April 29, 2024

Bhavana Tv

Its Your Channel

ಭಟ್ಕಳದ ೧೨ ಗ್ರಾಮ ಪಂಚಾಯತನಲ್ಲಿ ಕಾಂಗ್ರೆಸ್ ಜಯಭೇರಿ:

ಭಟ್ಕಳ ; ತಾಲ್ಲೂಕಿನಲ್ಲಿ ನಡೆದ ಒಟ್ಟೂ ೧೬ ಗ್ರಾಮ ಪಂಚಾಯತ ಅಧ್ಯಕ್ಷ-ಉಪಾಧ್ಯಕ್ಷರ ಚುನಾವಣೆಯಲ್ಲಿ ಸಚಿವ ಮಂಕಾಳ್ ವೈದ್ಯರ ನೇತೃತ್ವದ ಆಡಳಿತಾರೂಢ ಕಾಂಗ್ರೆಸ್ ಪಕ್ಷವು ೧೨ ಪಂಚಾಯತನಲ್ಲಿ ಜಯಭೇರಿ ಬಾರಿಸಿದೆ. ಉಳಿದ ೪ರಲ್ಲಿ ಬಿಜೆಪಿಯ ಬೆಂಬಲಿತರು ಗೆಲುವು ಸಾಧಿಸಿದ್ದಾರೆ. ಈ ಕುರಿತು ಭಟ್ಕಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವೆಂಕಟೇಶ ನಾಯ್ಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ತಾಲ್ಲೂಕಿನ ಬೈಲೂರು,ಮಾವಳ್ಳಿ-೧, ಮಾವಳ್ಳಿ-೨, ಕೈಕೀಣಿ, ಕೊಪ್ಪ, ಬೇಂಗ್ರೆ, ಮುಂಡಳ್ಳಿ, ಮುಟ್ಟಳ್ಳಿ, ಯಲ್ವಡಿಕವೂರ, ಬೆಳಕೆ, ಮಾರುಕೇರಿ ಮತ್ತು ಹಾಡುವಳ್ಳಿ ಗ್ರಾಮ ಪಂಚಾಯತನಲ್ಲಿ ಕಾಂಗ್ರೆಸ್ ಪಕ್ಷದ ಬೆಂಬಲಿತರು ಆಡಳಿತದ ಚುಕ್ಕಾಣಿ ಹಿಡಿದಿದ್ದಾರೆ. ಅದರಂತೆ ಶಿರಾಲಿ, ಹೆಬಳೆ, ಮಾವಿನಕುರ್ವೆ ಮತ್ತು ಕೋಣಾರನಲ್ಲಿ ಬಿಜೆಪಿಯ ಬೆಂಬಲಿತರು ಅಧಿಕಾರವನ್ನ ಪಡೆದುಕೊಂಡಿದ್ದಾರೆ.


ಕಾಂಗ್ರೆಸ್ ಬೆಂಬಲಿತ ಗ್ರಾಮ ಪಂಚಾಯತ:
೧) ಬೈಲೂರ :
ಅಧ್ಯಕ್ಷ- ಕೃಷ್ಣ ಭೈರಯ್ಯ ನಾಯ್ಕ
ಉಪಾಧ್ಯಕ್ಷ-ಕುಸುಮ ದೇವಾಡಿಗ
೨) ಮಾವಳ್ಳಿ-೧
ಅಧ್ಯಕ್ಷೆ- ನಯನಾ ನಾಯ್ಕ ( ಭಟ್ಕಳದ ಮಹಿಳಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷೆ)
ಉಪಾಧ್ಯಕ್ಷ- ನಾಸೀರ್
೩) ಮಾವಳ್ಳಿ-೨
ಅಧ್ಯಕ್ಷೆ- ನಾಗರತ್ನ ಪಡಿಯಾರ
ಉಪಾಧ್ಯಕ್ಷ-ರಾಘವೇಂದ್ರ ನಾಯ್ಕ
೪) ಕೈಕೀಣಿ :
ಅಧ್ಯಕ್ಷ- ರಾಜು ನಾಯ್ಕ (ಗಡಗಡೆ)
ಉಪಾಧ್ಯಕ್ಷೆ- ರತ್ನಾ ಮೊಗೇರ
೫) ಬೇಂಗ್ರೆ :
ಅಧ್ಯಕ್ಷೆ- ಪ್ರಮೀಳಾ ಡಿಕೋಸ್ತ
ಉಪಾಧ್ಯಕ್ಷ- ಗೋವಿಂದ ನಾಯ್ಕ
೬) ಕೊಪ್ಪ :
ಅಧ್ಯಕ್ಷ- ಮಾಸ್ತಿ ಗೊಂಡ
ಉಪಾಧ್ಯಕ್ಷ-ಗೋವಿಂದ ಮರಾಠಿ
೭) ಮುಟ್ಟಳ್ಳಿ :
ಅಧ್ಯಕ್ಷೆ- ರಜನಿ ನಾಯ್ಕ
ಉಪಾಧ್ಯಕ್ಷೆ- ಲಕ್ಷ್ಮಿ ಗೊಂಡ
೮) ಯಲ್ವಡಿಕವೂರ :
ಅಧ್ಯಕ್ಷೆ- ಪಾರ್ವತಿ ಗೊಂಡ
ಉಪಾಧ್ಯಕ್ಷೆ- ಮೇರಿ ರೋಡ್ರಿಗಿಸ್
೯) ಬೆಳಕೆ :
ಅಧ್ಯಕ್ಷ- ಜಗದೀಶ ನಾಯ್ಕ
ಉಪಾಧ್ಯಕ್ಷೆ- ಜಾನಕಿ ನಾಯ್ಕ
೧೦) ಹಾಡುವಳ್ಳಿ :
ಅಧ್ಯಕ್ಷ- ಶ್ರೀಧರ ಮಂಜು ಶೆಟ್ಟಿ
ಉಪಾಧ್ಯಕ್ಷೆ- ನಾಗಮ್ಮ ನಾಯ್ಕ
೧೧) ಮಾರುಕೇರಿ :
ಅಧ್ಯಕ್ಷೆ: ನಾಗವೇಣಿ ಗೊಂಡ
ಉಪಾಧ್ಯಕ್ಷ: ಎಂ.ಡಿ.ನಾಯ್ಕ -ಬಿಜೆಪಿ
೧೨) ಮುಂಡಳ್ಳಿ :
ಅಧ್ಯಕ್ಷೆ- ಪದ್ಮಾವತಿ ಮೊಗೇರ
ಉಪಾಧ್ಯಕ್ಷ- ಗೋವಿಂದ ಮೊಗೇರ- ಬಿಜೆಪಿ.

ಬಿಜೆಪಿ ಬೆಂಬಲಿತ ಪಂಚಾಯತ
೧) ಶಿರಾಲಿ
ಅಧ್ಯಕ್ಷ- ಭಾಸ್ಕರ ದೈಮನೆ
ಉಪಾಧ್ಯಕ್ಷೆ- ಜ್ಯೋತಿ ನಾಯ್ಕ ಕಾಂಗ್ರೆಸ್
೨) ಹೆಬಳೆ :
ಅಧ್ಯಕ್ಷೆ: ಪಾರ್ವತಿ ನಾಯ್ಕ
ಉಪಾಧ್ಯಕ್ಷೆ- ಮಾದೇವಿ ಮೊಗೇರ
೩) ಮಾವಿನಕುರ್ವೆ :
ಅಧ್ಯಕ್ಷ- ಶ್ರೀನಿವಾಸ ಮೊಗೇರ
ಉಪಾಧ್ಯಕ್ಷೆ- ಚಂದ್ರಾವತಿ ದೇವಡಿಗ
೪) ಕೋಣಾರ :
ಅಧ್ಯಕ್ಷ- ನಾಗಪ್ಪ ಗೊಂಡ
ಉಪಾಧ್ಯಕ್ಷೆ: ದೇವಿ ಗೊಂಡ

error: