
ಭಟ್ಕಳ: ಯಾವುದೋ ವಿಷಯವನ್ನು ಮನಸ್ಸಿಗೆ ಹಚ್ಚಿಕೊಂಡ ವ್ಯಕ್ತಿಯೋರ್ವ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಕೋಟೇಶ್ವರ ನಗರದ ಹರಿಜನಕೇರಿಯಲ್ಲಿ ನಡೆದಿದೆ.
ಮೃತ ವ್ಯಕ್ತಿಯನ್ನು ರಮೇಶ ಮುತ್ತುಗೋಪಾಲ ಹರಿಜನ (45)ಎಂದು ತಿಳಿದು ಬಂದಿದೆ. ಈತ ಪುರಸಭೆಯಲ್ಲಿ ಪೌರ ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದನು. ಕಳೆದ ಒಂದು ವಾರದ ಹಿಂದೆ ಯಾವುದೋ ವಿಷಯವನ್ನು ಮನಸ್ಸಿಗೆ ಹಚ್ಚಿಕೊಂಡು ಮನೆಯವರೊಂದಿಗೆ ಸರಿಯಾಗಿ ಮಾತನಾಡದೇ ತನ್ನಷ್ಟಕ್ಕೆ ತಾನೇ ಇದ್ದವರು. ಮನೆಯಲ್ಲಿ ಯಾರೂ ಇಲ್ಲದಿರುವುದನ್ನು ಘಮನಿಸಿ ತಾನು ಹಾಕಿರುವ ಲುಂಗಿಯಲ್ಲಿ ಮನೆಯ ಪಕಾಸಿಗೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ .
ಈ ಕುರಿತು ಭಟ್ಕಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
More Stories
ಭಟ್ಕಳ ಸರಕಾರಿ ಆಸ್ಪತ್ರೆಯಲ್ಲಿ ಉಗುರು ಚಿಕಿತ್ಸೆ ಮಾಡಿಸಿಕೊಂಡ ಸಚಿವ ಮಂಕಾಳ ವೈದ್ಯ
ಆಟೋ ರಿಕ್ಷಾ ಡಿಕ್ಕಿ ಪಾದಚಾರಿ ಸಾವು
ತಾಲೂಕಾ ಮಟ್ಟದ ಸ್ವ ಉದ್ಯೋಗ ತರಬೇತಿ ಶಿಬಿರ