
ಭಟ್ಕಳ: ಪಟ್ಟಣದ ಸ್ನೇಹ ವಿಶೇಷ ಶಾಲೆಯ ಮಕ್ಕಳ ನಿಷ್ಕಲ್ಮಶ ಪ್ರೀತಿ, ಶುಭ ಹಾರೈಕೆಗಳಿಗೆ ಬೆಲೆ ಕಟ್ಟಲು ಸಾದ್ಯವಿಲ್ಲ. ದೇವರು ಅವರಿಗೆ ಒಳ್ಳೆಯದು ಮಾಡಲಿ ಎಂದು ಎಂದು ಕರ್ನಾಟಕ ರಾಜ್ಯ ಒಬಿಸಿ ಮೋರ್ಚಾದ ಉಪಾಧ್ಯಕ್ಷ ಈಶ್ವರ ನಾಯ್ಕ ಹೇಳಿದರು.



ಅವರು ಪಟ್ಟಣದ ಕೋಕ್ತಿನಗರದ ಸ್ನೇಹ ವಿಶೇಷ ಶಾಲೆಯ ಮಕ್ಕಳೊಂದಿಗೆ ಕೇಕ್ ಕಟ್ ಮಾಡುವ ಮೂಲಕ ತಮ್ಮ ಜನ್ಮ ದಿನವನ್ನು ಸರಳವಾಗಿ ಆಚರಿಸಿಕೊಂಡರು. ಬಳಿಕ ಮಾತನಾಡಿದ ಅವರು ಶ್ರೀದೇವರ ಕೃಪೆ ಗುರುಹಿರಿಯರ ಆಶೀರ್ವಾದ ಹಿತೈಷಿಗಳ ಹಾರೈಕೆಗಳೊಂದಿಗೆ ಪ್ರತಿವರ್ಷದಂತೆ ಈ ವರ್ಷ ಕೂಡ ನನ್ನ ಜನ್ಮದಿನವನ್ನು ಆಚರಿಸುವ ಅವಕಾಶ ಸಿಕ್ಕಿದೆ. ವಿಶೇಷ ಮಕ್ಕಳ ಸರ್ವಾಂಗೀಣ ಅಭಿವೃದ್ಧಿಗೆ ತಾನು ಸದಾ ಸಿದ್ದ ಎಂದು ಭರವಸೆ ನೀಡಿದರು. ಬಳಿಕ ಮಕ್ಕಳೊಂದಿಗೆ ಸಿಹಿ ಹಂಚಿ ಸಂಭ್ರಮಿಇಸದರು. ಈ ಸಂದರ್ಬದಲ್ಲಿ ಸ್ನೇಹಾ ವಿಶೇಷ ಶಾಲೆಯ ಮುಖ್ಯಸ್ಥೆ ಮಾಲತಿ ಉದ್ಯಾವರ, ಸಹಶಿಕ್ಷಕಿಯರು, ಈಶ್ವರ ನಾಯ್ಕ ಅಭಿಮಾನಿ ಬಳಗದ ಸಂಗಡಿಗರು ಸೇರಿ ಇತರರು ಇದ್ದರು. ಅದಾದ ಬಳಿಕ ಭಟ್ಕಳದ ತಾಲೂಕಾಸ್ಪತ್ರೆಗೆ ತೆರಳಿ ಒಳರೋಗಿಗಳಿಗೆ ಹಣ್ಣುಹಂಪಲು ವಿತರಿಸಿ ಅವರಿಂದ ಆಶೀರ್ವಾದ ಪಡೆದರು ಶೀಘ್ರ ಗುಣಮುಖರಾಗಲಿ ಎಂದು ಹಾರೈಸಿದರು.
More Stories
ಜನವರಿ 7 ಭಟ್ಕಳ ತಾಲೂಕ 11ನೆ ಸಾಹಿತ್ಯ ಸಮ್ಮೇಳ
ಭಟ್ಕಳ ತಾಲೂಕು ಕಸಾಪದಿಂದ ರಸಪ್ರಶ್ನೆ ಸ್ಪರ್ಧೆ – ಬಹುಮಾನ ವಿತರಣೆ.
ಭಟ್ಕಳದ ಶ್ರೀ ಜ್ಞಾನೇಶ್ವರಿ ಶಿಕ್ಷಣ ಮಹಾವಿದ್ಯಾಲಯದಲಿ ದೀಪದಾನ ಕಾರ್ಯಕ್ರಮ