ಟಿಸಿದ್ದಾರೆ. ಮಾರುಕೇರಿ ಕಾಂಗ್ರೆಸ್‌ನಲ್ಲಿ ಬಂಡಾಯ ಸ್ಫೋಟಿಸಿದ್ದು, ಸದಸ್ಯೆ ನಾಗವೇಣಿ ಗೊಂಡ ಬಿಜೆಪಿ ಬೆಂಬಲಿತರ ನೆರವಿನೊಂದಿಗೆ ಅಧ್ಯಕ್ಷ ಪಟ್ಟವನ್ನು ತಮ್ಮದಾಗಿಸಿಕೊಂಡಿದ್ದಾರೆ, ಇಲ್ಲಿ ಬಿಜೆಪಿ ಧುರೀಣ ಎಮ್.ಡಿ.ನಾಯ್ಕ,ಉಪಾಧ್ಯಕ್ಷ ಪಟ್ಟ ಅಲಂಕರಿಸಿದ್ದಾರೆ. ಮುಟ್ಟಳ್ಳಿಯಲ್ಲಿ ಚಿತ್ರಣ ತಿರಗಾಮುರಗಾ ಆಗಿದ್ದು, ಬಿಜೆಪಿ ಬೆಂಬಲಿತ ಸದಸ್ಯೆ ರಜನಿ ನಾಯ್ಕ ಅವರನ್ನು ಸೆಳೆದು ಕಾಂಗ್ರೆಸ್ ಮುಖಂಡರು ಪರಾಕ್ರಮ ಮೆರೆದಿದ್ದಾರೆ, ಮುಂಡಳ್ಳಿ ಗ್ರಾಪಂ ಉಪಾಧ್ಯಕ್ಷ ಹುದ್ದೆ ಆಯ್ಕೆಯಲ್ಲಿ ಕಾಂಗ್ರೆಸ್ ಬೆಂಬಲಿತರು ಬಿಜೆಪಿ ಬೆಂಬಲಿತ ಅಭ್ಯರ್ಥಿ ಪರ ಮತ ಚಲಾಯಿಸಿ ಕಾಂಗ್ರೆಸ್ಸಿಗೆ ಮುಜುಗರ ಉಂಟು ಮಾಡಿದ್ದಾರೆ. ಬೈಲೂರಿನಲ್ಲಿ ಕಾಂಗ್ರೆಸ್ ಬಂಡಾಯವನ್ನು ಹತ್ತಿಕ್ಕಿ ಯಶಸ್ಸು ಗಳಿಸಿದ್ದು, ಬಿಜೆಪಿ ಬೆಂಬಲಿತರ ನೆರವಿನೊಂದಿಗೆ ಅಧ್ಯಕ್ಷ ಪಟ್ಟಿ ಹಿಡಿಯುವ ಕೃಷ್ಣ ಭಂಡಾರಿ ಅವರ ಪ್ರಯತ್ನ ಫಲ ಕೊಟ್ಟಿಲ್ಲ.

error: