April 27, 2024

Bhavana Tv

Its Your Channel

ಭಟ್ಕಳದ ಬಿಜೆಪಿ ಕಛೇರಿಯಲ್ಲಿ ಭಾರತೀಯ ಜನತಾ ಪಾರ್ಟಿ ಉತ್ತರ ಕನ್ನಡ ಮಹಿಳಾ ಮೋರ್ಚಾದ ಜಿಲ್ಲಾ ಕಾರ್ಯಕಾರಿಣಿ ಸಭೆ

ಭಟ್ಕಳ : ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದೆ ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಎನ್ ಎಸ್ ಹೆಗಡೆ ಉತ್ತರ ಕನ್ನಡ ಜಿಲ್ಲೆಯಲ್ಲಿ ನಮ್ಮ ವಿರೋಧ ಪಕ್ಷದ ಅಭ್ಯರ್ಥಿ ಒಬ್ಬ ಮಹಿಳೆಯೆ ಆಗಿರುವುದರಿಂದ ನಾವು ಇನ್ನೂ ಹೆಚ್ಚಿಗೆ ಕೆಲಸ ಮಾಡಬೇಕಾಗಿದೆ. ಈಗಾಗಲೇ ಅವರು ಪ್ರಚಾರ ಕಾರ್ಯವನ್ನು ಆರಂಭಿಸಿದ್ದಾರೆ ಪತ್ರಿಕೆಗಳಲ್ಲಿ ಅವರ ಪ್ರಚಾರ ವೈಖರಿಯನ್ನು ಗಮನಿಸುವಾಗ ಅವರು ಗ್ಯಾರಂಟಿ ಯೋಜನೆಗಳನ್ನೇ ಮುಂದಿಟ್ಟುಕೊAಡು ಮತವನ್ನು ಕೇಳುತ್ತಿದ್ದಾರೆ. ಆದರೆ ನಾವು ಗ್ಯಾರಂಟಿಗಳ ಬಗ್ಗೆ ತಲೆಕೇಡಿಸಿಕೊಳ್ಳುವುದು ಬೇಡ ನಮಗೆ ಮೋದಿಯವರು ನೀಡಿದ ಗ್ಯಾರಂಟಿಗಳಿವೆ, ಮೋದಿಯವರು ನೀಡಿದ ಗ್ಯಾರಂಟಿಗಳನ್ನೇ ಇಟ್ಟುಕೊಂಡು ಹೋಗೋಣ, ಕಾಂಗ್ರೇಸ್ ಕೊಟ್ಟ ಸುಳ್ಳು ಗ್ಯಾರಂಟಿಗಳು ನಾವು ತಲೆಯಲ್ಲಿಟ್ಟುಕೊಳ್ಳುವುದು ಬೇಡ ಎಂದರು.

1999 ರಲ್ಲಿ ಅಟಲ್ ಬಿಹಾರಿ ವಾಜಪೇಯಿವರು ಪ್ರಧಾನಿಯಾದರು. 21 ಪಕ್ಷಗಳನ್ನು ಸೇರಿಸಿಕೊಂಡು ದೇಶಕ್ಕೆ ಸಮರ್ಥವಾದ ಆಡಳಿತ ಕೊಟ್ಟರು. ಇಡೀ ದೇಶದಲ್ಲಿ ಅಮೂಲಾಗ್ರ ಬದಲಾವಣೆಯನ್ನು ತಂದರು. ಆಗ ಜನ ಹೇಳ್ತಾ ಇದ್ರು ಇಂಡಿಯಾ ಇಸ್ ಸೈನಿಂಗ್! ಭಾರತ ಪ್ರಜ್ವಲಿಸುತ್ತಿದೆ ಎಂದು ಆ ಪರಿಯಾದ ಅಭಿವೃದ್ದಿ ಕಾರ್ಯಕ್ರಮವನ್ನು ವಾಜಪೇಯಿ ಹಮ್ಮಿಕೊಂಡಿದ್ದರು. ಆದರೆ 2004 ರಲ್ಲಿ ನಡೆದ ಚುನಾವಣೆಯಲ್ಲಿ ಅಟಲ್ ಬಿಹಾರಿ ವಾಜಪೇಯಿ ಸೋಲು ಕಾಣಬೇಕಾಯಿತು. ಆ ಸಂದರ್ಭದಲ್ಲಿ ವಾಜಪೇಯಯವರು ತಾನೂ ಈ ದೇಶದ ಜನತೆಗೆ ಮತಗಟ್ಟೆಗೆ ಬರುವ ಕಟ್ಟಕಡೆಯ ವ್ಯಕ್ತಿಗಳಿಗೂ ಅನುಕೂಲವಾಗುವಂತ ಅಭಿವೃದ್ಧಿ ಕಾರ್ಯವನ್ನು ಮಾಡಿದೆ. ಶಿಕ್ಷಣದಲ್ಲಿ ಅಮೂಲಾಗ್ರ ಬದಲಾವಣೆಯನ್ನು ತಂದೆ, ರಾಷ್ಟ್ರೀಯ ಹೆದ್ದಾರಿಗಳನ್ನು ನಿರ್ಮಾಣ ಮಾಡಿದೆ ಆದರೆ ನಮ್ಮ ಕಾರ್ಯಕರ್ತರು ಮತದಾರರಿಗೆ ನಮ್ಮ ಕಾರ್ಯಕ್ರಮವನ್ನು ಮನದಟ್ಟು ಮಾಡುವುದರಲ್ಲಿ ವಿಫಲರಾದರು ಎಂದಿದ್ದರು ಎಂದರು.

2004 ರಲ್ಲಿ ಕೇಂದ್ರದಲ್ಲಿ ಕಾಂಗ್ರೇಸ್ ಪಕ್ಷ ಅಧಿಕಾರ ಹಿಡಿಯಿತು 10 ವರ್ಷಗಳ ಕಾಲ ಪಾತಾಳ, ಭೂಮಿ, ಆಕಾಶವನ್ನು ಬಿಡದೆ ಭ್ರಷ್ಟಾಚಾರ ಮಾಡಿತು ಇಡೀ ದೇಶವನ್ನು ಕೊಳ್ಳೆ ಹೊಡೆಯಿತು. ಆದರೆ 2014 ರಿಂದ ಇಲ್ಲಿಯವರೆಗೂ ಇಡೀ ಪ್ರಪಂಚ ಭಾರತವನ್ನು ನೋಡುವಂತ ಆಳ್ವಿಕೆಯನ್ನು ಪ್ರಧಾನಿ ನರೇಂದ್ರ ಮೋದಿಯವರು ನೀಡಿದ್ದಾರೆ ಇದನ್ನು ಉಳಿಸಿಕೊಳ್ಳಬೇಕಾದ ಅಗತ್ಯ ಇದೆ ಎಂದರು.

ಸಭೆಯಲ್ಲಿ ರಾಜ್ಯ ಮಹಿಳಾ ಮೋರ್ಚಾದ ಪ್ರಧಾನ ಕಾರ್ಯದರ್ಶಿ ಶಿಲ್ಪಾ ಸುವರ್ಣ, ರಾಜ್ಯ ಹಿಂದುಳಿದ ವರ್ಗಗಳ ಮೋರ್ಚಾದ ಉಪಾಧ್ಯಕ್ಷರಾದ ಈಶ್ವರ ನಾಯ್ಕ ಮತ್ತಿತರರು ಇದ್ದರು.

ವರದಿ ; ಈಶ್ವರ ನಾಯ್ಕ ಭಟ್ಕಳ

error: