October 22, 2024

Bhavana Tv

Its Your Channel

ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಟ್ಯಾಂಕರ್: ಪ್ರಾಣಾಪಾಯದಿಂದ ಪಾರಾದ ಚಾಲಕ

ಭಟ್ಕಳ: ಕ್ಯಾಶು ಆಯಿಲ್ ತುಂಬಿದ ಟ್ಯಾಂಕರವೊ0ದು ಮುಂದೆ ಹೋಗುತ್ತಿದ್ದ ಬಸ್ ತಪ್ಪಿಸಲು ಹೋಗಿ ನಿಯಂತ್ರಣ ತಪ್ಪಿ ಪಲ್ಟಿಯಾದ ಪರಿಣಾಮ ಚಾಲಕ ಪ್ರಾಣಾಪಾಯದಿಂದ ಪಾರಾಗಿರುವ ಘಟನೆ ಮೂಢ ಭಟ್ಕಳ ಬೈಪಾಸ್ ಸಮೀಪ ನಡೆದಿದೆ.

ಪ್ರಾಣಾಪಾಯದಿಂದ ಪಾರಾಗಿರುವ ಲಾರಿ ಚಾಲಕನನ್ನು ರಾಜಸ್ಥಾನ ಮೂಲದ ಮದನ ಎಂದು ತಿಳಿದು ಬಂದಿದೆ. ಈತ ಮಂಗಳೂರಿನಿAದ ಕ್ಯಾಶು ಆಯಿಲ್ ತುಂಬಿದ ಟ್ಯಾಂಕರ ತೆಗೆದುಕೊಂಡು ಹರಿಯಾಣ ಕಡೆಗೆ ಹೋಗುತ್ತಿರುವ ವೇಳೆ ಈ ಅಪಘಾತ ಸಂಭವಿಸಿದೆ. ಈತ ಪುರವರ್ಗ ಕಡೆಯಿಂದ ಮೂಢ ಭಟ್ಕಳ ಬೈಪಾಸ್ ಕಡೆಗೆ ಬರುತ್ತಿದ್ದ ವೇಳೆಗೆ ಮುಂಬದಿಯಲ್ಲಿ ಹೋಗುತ್ತಿದ್ದ ಬಸ್ ಚಾಲಕ ರಾಷ್ಟ್ರೀಯ ಹೆದ್ದಾರಿಗೆ ಹಾಕಲಾಗಿದ್ದ ಹಂಪ್ ನೋಡಿ ತಕ್ಷಣ ಬ್ರೇಕ್ ಹಾಕಿದ್ದಾನೆ. ಇದನ್ನು ಗಮನಿಸಿದ ಟ್ಯಾಂಕರ ಚಾಲಕ ತನ್ನ ಸಮಯ ಪ್ರಜ್ಞೆಯಿಂದ ಬಸ್ ತಪ್ಪಿಸಲು ಹೋಗಿ ತನ್ನ ಎಡ ಭಾಗಕ್ಕೆ ತೆಗೆದುಕೊಂಡಿದ್ದಾನೆ. ಆದರೆ ಟ್ಯಾಂಕರ ನಿಯಂತ್ರಣ ತಪ್ಪಿ ಅಲ್ಲೇ ಇದ್ದ ಸಣ್ಣ ಪ್ರಪಾತಕ್ಕೆ ಬಿದ್ದಿದ್ದೆ. ಇದರಿಂದಾಗಿ ಕ್ಯಾಶು ಆಯಿಲ್ ತುಂಬಿದ ಟ್ಯಾಂಕರ ರಂದ್ರವಾಗಿ ಸೋರಿಕೆಯಾಗಿದೆ. ಈ ಅಪಘಾತದಲ್ಲಿ ಚಾಲಕ ಸಣ್ಣ ಪುಟ್ಟ ಗಾಯಗಳಿಂದ ಪ್ರಾಣಾಪಾಯದಿಂದ ಪಾರಾಗಿದ್ದಾನೆ.
ನಂತರ ಅಗ್ನಿಶಾಮಕ ದಳದ ಸಿಬ್ಬಂದಿಗಳು ಪಲ್ಟಿಯಾಗಿದ್ದ ಟ್ಯಾಂಕರನ ಡೀಸೆಲ್ ತೆಗದು ಯಾವುದೇ ಅನಾಹುತ ನಡೆಯತಂತೆ ಮುಂಜಾಗ್ರತೆ ವಹಿಸಿದ್ದಾರೆ. ಅಪಘಾತಕ್ಕೆ ಐ.ಆರ್.ಬಿ ಕಂಪನಿಯ ಅವೈಜ್ಞಾನಿಕ ಕಾಮಗಾರಿಯೇ ಕಾರಣ ಎಂದು ಸ್ಥಳದಲ್ಲಿದ್ದ ಸಾರ್ವಜನಿಕರು ಆರೋಪಿಸಿದ್ದಾರೆ..
ಸ್ಥಳಕ್ಕೆ ಭಟ್ಕಳ ನಗರ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.ಭಟ್ಕಳ: ಕ್ಯಾಶು ಆಯಿಲ್ ತುಂಬಿದ ಟ್ಯಾಂಕರವೊAದು ಮುಂದೆ ಹೋಗುತ್ತಿದ್ದ ಬಸ್ ತಪ್ಪಿಸಲು ಹೋಗಿ ನಿಯಂತ್ರಣ ತಪ್ಪಿ ಪಲ್ಟಿಯಾದ ಪರಿಣಾಮ ಚಾಲಕ ಪ್ರಾಣಾಪಾಯದಿಂದ ಪಾರಾಗಿರುವ ಘಟನೆ ಮೂಢ ಭಟ್ಕಳ ಬೈಪಾಸ್ ಸಮೀಪ ನಡೆದಿದೆ.

ಪ್ರಾಣಾಪಾಯದಿಂದ ಪಾರಾಗಿರುವ ಲಾರಿ ಚಾಲಕನನ್ನು ರಾಜಸ್ಥಾನ ಮೂಲದ ಮದನ ಎಂದು ತಿಳಿದು ಬಂದಿದೆ. ಈತ ಮಂಗಳೂರಿನಿAದ ಕ್ಯಾಶು ಆಯಿಲ್ ತುಂಬಿದ ಟ್ಯಾಂಕರ ತೆಗೆದುಕೊಂಡು ಹರಿಯಾಣ ಕಡೆಗೆ ಹೋಗುತ್ತಿರುವ ವೇಳೆ ಈ ಅಪಘಾತ ಸಂಭವಿಸಿದೆ. ಈತ ಪುರವರ್ಗ ಕಡೆಯಿಂದ ಮೂಢ ಭಟ್ಕಳ ಬೈಪಾಸ್ ಕಡೆಗೆ ಬರುತ್ತಿದ್ದ ವೇಳೆಗೆ ಮುಂಬದಿಯಲ್ಲಿ ಹೋಗುತ್ತಿದ್ದ ಬಸ್ ಚಾಲಕ ರಾಷ್ಟ್ರೀಯ ಹೆದ್ದಾರಿಗೆ ಹಾಕಲಾಗಿದ್ದ ಹಂಪ್ ನೋಡಿ ತಕ್ಷಣ ಬ್ರೇಕ್ ಹಾಕಿದ್ದಾನೆ. ಇದನ್ನು ಗಮನಿಸಿದ ಟ್ಯಾಂಕರ ಚಾಲಕ ತನ್ನ ಸಮಯ ಪ್ರಜ್ಞೆಯಿಂದ ಬಸ್ ತಪ್ಪಿಸಲು ಹೋಗಿ ತನ್ನ ಎಡ ಭಾಗಕ್ಕೆ ತೆಗೆದುಕೊಂಡಿದ್ದಾನೆ. ಆದರೆ ಟ್ಯಾಂಕರ ನಿಯಂತ್ರಣ ತಪ್ಪಿ ಅಲ್ಲೇ ಇದ್ದ ಸಣ್ಣ ಪ್ರಪಾತಕ್ಕೆ ಬಿದ್ದಿದ್ದೆ. ಇದರಿಂದಾಗಿ ಕ್ಯಾಶು ಆಯಿಲ್ ತುಂಬಿದ ಟ್ಯಾಂಕರ ರಂದ್ರವಾಗಿ ಸೋರಿಕೆಯಾಗಿದೆ. ಈ ಅಪಘಾತದಲ್ಲಿ ಚಾಲಕ ಸಣ್ಣ ಪುಟ್ಟ ಗಾಯಗಳಿಂದ ಪ್ರಾಣಾಪಾಯದಿಂದ ಪಾರಾಗಿದ್ದಾನೆ.
ನಂತರ ಅಗ್ನಿಶಾಮಕ ದಳದ ಸಿಬ್ಬಂದಿಗಳು ಪಲ್ಟಿಯಾಗಿದ್ದ ಟ್ಯಾಂಕರನ ಡೀಸೆಲ್ ತೆಗದು ಯಾವುದೇ ಅನಾಹುತ ನಡೆಯತಂತೆ ಮುಂಜಾಗ್ರತೆ ವಹಿಸಿದ್ದಾರೆ. ಅಪಘಾತಕ್ಕೆ ಐ.ಆರ್.ಬಿ ಕಂಪನಿಯ ಅವೈಜ್ಞಾನಿಕ ಕಾಮಗಾರಿಯೇ ಕಾರಣ ಎಂದು ಸ್ಥಳದಲ್ಲಿದ್ದ ಸಾರ್ವಜನಿಕರು ಆರೋಪಿಸಿದ್ದಾರೆ..
ಸ್ಥಳಕ್ಕೆ ಭಟ್ಕಳ ನಗರ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

error: