May 3, 2024

Bhavana Tv

Its Your Channel

ಮತದಾನ ಜಾಗೃತಿ ಕಾರ್ಯಕ್ರಮ

ಭಟ್ಕಳ: ಭಾರತ ಚುನಾವಣಾ ಆಯೋಗದ ಆಶಯದಂತೆ ಪ್ರತಿಶತ ಮತದಾನ ಪ್ರಜಾಪ್ರಭುತ್ವದ ಸೌಂದರ್ಯವಾಗಿದ್ದು ಯುವ ಸಮೂಹದ ಸಕ್ರೀಯ ತೊಡಗಿಸಿಕೊಳ್ಳುವಿಕೆಯಿಂದ ಮತದಾನದಪ್ರಮುಖ ಹೆಚ್ಚಿಸಿ ಕೊಳ್ಳಬಹುದು ಎಂದು ತಾಲೂಕ ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿವಿ.ಡಿ.ಮೊಗೇರರವರು ತಿಳಿಸಿದರು.
ಅವರು ಇಂದು ಭಟ್ಕಳ ಪ್ರಥಮ ದರ್ಜೆ ಕಾಲೇಜಿನಲ್ಲಿ ಜರುಗಿದ ಮತದಾನ ಜಾಗೃತಿ ಕಾರ್ಯಕ್ರಮನಿಮಿತ್ತ ಜನ ಜಾಗೃತಿ ಸಭೆ ಹಾಗೂ ಮಾನವ ಸರಪಣಿ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು.

ಕಾರ್ಪೋರೇಟ್ ವಲಯದಲ್ಲಿ ಮತದಾನದ ಕುರಿತು ಇರುವ ಅಸಡ್ಡೆ, ಅದು ಇಂದಿನ ಯುವ ಸಮೂಹದತ್ತಲೂ ಆಕರ್ಷಿಸುತ್ತಿದ್ದು, ಮತದಾನಕ್ಕೆ ಗೈರಾಗಿ ಆದಿನ ಮೋಜು ಮಸ್ತಿಯಲ್ಲಿತೊಡಗಿಸಿಕೊಳ್ಳುವುದನ್ನೇ ಫ್ಯಾಶನ್ ಎಂದು ಪರಿಗಣಿಸುವ ವಿದ್ಯಾವಂತ ವರ್ಗದಿಂದಲೇ ಪ್ರಜಾಪ್ರಭುತ್ವ ವ್ಯವಸ್ಥೆಗೆ ಕಳಂಕ ತಗಲುತ್ತಿರುವುದು ಕಳವಳಕಾರಿ ಎಂದು ನುಡಿದರಲ್ಲದೆ ಈ ಕಾಲೇಜಿನವಿದ್ಯಾರ್ಥಿಗಳು ತಮ್ಮ ಪರಿಸರದಲ್ಲಿ ಮತದಾನದಿಂದ ಹೊರಗುಳಿದವರನ್ನು ಗುರುತಿಸಿ ಅವರನ್ನ ಮತಗಟ್ಟೆಗೆ ಕರೆತರುವ ವ್ಯವಸ್ಥೆಗೆ ಮುಂದಾಗಬೇಕೆAದು ಕರೆ ನೀಡಿದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಕಾಲೇಜಿನ ಪ್ರಾಚಾರ್ಯರಾದ ನಾಗೇಶ ಶೆಟ್ಟಿಯವರು ಪಕ್ಷಾತೀತ, ಧರ್ಮಾತೀತ, ವರ್ಣತೀತ ಪ್ರಜಾಪ್ರಭುತ್ವದ ಸುಂದರ ಕಲ್ಪನೆ ಸಕಾರಗೊಳ್ಳಲು ತಪ್ಪದೇ ಮತದಾನ ಮಾಡುವುದು ಅವಶ್ಯ ಎಂದು ಅಭಿಪ್ರಾಯಪಟ್ಟರು.

ವೇದಿಕೆಯಲ್ಲಿ ತಾಲೂಕ ಪಂಚಾಯತ ಸಹಾಯಕ ಲೆಕ್ಕಾಧಿಕಾರಿ ರಾಜೇಶ ಮಹಾಲೆ, ವ್ಯವಸ್ಥಾಪಕಿ ಲತಾ ನಾಯ್ಕ, ವಿದ್ಯಾರ್ಥಿ ಪ್ರತಿನಿಧಿ ಮದನ ಉಪಸ್ಥಿತರಿದ್ದರು.

ಉಪನ್ಯಾಸಕಿ ಜ್ಯೋತಿ ಗೌಡ ಪ್ರತಿಜ್ಞಾ ವಿದಿ üಬೋಧಿಸಿದರು. ಇನ್ನೋರ್ವ ಉಪನ್ಯಾಸಕಿ ಚಂದ್ರಾವತಿ ಮೊಗೇರ ಸ್ವಾಗತಿಸಿ ಕಾರ್ಯಕ್ರಮ ನಿರ್ವಹಿಸಿ ವಂದಿಸಿದರು.

error: