December 22, 2024

Bhavana Tv

Its Your Channel

‘ಹಿರೇಗುತ್ತಿಯಲ್ಲಿ ದಿ. ರಮಾಕಾಂತ ನಾಯಕ ಸ್ಮರಣಾರ್ಥ ವೀರಾಂಜನೇಯ ಯಕ್ಷಗಾನ ಮತ್ತು ಸನ್ಮಾನ ಕಾರ್ಯಕ್ರಮ’

ಗೋಕರ್ಣ: ಹಿರೇಗುತ್ತಿಯ ಲಲಿತ ಮಂಟಪದಲ್ಲಿ ದೀಪಾವಳಿ ಹಬ್ಬದ ಪ್ರಯುಕ್ತ ದಿ. ರಮಾಕಾಂತ ನಾಯಕ (ಕಂಡಕ್ಟರ್ ಕಾಂತಣ್ಣ ) ರ 25ನೇ ವರ್ಷದ ಸ್ಮರಣಾರ್ಥ “ವೀರಾಂಜನೇಯ ಯಕ್ಷಗಾನ’ ಮತ್ತು ಸನ್ಮಾನ ಕಾರ್ಯಕ್ರಮ ನಡೆಯಿತು
ಪ್ರಸಿದ್ಧ ಯಕ್ಷಗಾನ ಕಲಾ ವಿದರಾದಂತಹ ಗಣಪತಿ ( ಗಂಪು) ಗೋವಿಂದ ನಾಯ್ಕ ಕುಮಟಾ. ಹಾಗೂ ಶಂಕರ ಹೆಗಡೆ ನೀಲಕೋಡು ರವರನ್ನು ಗೌರವಿಸಿ ಸನ್ಮಾನಿಸಲಾಯಿತು. ನಾಗರಾಜ ನಾಯಕ ತೊರ್ಕೆ ಅಧ್ಯಕ್ಷರು ಬೆಳಕು ಗ್ರಾಮೀಣ ಅಭಿವೃದ್ಧಿ ಟ್ರಸ್ಟ್ ರವರು ಮಾತನಾಡಿ “ಹಿರೇಗುತ್ತಿ ಊರು ಯಕ್ಷಗಾನ ಕಲೆಯ ಗಂಡು ಮೆಟ್ಟಿದ ನೆಲೆಯಾಗಿದೆ.ಹಿರೇಗುತ್ತಿ ನನ್ನ ಅಜ್ಜಿಮನೆ ಊರಾಗಿದ್ದು ಎಲ್ಲ ಹಿರಿಯರನ್ನು ಹತ್ತಿರದಿಂದ ಬಲ್ಲೆ. ದಿವಂಗತ ಕಾಂತಣ್ಣರವರು ತಮ್ಮ ಜೀವಿತಾವಧಿಯಲ್ಲಿ ಪ್ರತಿವರ್ಷ ದೀಪಾವಳಿ ಹಬ್ಬದ ದಿನದಂದು ತಾಳ ಮದ್ದಳೆ, ಯಕ್ಷಗಾನ ಕಾರ್ಯಕ್ರಮ ನಡೆಸಿಕೊಂಡು ಬಂದಿದ್ದರು ಅದನ್ನು ಅವರ ಮಕ್ಕಳು ಮುಂದುವರಿಸಿಕೊAಡು ಯಕ್ಷಗಾನಕ್ಕೆ ಪ್ರೋತ್ಸಾಹ ನೀಡುತ್ತಿರುವುದು ಶ್ಲಾಘನೀಯ ಕಾರ್ಯ ಎಂದರು.

ಸನ್ಮಾನ ಕಾರ್ಯಕ್ರಮದ ವೇದಿಕೆಯಲ್ಲಿ ಎನ್ ಟಿ ಪ್ರಮೋದರಾವ್ ವಿಶ್ರಾಂತ ಪೊಲೀಸ್ ಅಧಿಕ್ಷರು. ಸುಶೀಲಾ ಆರ್ ನಾಯಕ ನಿವೃತ್ತ ಶಿಕ್ಷಕರು.ಮೋಹನ ಬಿ ಕೆರೆಮನೆ ನಿವೃತ್ತ ಶಿಕ್ಷಕರು. ನಾರಾಯಣ ನಾಯಕ ಜಿಲ್ಲಾ ಅಧ್ಯಕ್ಷರು ಶಿಕ್ಷಕರ ಸಂಘ ಶಿರಸಿ ಶೈಕ್ಷಣಿಕ ಜಿಲ್ಲೆ. ಸದಾನಂದ ಕವರಿ. ಮಂಜುನಾಥ ನಾಯಕ ಅಗ್ರಗೋಣ. ಆನಂದ ಬಿ ನಾಯಕ. ಚಂದ್ರಹಾಸ (ಪಾಪು) ನಾಯಕ. ಮಹೇಶ ಆರ್ ನಾಯಕ. ಕುಮಾರಿ ಶ್ರೀಶಾ ಮಹೇಶ ನಾಯಕ ಉಪಸ್ಥಿತರಿದ್ದರು.

ಸನ್ಮಾನ ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕ ನುಡಿಗಳನ್ನಾಡಿದ ಎನ್ ರಾಮು ಹಿರೇಗುತ್ತಿ “ಕಾಂತಣ್ಣನವರು ಕಲಾ ಪೋಷಕರಾಗಿದ್ದರು ಯಾವುದೇ ಕೆಲಸವನ್ನು ನಿಭಾಯಿಸುವ ಎದೆಗಾರಿಕೆ ಗಟ್ಟಿತನ ಇರುವ ವ್ಯಕ್ತಿತ್ವವುಳ್ಳ ಅದ್ಭುತ ವ್ಯಕ್ತಿಯಾಗಿದ್ದರು. ಸಾಧನೆ ಪಥದಲ್ಲಿ ಮುನ್ನಡೆದವರು ಅವರ ಹೆಸರು ಇಂದಿಗೂ ಹಿರೇಗುತ್ತಿ ಇತಿಹಾಸದಲ್ಲಿ ಚಿರಸ್ಥಾಯಿಯಾಗಿದೆ” ಎಂದರು. ಪ್ರಶಾಂತ ನಾಯಕ ಸರ್ವರನ್ನು ಸ್ವಾಗತಿಸಿ ಸನ್ಮಾನಿತರನ್ನು ಪರಿಚಯಿಸಿದರು.

ನಂತರ ಶಂಕರ ಭಟ್ ಬ್ರಹ್ಮೂರು ಭಾಗವತಿಕೆಯಲ್ಲಿ ನಡೆದ ವೀರಾಂಜನೇಯ ಯಕ್ಷಗಾನದಲ್ಲಿ ಶ್ರೀರಾಮನಾಗಿ ಶ್ರೀ ಕೃಷ್ಣಯಾಜಿ ಬಳ್ಕೂರು. ಹನುಮಂತ ವೇಷದಲ್ಲಿ ಗಣಪತಿ ನಾಯ್ಕ ಕುಮಟಾ. ಸೀತೆಯ ಪಾತ್ರದಲ್ಲಿ ಶಂಕರ ಹೆಗಡೆ ನೀಲಕೋಡು.ಇತರ ಪಾತ್ರದಲ್ಲಿ ನಾಗರಾಜ ಕುಂಕಿಪಾಲ. ಮೋಹನ ನಾಯ್ಕ ಕೂಜಳ್ಳಿ. ಮೋಹನ ನಾಯ್ಕ ಬಡಾಳ ಬಾಲ ಕಲಾವಿದರಾದ ಸಂಪನ್,ದೀಪ್ತಿ,ಸೃಷ್ಟಿ, ಸಂಜನಾ ಎಲ್ಲಾ ಪಾತ್ರಧಾರಿಗಳು ಮನೋಜ್ಞ ಅಭಿನಯ ನೀಡಿ ಪ್ರೇಕ್ಷಕರ ಪ್ರಶಂಸೆಗೆ ಪಾತ್ರರಾದರು.
ಉಲ್ಲಾಸ ನಾಯಕ.ಚಂದ್ರಹಾಸ ನಾಯಕ. ಮಹೇಶ ನಾಯಕ.ವಿಗ್ಗು ,ಹಮ್ಮಣ್ಣ ನಾಯಕ, ರಾಮದಾಸ ನಾಯಕ, ಆಕಾಶ ಬಾಲಚಂದ್ರ ನಾಯಕ, ಶ್ರೇಯು ಸಣ್ಣಪ್ಪ ನಾಯಕ, ಸಹಕರಿಸಿದರು.
ಸುಮಾರು 500 ಜನ ಯಕ್ಷಗಾನ ವೀಕ್ಷಣೆ ಮಾಡಿದರು.

error: