
ಭಟ್ಕಳ: ಕೆಲದಿನಗಳಿಂದ ಸಚಿವ ಮಂಕಾಳ ವೈದ್ಯ ಅವರ ಬಲಗೈ ಹೆಬ್ಬೆರಳಿಗೆ ಉಗುರು ಸುತ್ತು( ಪೆರೋನ್ಯಾಚಿಯಾ) ಆಗಿದ್ದು ಸೋಮವಾರದಂದು ರಾತ್ರಿ ಇದರ ಚಿಕಿತ್ಸಾಗಿ ಸರಕಾರಿ ಆಸ್ಪತ್ರೆಗೆ ಬಂದು ಚಿಕಿತ್ಸೆ ಪಡೆದುಕೊಂಡಿದ್ದಾರೆ.

ನಿರAತರ ಕೆಲಸದ ಒತ್ತಡದಲ್ಲಿ ಸಚಿವ ಮಂಕಾಳ ವೈದ್ಯ ಅವರು ತಮ್ಮ ಹೆಬ್ಬೆರಳಿಗಾದ ಉರುಗು ಸುತ್ತಿನ ಚಿಕಿತ್ಸೆಯನ್ನು ಮಾಡಿಸಲು ಸಾಧ್ಯವಾಗಿಲ್ಲವಾಗಿತ್ತು. ಆದರೆ ಸೋಮವಾರದಂದು ತಾಲೂಕಾ ಆಡಳಿತ ಸೌಧದಲ್ಲಿ ಜಿಲ್ಲಾ ಮಟ್ಟದ ಒಳಚರಂಡಿ ಯೋಜನೆಯ ಪ್ರಗತಿ ಪರಿಶೀಲನಾ ಸಭೆಯನ್ನು ಉಸ್ತುವಾರಿ ಸಚಿವ ಮಂಕಾಳ ವೈದ್ಯ ಅವರು ನಡೆಸಿದ್ದು ಆ ಬಳಿಕ ತಾಲೂಕು ಆರೋಗ್ಯಾಧಿಕಾರಿ ಡಾ.ಸವಿತಾ ಕಾಮತ ಅವರ ಬಳಿ ಉಗುರು ಸುತ್ತು ಆಗಿರುವದನ್ನು ತೋರಿಸಿದ್ದಾರೆ. ಈ ವೇಳೆ ಡಾ. ಸವಿತಾ ಕಾಮತ ಅವರು ತಕ್ಷಣಕ್ಕೆ ಇದಕ್ಕೊಂದು ಚಿಕ್ಕ ಶಸ್ತ್ರಚಿಕಿತ್ಸೆ ಮಾಡಬೇಕಾದ ಅನಿವಾರ್ಯತೆಯನ್ನು ಸೂಚಿಸಿದ್ದರು.
ಈ ಹಿನ್ನೆಲೆ ಸಚಿವರು ತಮ್ಮೆಲ್ಲ ಸಭೆ ಹಾಗೂ ಕೆಲಸವನ್ನು ಉಸ್ತುವಾರಿ ಸಚಿವರ ಕಚೇರಿಯಲ್ಲಿ ಸಾರ್ವಜನಿಕರ ಅಹವಾಲು ಸ್ವೀಕರಿಸಿ ಜನರ ಸಮಸ್ಯೆಯನ್ನು ಆಲಿಸಿ ರಾತ್ರಿ ವೇಳೆ ಸಾಮಾನ್ಯರಂತೆ ಸರಕಾರಿ ಆಸ್ಪತ್ರೆಗೆ ಬಂದು ವೈದ್ಯರ ಸೂಚನೆಯಂತೆ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡಿದ್ದಾರೆ. 15 ನಿಮಿಷದ ಚಿಕ್ಕ ಶಸ್ತ್ರಚಿಕಿತ್ಸೆಯನ್ನು ಆಸ್ಪತ್ರೆಯ ಸರ್ಜನ ಡಾ. ಅರುಣ ಕುಮಾರ ಹಾಗೂ ತಾಲೂಕಾ ಆರೋಗ್ಯಾಧಿಕಾರಿ, ಅರವಳಿಕೆ ತಜ್ಞೆ ಡಾ. ಸವಿತಾ ಕಾಮತ ಹಾಗೂ ಡಾ. ಲಕ್ಷ್ಮೀಶ ನಾಯ್ಕ ಅವರು ನಡೆಸಿದರು.
ಉಗುರು ಸುತ್ತ ಪ್ರಮಾಣ ಹೆಚ್ಚಿದ್ದ ಹಿನ್ನೆಲೆ ಕಾಳಜಿ ಅನಿವಾರ್ಯ ಎಂದು ಸಚಿವರಿಗೆ ಡಾ. ಅರುಣ ಕುಮಾರ ಅವರು ಸೂಚಿಸಿದರು. ವಿಶೇಷವಾಗಿ ಕಾಳಜಿ ವಹಿಸಿ ಶಸ್ತ್ರಚಿಕಿತ್ಸೆ ಮಾಡಿದ ವೈದ್ಯರ ತಂಡಕ್ಕೆ ಸಚಿವರು ಧನ್ಯವಾದ ಸಲ್ಲಿಸಿದರು.
More Stories
ಜನವರಿ 7 ಭಟ್ಕಳ ತಾಲೂಕ 11ನೆ ಸಾಹಿತ್ಯ ಸಮ್ಮೇಳ
ಭಟ್ಕಳ ತಾಲೂಕು ಕಸಾಪದಿಂದ ರಸಪ್ರಶ್ನೆ ಸ್ಪರ್ಧೆ – ಬಹುಮಾನ ವಿತರಣೆ.
ಭಟ್ಕಳದ ಶ್ರೀ ಜ್ಞಾನೇಶ್ವರಿ ಶಿಕ್ಷಣ ಮಹಾವಿದ್ಯಾಲಯದಲಿ ದೀಪದಾನ ಕಾರ್ಯಕ್ರಮ