April 27, 2024

Bhavana Tv

Its Your Channel

ಭಟ್ಕಳದ ಏಐಟಿಎಮ್ ನಲ್ಲಿ ಕೋಡ್‌ನೆಸ್ಟ್ ಟೆಕ್ನಾಲಜೀಸ್‌ನಿಂದ ಕ್ಯಾಂಪಸ್ ಸಂದರ್ಶನ

ಭಟ್ಕಳ : ಬೆಂಗಳೂರಿನ ಕೋಡ್‌ನೆಸ್ಟ್ ಟೆಕ್ನಾಲಜೀಸ್ ಪ್ರೈವೇಟ್ ಲಿಮಿಟೆಡ್ ನಡೆಸಿದ ಕ್ಯಾಂಪಸ್ ಸಂದರ್ಶನದಲ್ಲಿ ಭಟ್ಕಳದ ಅಂಜುಮನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಅಂಡ್ ಮ್ಯಾನೇಜ್‌ಮೆಂಟ್‌ನ 18 ವಿದ್ಯಾರ್ಥಿಗಳು ಆಯ್ಕೆಯಾಗಿದ್ದಾರೆ.ಆಯ್ಕೆಯಾದ ವಿದ್ಯಾರ್ಥಿಗಳಲ್ಲಿ 15 ವಿದ್ಯಾರ್ಥಿಗಳು ಕಂಪ್ಯೂಟರ್ ಸೈನ್ಸ್ ವಿಭಾಗದವರು, 2 ವಿದ್ಯಾರ್ಥಿಗಳು ಸಿವಿಲ್ ಎಂಜಿನಿಯರಿAಗ್ ವಿಭಾಗದವರು ಮತ್ತು 1 ವಿದ್ಯಾರ್ಥಿ ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಷನ್ ಎಂಜಿನಿಯರಿAಗ್ ವಿಭಾಗದವರಾಗಿದ್ದಾರೆ.

ವಿದ್ಯಾರ್ಥಿಗಳ ಈ ಸಾಧನೆಗೆ ಪ್ರಾಂಶುಪಾಲ ಡಾ.ಫಜಲುರ್ ರಹಮಾನ್, ರೆಜಿಸ್ಟ್ರಾರ್ ಪ್ರೊ.ಜಾಹಿದ್ ಖರೂರಿ, ಪ್ಲೇಸ್ ಮೆಂಟ್ ಅಧಿಕಾರಿ ಪ್ರೊ. ಶ್ರೀಶೈಲ್ ಭಟ್ ಅಭಿನಂದಿಸಿದ್ದಾರೆ.

error: