April 27, 2024

Bhavana Tv

Its Your Channel

ಶ್ರೀ ಶೀಗೆ ಹನುಮಂತ ದೇವಸ್ಥಾನ ಇದರ ಪುನರ್ ಪ್ರತಿಷ್ಠಾನೆ ಹಾಗೂ ಬ್ರಹ್ಮಕಲಶೋತ್ಸವ ಮಾರ್ಚ 21 ರಿಂದ 23ರವರೆಗೆ

ಭಟ್ಕಳ: ದೇವಸ್ಥಾನದ ಮುಖ್ಯ ಅರ್ಚಕರಾದ ನಾಗರಾಜ ಭಟ್ ಅವರು ಭಟ್ಕಳ ತಾಲೂಕಿನ ಮುಂಡಳ್ಳಿಯ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಎಲ್ಲಾ ಸಮಾಜದ ಸಹಕಾರದಿಂದ 2010 ರಲ್ಲಿ ರಾಘವೇಶ್ವರ ಭಾರತಿ ಸ್ವಾಮೀಜಿಯವರ ಉಪಸ್ಥಿತಿಯಲ್ಲಿ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಪ್ರತಿಷ್ಠಾಪನೆ ಮಾಡಲಾಗಿತ್ತು ಅದೇ ರೀತಿ 2020 ರಲ್ಲಿ ಇದರ ಪರಿಪಾಠ ದೇವರಾದ ಶ್ರೀ ಶೀಗೆ ಹನುಮಂತ ದೇವಸ್ಥಾನದ ನಿರ್ಮಾಣ ಮಾಡುವ ಬಗ್ಗೆ ಸಂಕಲ್ಪ ಇಟ್ಟುಕೊಂಡಿದ್ದೆವು ಆದರೆ ಕೋವಿಡ್ ನಿಂದಾಗಿ 5 ವರ್ಷದ ಬಳಿಕ ದೇವರ ಆಶೀರ್ವಾದದೊಂದಿಗೆ ಎಲ್ಲರ ಸಹಾಯ ಮತ್ತು ಸಹಕಾರದಿಂದ ದೇವರ ಪುನರ್ ಪ್ರತಿಷ್ಠಾನೆ ಹಾಗೂ ಬ್ರಹ್ಮಕಲಶೋತ್ಸವ ನಡೆಯುತ್ತಿದೆ . ಮಾರ್ಚ್ 22 ರಂದು ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಸಂಸ್ಥಾನ ಶ್ರೀ ಜ್ಞಾನೇಶ್ವರಿ ಪೀಠದ ಪರಮಪೂಜ ಶ್ರೀ ಕ್ಷೇತ್ರ ಕರ್ಕಿಯ ಶ್ರೀ ಸಚ್ಚಿದಾನಂದ ಜ್ಞಾನೇಶ್ವರಿ ಭಾರತೀ ಮಹಾಸ್ವಾಮಿಗಳ ಅಮೃತ ಹಸ್ತದಿಂದ ದೇವಸ್ಥಾನದ ಪುನರ್ ಪ್ರತಿಷ್ಠಾಪನೆ ಹಾಗೂ ಮಹಾ ಅನ್ನ ಸಂತರ್ಪಣೆ ನಡೆಯಲಿದೆ ಅದೇ ರೀತಿ ರಾತ್ರಿ 8 ಗಂಟೆಗೆ ಸ್ಥಳೀಯ ಮಹಿಳೆಯರಿಂದ ಭಜನಾ ಕುಣಿತ ನೆರವೇರಲಿದೆ. ಹಾಗೂ ಮಾರ್ಚ್ 23ರಂದು ರಾಮ ಕ್ಷೇತ್ರ ಮಹಾಸಂಸ್ಥಾನ ನಿತ್ಯಾನಂದ ನಗರ ಧರ್ಮಸ್ಥಳ ಇದರ ಮಠಾಧೀಶರಾದ ಶ್ರೀ ಬೃಹ್ಮಾನಂದ ಸರಸ್ವತಿ ಸ್ವಾಮೀಜಿಯವರ ದಿವ್ಯ ಸಾನ್ನಿಧ್ಯದಲ್ಲಿ ಬೃಹ್ಮಕಲಶೋತ್ಸವ ನೆರವೇರಿಸಲಾಗುವುದು ಹಾಗೂ ಮದ್ಯಾಹ್ನ ಮಹಾ ಅನ್ನಸಂತರ್ಪಣೆ ಹಾಗೂ ರಾತ್ರಿ 8 ಗಂಟೆಗೆ ಸ್ಥಳೀಯ ಪುರುಷರಿಂದ ಭಜನಾ ಕುಣಿತ ನೆರವೇರಲಿದ್ದು. ಈ ಎಲ್ಲಾ ಕಾರ್ಯಕ್ರಮಕ್ಕೆ ತಾಲೂಕಿನ ಭಕ್ತರೂ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ದೇವರ ಕೃಪೆಗೆ ಪಾತ್ರರಾಗಬೇಕು ಎಂದರು. ಈ ಸಂದರ್ಭದಲ್ಲಿ ದೇವಸ್ಥಾನ ಅಧ್ಯಕ್ಷರಾದ ಸಣ್ಖುಷ್ ದೇವಾಡಿಗೆ , ದಿನೇಶ ನಾಯ್ಕ, ವಿನೋದ ಮೊಗೇರ್, ಗೋಪಾಲ ನಾಯ್ಕ ಮುಂತಾದವರು ಉಪಸ್ಥಿತರಿದ್ದರು.

error: