ಕುಮಟಾ ತಾಲೂಕಿನ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕಡಿಮೆಯಲ್ಲಿ ಸಂಭ್ರಮದ ೭೪ನೇ ಗಣರಾಜ್ಯೋತ್ಸವ ನಡೆಯಿತು..
ಶಾಲಾ ಎಸದ ಡಿ ಎಮ್ ಸಿ ಅಧ್ಯಕ್ಷರಾದ ಸುಕ್ರು ಗೌಡ ರವರು ಧ್ವಜಾರೋಹಣ ನೆರವೇರಿಸಿ “ಗಣರಾಜ್ಯೋತ್ಸವದ ಧ್ಯೇಯೋದ್ಧೇಶಗಳನ್ನು, ಆದರ್ಶಗಳನ್ನು, ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದರು. ಶಿಕ್ಷಕ ಆನಂದ ನಾಯ್ಕ ಮಾತನಾಡಿ ಜಗತ್ತಿನ ಅತಿ ದೊಡ್ಡ ಉತ್ಕೃಷ್ಟ, ಲಿಖಿತ ಸಂವಿಧಾನವನ್ನು ಹೊಂದಿದ ದೇಶ ನಮ್ಮ ಭಾರತ.ಇಂತಹ ಅನನ್ಯ ಸಂವಿಧಾನ. ರಚಿಸಲು ಕಾರಣೀಕರ್ತರಾದ ಮಹನೀಯರನ್ನು ಸ್ಮರಿಸಿದರು.
ವಸಂತ ಗೌಡ ಮಾತನಾಡಿ “ಶಾಲೆಯ ಶೈಕ್ಷಣಿಕ ಪ್ರಗತಿ ಇವತ್ತಿನ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಪ್ರತಿಬಿಂಬವಾಗುತ್ತಿದೆ. ವಿದ್ಯಾರ್ಥಿಗಳಿಗೆ ಗುರಿಯ ಸಫಲತೆಯಲ್ಲಿ ಅವಿರತ ಪ್ರಯತ್ನ ಮುಖ್ಯ” ಎಂದರು. ವಿದ್ಯಾರ್ಥಿಗಳಿಂದ ಗ್ರಾಮ ಪಂಚಾಯಿತಿ ಹನೇಹಳ್ಳಿಯವರೆಗೆ ಪಥಸಂಚಲನ ನಡೆಯಿತು..ನಂತರ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು
ಪಿರಾಮಿಡ್ ರಚನೆ ,ಡಾನ್ಸ್, ದೇಶಭಕ್ತಿಗೀತೆ ,ಭಾಷಣ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದ ವೇದಿಕೆಯಲ್ಲಿ ಮುಖ್ಯಾಧ್ಯಾಪಕಿ ವಿದ್ಯಾ ಡಿ ನಾಯಕ ಶಿಕ್ಷಕರಾದ ಉಮಾ ನಾಯ್ಕ, ಲತಾ ಗೌಡ, ದೇವಯಾನಿ ನಾಯಕ, ಹೇಮಾವತಿ ಅಂಬಿಗ, ಪಾಲಕರಾದ ಗುರುರಾಯ ನಾಯ್ಕ, ಹಳೆಯ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಕಾರ್ಯಕ್ರಮವು ನಿಸರ್ಗ ಸಂಗಡಿಗರ ಪ್ರಾರ್ಥನಾ ಗೀತೆಯೊಂದಿಗೆ ಆರಂಭವಾಯಿತು.ಮುಖ್ಯಶಿಕ್ಷಕಿ ವಿದ್ಯಾ ನಾಯಕ ಸರ್ವರನ್ನು ಸ್ವಾಗತಿಸಿದರು. ಶಿಕ್ಷಕಿ ವೈಶಾಲಿ ನಾಯಕ ಹಿರೇಗುತ್ತಿ ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕಿ ಸರಿತಾ ಆಚಾರಿ ಸರ್ವರನ್ನು ವಂದಿಸಿದರು.
ವಿದ್ಯಾರ್ಥಿಗಳಿಗೆ ಸಿಹಿ ಹಂಚಲಾಯಿತು. ವಿದ್ಯಾರ್ಥಿಗಳು ಗಣರಾಜ್ಯೋತ್ಸವ ಸವಿವನ್ನು ಅನುಭವಿಸಿದರು.
ವರದಿ ; ಎನ್.ರಾಮು ಹೀರೆಗುತ್ತಿ
More Stories
ಪಾದಾಚಾರಿಗೆ ಬಡಿದ ಕಾರು: ಸ್ಥಳದಲ್ಲೇ ಸಾವು
ಹಿರೇಗುತ್ತಿ ಹೈಸ್ಕೂಲ್ ರಾಷ್ಟçಮಟ್ಟದಲ್ಲಿ ಮಿಂಚುತಿದೆ – ಸತೀಶ ಸೈಲ್
ಆನಂದಾಶ್ರಮ ಪ್ರೌಢಶಾಲೆಯಲ್ಲಿ ಎಕ್ಕುಂಡಿ ಜನ್ಮ ಶತಮಾನೋತ್ಸವ ಆಚರಣೆ