May 8, 2024

Bhavana Tv

Its Your Channel

ವೀರವನಿತೆ ಅಹಲ್ಯಾಬಾಯಿ ಹೋಳ್ಕರ್ ಜನ್ಮದಿನಾಚರಣೆ

ವರದಿ:ವೇಣುಗೋಪಾಲ ಮದ್ಗುಣಿ

ಗೋಕರ್ಣ : ಧರ್ಮಮಯೀ ಮಾತೆ ಅಹಲ್ಯಾ ಬಾಯಿ ಹೋಳ್ಕರವರು ಧಾರ್ಮಿಕ ಕ್ಷೇತ್ರಗಳನ್ನು ಉದ್ಧಾರಮಾಡುವ, ಧರ್ಮವನ್ನು ಉಳಿಸುವ ಬೆಳೆಸುವ ಹಾಗೂ ಧಾರ್ಮಿಕ ಕಾರ್ಯಕ್ಕೆ ತನ್ನ ಜೀವನವನ್ನು ಮುಡಿಪಾಗಿಟ್ಟು ವಿಶ್ವಮಾನ್ಯೆಯಾಗಿದ್ಧಾಳೆ. ಆಕೆಯ ಬದುಕು ಎಲ್ಲರಿಗೂ ಮಾದರಿಯಾಗಿದೆ ಎಂದು ವಿಷ್ಣುಗುಪ್ತ ವಿಶ್ವವಿದ್ಯಾಪೀಠದ ವಿದ್ಯಾವಿಶ್ವ ಸಭಾಂಗಣದಲ್ಲಿ ವೀರವನಿತೆ ಅಹಲ್ಯಾಭಾಯಿ ಹೋಳ್ಕರ್ ಜನ್ಮದಿನಾಚರಣೆಯಲ್ಲಿ ಗುರುಕುಲದ ಮಕ್ಕಳನ್ನುದ್ದೇಶಿಸಿ ಡಾ. ರವಿ ಯವರು ಮಾತನಾಡುತ್ತಾ
ಧರ್ಮಪಾಲನೆಗೋಸ್ಕರ ತನ್ನ ಮಗನು ಮಾಡಿ ತಪ್ಪನ್ನೂ ಕ್ಷಮಿಸದೇ ಶಿಕ್ಷೆ ನೀಡಲು ಮುಂದಾದ ಆದರ್ಶ ಮಾತೆ ಎಂದು ಗುರುಕುಲದ ಮಕ್ಕಳಿಗೆ ಅಹಲ್ಯಾಬಾಯಿ ಹೋಳ್ಕರ್ ಜೀವನವನ್ನು ಪರಿಚಯಿಸಿದರು.

ವಿದ್ಯಾರ್ಥಿನಿ ಶ್ರೀಜ ಉದನೇಶ್ ಸಂಗಡಿಗರು ಆಹಲ್ಯಾ ಬಾಯಿ ಹೋಳ್ಕರ್ ರವರ ಜೀವನದಲ್ಲಾದ ಪ್ರಮುಖ ಘಟನೆಯೊಂದನ್ನು ಆಧರಿಸಿ ‘ನ್ಯಾಯದ ಮುಂದೆ ಎಲ್ಲರೂ ಸಮಾನರು ‘ಎಂಬ ಸಂದೇಶವನ್ನು ಸಾರುವ ನಾಟಕವು ಮಕ್ಕಳ ಮನಸ್ಸಿನಲ್ಲಿ ಬಹುಕಾಲ ಅಚ್ಚಳಿಯದೇ ಉಳಿಯುವಂತೆ ಪ್ರದರ್ಶನಗೊಂಡಿತು.
ಏನನ್ನು ಕೇಳದೆ ಎಲ್ಲವನ್ನು ಕೊಡುವ ಗೋಮಾತೆ ಹಾಡೊಂದನ್ನು ಧೇನು ಸಂಗಡಿಗರು ಸುಶ್ರಾವ್ಯವಾಗಿ ಹಾಡಿದರು. ಇದಕ್ಕೂ ಮೊದಲು ಪಾರಂಪರಿಕ ವಿಭಾಗದ ವರಿಷ್ಠಾಚಾರ್ಯರಾದ ವಿದ್ವಾನ್ ಸತ್ಯನಾರಾಯಣ ಶರ್ಮಾ, ಸಾರ್ವಭೌಮ ಗುರುಕುಲದ ಪ್ರಾಚಾರ್ಯರಾದ ಮಹೇಶ ಹೆಗಡೆ,ಪಾರಂಪರಿಕ ಗುರುಕುಲದ ಪ್ರಾಚಾರ್ಯರಾದ ವಿದ್ವಾನ್ ನರಸಿಂಹ ಭಟ್ ಮತ್ತು ವೈದ್ಯರಾದ ಡಾ. ರವಿಯವರು ದೀಪ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಗುರುಕುಲದ ವಿದ್ಯಾರ್ಥಿಗಳಾದ ಆದಿತ್ಯ ಪ್ರಾರ್ಥನೆಯನ್ನು, ಅವ್ಯಯ ಸ್ವಾಗತವನ್ನು, ಶ್ರೇಷ್ಠ ಗುಡಿಗಾರ ಧನ್ಯವಾದ ಸಮರ್ಪಣೆಯನ್ನು ಮಾಡಿದರು. ಸೌಭಾಗ್ಯ ಲಕ್ಷ್ಮಿ ಬಿರಾದರ ಕಾರ್ಯಕ್ರಮವನ್ನು ನಿರೂಪಣೆ ಗೈದರು. ಒಟ್ಟಿನಲ್ಲಿ ವೀರವನಿತೆ ಎನಿಸಿ, ಇತಿಹಾಸದ ಪುಟಗಳಲ್ಲಿ ಮಾತ್ರ ಕಾಣಸಿಗುತ್ತಿದ್ದ ಅಹಲ್ಯಾ ಬಾಯಿ ಹೋಳ್ಕರ್ ಇಂದು ಮಕ್ಕಳ ಚಿತ್ತಭಿತ್ತಿಯಲ್ಲಿಯೂ ಉಳಿಯುವಂತೆ ಆಚರಿಸಲಾಯಿತು.


error: