April 27, 2024

Bhavana Tv

Its Your Channel

ವಿವಿಧ ಇಲಾಖೆಯ ನೌಕರರಿಗಾಗಿ ಮಣಿಪಾಲ ಆಸ್ಪತ್ರೆಯ ಪರಿಣಿತ ವೈದ್ಯರಿಂದ ಉಚಿತ ವೈದ್ಯಕೀಯ ಶಿಬಿರ

ಭಟ್ಕಳ: ತಾಲೂಕಾ ಸರ್ಕಾರಿ ಆಸ್ಪತ್ರೆಯಲ್ಲಿ ಕರ್ನಾಟಕ ರಾಜ್ಯ ನೌಕರರ ಸಂಘ ಭಟ್ಕಳ, ಕಸ್ತೂರ್ಬಾ ಆಸ್ಪತ್ರೆ ಮಣಿಪಾಲ ಹಾಗೂ ಸರಕಾರಿ ಆಸ್ಪತ್ರೆ ಭಟ್ಕಳ ಇವರ ಸಹಯೋಗದಲ್ಲಿ ವಿವಿಧ ಇಲಾಖೆಯ ನೌಕರರಿಗಾಗಿ ಮಣಿಪಾಲ ಆಸ್ಪತ್ರೆಯ ಪರಿಣಿತ ವೈದ್ಯರಿಂದ ಉಚಿತ ವೈದ್ಯಕೀಯ ಶಿಬಿರವನ್ನು ಏರ್ಪಡಿಸಲಾಗಿತ್ತು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ತಾಲೂಕಾ ದಂಡಾಧಿಕಾರಿ ನಾಗರಾಜ ನಾಯ್ಕಡ ಸಾದಾರಣವಾಗಿ ಎಲ್ಲಾ ಇಲಾಖೆಯಲ್ಲೂ ಒಬ್ಬೊಬ್ಬ ನೌಕರರು ಎರಡು ಮೂರು ಪ್ರಬಾರ ನಿಭಾಯಿಸುವ ಸಂದಿಗ್ಧತೆ ಇರುತ್ತದೆ. ವಿಡಿಯೋ ಕಾನ್ಪರೆನ್ಸ್ ಸಭೆ ಇನ್ನಿತರ ಕಾರ್ಯವನ್ನು ನಿರಂತರವಾಗಿ ಮಾಡುವುದರಿಂದ ನೌಕರರ ಆರೋಗ್ಯದ ಮೇಲೆ ಕೆಟ್ಟ ಪರಿಣಾಮಗಳು ಬೀರುತ್ತದೆ. ಆದರಿಂದ ಆರೋಗ್ಯ ತಪಾಸಣೆಯಂತ ಶಿಬಿರಗಳು ಸಮಯೋಚಿತವಾಗಿದೆ. ಇಂತಹ ಶಿಬಿರದ ಪ್ರಯೋಜನವನ್ನು ಎಲ್ಲಾ ನೌಕರರು ಪಡೆದುಕೊಳ್ಳಬೇಕು ಎಂದರು.

ತಾಲೂಕು ವೈಧ್ಯಾಧಿಕಾರಿಗಳಾದ ಸವಿತಾ ಕಾಮತ್ ಮಾತನಾಡಿ ಹಳ್ಳಿಯ ಜನರು ಅವಿದ್ಯಾವಂತರಿಗೆ ವೈದ್ಯರು ಹೇಳಿದ ವಾಕ್ಯ ವೇದವಾಕ್ಯದಂತೆ ನಾವು ಹೇಳಿದ ಕ್ರಮವನ್ನು ಅನುಸರಿಸುತ್ತಾರೆ ಆದರೆ ವಿದ್ಯಾವಂತರು ಮತ್ತು ಸರ್ಕಾರಿ ನೌಕರರು ಯಾವುದೇ ರೀತಿಯ ಆರೋಗ್ಯ ತೊಂದರೆಗೆ ಒಳಗಾದಾಗ ಮೊದಲು ವೈದ್ಯರನ್ನು ನೋಡುವ ಮೊದಲು ಜಾಲತಾಣದಲ್ಲಿ ಜಾಲಾಡಿ ಪ್ರಶ್ನೆಗಳನ್ನು ಹೊತ್ತು ತರುತ್ತಾರೆ. ವೈಜ್ಞಾನಿಕವಾಗಿ ವೈದ್ಯರು ಸಲಹೆ ಮಾಡುವ ಔಷದಗಳನ್ನು ಬಿಟ್ಟು ಅನ್ಯರು ಹೇಳುವ ಮನಸ್ಸಿಗೆ ಖುಷಿ ನೀಡುವ ಉಪಕ್ರಮವನ್ನು ಅನುಸರಿಸಿಲು ಹೋಗಿ ಆರೋಗ್ಯವನ್ನ ಮತ್ತಷ್ಟು ಹಾಳುಮಾಡಿಕೊಳ್ಳುತ್ತಾರೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಪ್ರಾಸ್ತಾವಿಕ ಮಾತನಾಡಿದ ನೌಕರರ ಸಂಘದ ಅಧ್ಯಕ್ಷ ಮೋಹನ ನಾಯ್ಕ ಸರ್ಕಾರಿ ನೌಕರರ ಸಂಘ ಕೇವಲ ನೌಕರ ಸ್ನೇಹಿ ಕೆಲಸವನ್ನು ಮಾಡುತ್ತಿಲ್ಲ ಅದರ ಜತೆಜತೆಗೆ ಅನೇಕ ಸಾಮಾಜಿಕ ಕಾರ್ಯಗಳನ್ನು ಸಹ ಮಾಡುತ್ತಿದೆ. ಸರ್ಕಾರಿ ನೌಕರರು ಮಾನಸಿಕ ಒತ್ತಡದಲ್ಲಿ ಕೆಲಸ ಮಾಡುವ ಸನ್ನಿವೇಶವನ್ನು ನಾವು ನೋಡುತ್ತಿದ್ದೇವೆ. ಕೆಲವು ಇಲಾಖೆಗಳಲ್ಲಿ ೨೦ ಮಂದಿ ಕೆಲಸ ಮಾಡುವ ಜಾಗದಲ್ಲಿ ಕೇವಲ ೫ ರಿಂದ ಹತ್ತು ಮಂದಿ ಕಾರ್ಯನಿರ್ವಹಿಸುತ್ತಿದ್ದಾರೆ ಹೀಗಿರುವಾಗ ಸಹಜವಾಗಿ ನೌಕರರು ಒತ್ತಡದಲ್ಲಿ ಕೆಲಸ ಮಾಡಬೇಕಾಗುತ್ತದೆ ಇದರಿಂದಾಗಿ ಅತಿಯಾದ ಕೆಲಸದೊತ್ತಡ ನೌಕರರ ಮಾನಸಿಕ ಹಾಗೂ ದೈಹಿಕ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಆ ಕಾರಣಕ್ಕಾಗಿ ಇಂತಹ ಶಿಬಿರಗಳ ಅವಶ್ಯಕತೆ ಇದೆ ಎಂದರು.
ಶಿಬಿರದಲ್ಲಿ ಮೂಳೆ ಮತ್ತು ಕೀಲು ರೋಗ, ಸ್ತ್ರೀರೋಗ, ಹೃದ್ರೋಗ, ಚರ್ಮ ರೋಗ, ಕಣ್ಣಿನ ರೋಗ ಸಾಮಾನ್ಯ ರೋಗಗಳಿಗೆ ಸಂಬAಧಪಟ್ಟ ನುರಿತ ತಜ್ಞರು ಹಾಜರಿದ್ದು ನೌಕರರ ಆರೋಗ್ಯ ಪರೀಕ್ಷೆ ಮಾಡಿದರು.
ಕಾರ್ಯಕ್ರಮದಲ್ಲಿ ಕೆ.ಎಮ್.ಸಿ ಯ ವೈದ್ಯರಾದ ಡಾ ಕವೀಶ್, ನೌಕರ ಸಂಘದ ರಾಜ್ಯ ಪರಿಷತ್ ಸದಸ್ಯ ಪ್ರಕಾಶ ಶಿರಾಲಿ, ದಿ. ನ್ಯೂ ಇಂಗ್ಲಿಷ್ ಪಿಯು ಕಾಲೇಜಿನ ಪಾಂಶುಪಾಲರಾದ ಡಾ. ವಿರೇಂದ್ರ ಶಾನಬಾಗ್, ಕುಮಾರ್ ನಾಯ್ಕ, ಹೆಚ್ ಜಿ ಹೆಗಡೆ, ಪರಮೇಶ್ವರ ನಾಯ್ಕ ಮತ್ತಿತರರು ಇದ್ದರು.

ಭಾವನಾ ಟಿವಿಗಾಗಿ ಈಶ್ವರ ನಾಯ್ಕ ಭಟ್ಕಳ

error: