May 3, 2024

Bhavana Tv

Its Your Channel

ಆನಂದಾಶ್ರಮ ಪ್ರೌಢಶಾಲೆಯಲ್ಲಿ ಎಕ್ಕುಂಡಿ ಜನ್ಮ ಶತಮಾನೋತ್ಸವ ಆಚರಣೆ

ಗೋಕರ್ಣದ ರೂರಲ್ ಎಜುಕೇಶನ್ ಸೊಸೈಟಿಯ ಆನಂದಾಶ್ರಮ ಪ್ರೌಢಶಾಲೆಯ ಸಭಾಭವನದಲ್ಲಿ ಕನ್ನಡ ಸಾಹಿತ್ಯ ಲೋಕದಲ್ಲಿ ಕಥನ ಕವನ ಸಾಮ್ರಾಟ ಎಂದೇ ಹೆಸರಾದ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತರಾದ ಸು ರಂ ಎಕ್ಕುಂಡಿ ಅವರ ಜನ್ಮ ಶತಮಾನೋತ್ಸವವನ್ನು ಆಚರಿಸಲಾಯಿತು.

ವಿದ್ಯಾರ್ಥಿಗಳ ಸುಮಧುರ ಕಂಠದ ಪ್ರಾರ್ಥನೆಯೊಂದಿಗೆ ಆರಂಭವಾದ ಕಾರ್ಯಕ್ರಮದಲ್ಲಿ ಮುಖ್ಯಾಧ್ಯಾಪಕರಾದ ಗಂಗಾಧರ ಭಟ್ ಅವರು ವೇದಿಕೆಯಲ್ಲಿ ಉಪಸ್ಥಿತರಿರುವ ಸರ್ವರನ್ನು ತುಂಬು ಹೃದಯದಿಂದ ಸ್ವಾಗತಿಸಿದರು. ಮೋಹನ್ ಹಬ್ಬು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಸಾಹಿತಿಗಳಾದ ಶ್ರೀಧರ್ ಬಳಗಾರ , ಹೊನ್ನಮ್ಮ ನಾಯಕ್ , ಮತ್ತು ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಆರ್ ಎಲ್ ಭಟ್ , ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿದ್ದರು. ವಿವೇಕ್ ನಾಡ್ಕಣಿ ಕಾರ್ಯದರ್ಶಿಗಳು ರೂರಲ್ ಎಜುಕೇಶನ್ ಸೊಸೈಟಿ ಇವರ ಉಪಸ್ಥಿತಿಯಲ್ಲಿ ಕಾರ್ಯಕ್ರಮ ನಡೆಯಿತು.ವೇದಿಕೆ ಕಾರ್ಯಕ್ರಮದ ಪ್ರಾರಂಭದಲ್ಲಿ ಸು.ರಂ. ಎಕ್ಕುಂಡಿ ಅವರ ಮಗನಾದ ರಂಗನಾಥ ಎಕ್ಕುಂಡಿ ತಂದೆಯವರ ಕುರಿತು ಕಿರುಪರಿಚಯ ಮಾಡಿದರು. ಭಾರತಿ ಎಕ್ಕುಂಡಿ ಅವರು ವೇದಿಕೆಯನ್ನು ಅಲಂಕರಿಸಿದ ಗಣ್ಯ ಸಾಹಿತಿಗಳನ್ನು ಸರದಿ ಸಾಲಿನಲ್ಲಿ ಪರಿಚಯಿಸುತ್ತ ಕಾರ್ಯಕ್ರಮ ಮುಂದುವರೆಸಿದರು.ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತರಾದ ಶ್ರೀಧರ್ ಬಳಗಾರ್ ಮಾತನಾಡುತ್ತಾ, ಈ ಶಾಲೆಯ ವಾರ್ಷಿಕೋತ್ಸವಕ್ಕೆ ಕನ್ನಡದ ಮಹಾನ್ ಕವಿಗಳಾದ ದರಾ ಬೇಂದ್ರೆ ಮಾಸ್ತಿ ವೆಂಕಟೇಶ್ ಅಯ್ಯಂಗಾರ್ ವಿ ಕೃ ಗೋಕಾಕ್ ಶಿವರಾಂ ಕಾರಂತ್ ಭೇಟಿ ನೀಡಿದ್ದಾರೆ ಎಂದು, ತಾಯ್ನಾಡಿನ ಸಾಹಿತಿಗಳಾದ ಗಂಗಾಧರ್ ಚಿತ್ತಾಲ್ , ಯಶವಂತ ಚಿತ್ತಾಲ್ , ಸುಂದರ್ ನಾಡ್ಕರಣಿ ಸು ರಮ್ಯಕ್ಕುಂಡಿ , ಈ ಭಾಗದ ಮಹಾನ್ ಸಾಧಕ ಕವಿಗಳನ್ನು ನೆನಪಿಸುತ್ತ ಇಲ್ಲಿನ ಪ್ರಮುಖ ಬೀದಿಗಳಿಗೆ ಈ ಮಹಾನ್ ಕವಿಗಳ ಹೆಸರಿಡಿ ಎಂದು ಸಭೆಯಲ್ಲಿ ಕೇಳಿಕೊಂಡರು. ಹೊನ್ನಮ್ಮ ನಾಯಕ್ ತಮ್ಮ ಹೈಸ್ಕೂಲ್ ಗುರುಗಳಾದ ಸುರಂ ಎಕ್ಕುಂಡಿ ಅವರನ್ನು ನೆನೆಯುತ್ತಾ ಭಾವುಕರಾಗಿ ಅವರಿನ್ನು ತನ್ನ ಸ್ಮೃತಿ ಪಟಲ ದ ಲ್ಲಿದ್ದಾರೆ ಎಂದು ಅವರ ಕವನಗಳನ್ನು ವಾಚಿಸಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಮೋಹನ್ ಹಬ್ಬು ರವರು ಸುರಂ ಎ ಕ್ಕುಂಡಿ ಅವರ ಕುರಿತು ವಿವರಿಸುತ್ತಾ ಅವರ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆದ ಬಕುಲದ ಹೂಗಳು ಕೃತಿಯ ಕವನಗಳನ್ನು ವಾಚಿಸಿ ಇದೊಂದು ಅಪರೂಪದ ಕಾರ್ಯಕ್ರಮ ಎಂದರು. ಕುಮಟಾ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ರಾಜೇಂದ್ರ ಭಟ್ ಮಾತನಾಡಿ ಇದೊಂದು ಶಿಕ್ಷಕರಿಗೆ ದೊರೆತ ಗೌರವದ ಕಾರ್ಯಕ್ರಮವಾಗಿದೆ ಈ ಸಂಸ್ಥೆಯಲ್ಲಿ ಶಿಕ್ಷಕರಾಗಿ ಮುಖ್ಯ ದ್ಯಾಪಕರಾಗಿ ಸೇವೆ ಸಲ್ಲಿಸಿದ ಸು.ರಂ.ಎಕ್ಕುAಡಿ ಅವರ ಶತಮಾನೋತ್ಸವ ಆಚರಣೆಯನ್ನು ಈ ಶಾಲೆಯಲ್ಲಿ ಏರ್ಪಡಿಸಿದ್ದು ತುಂಬಾ ಮಹತ್ವದ್ದಾಗಿದೆ ಎಂದರು. ಈ ಸಂದರ್ಭದಲ್ಲಿ ಮಾತೃ ಸಂಸ್ಥೆ ರೂರಲ್ ಎಜುಕೇಶನ್ ಸೊಸೈಟಿಯ ಸದಸ್ಯರುಗಳು, ಪದಾಧಿಕಾರಿಗಳು, ಅಧ್ಯಕ್ಷರಾದ ಆತ್ಮಾರಾಮ್ ಎಸ್.ಬಳ ವಳ್ಳಿ , ಎಕ್ಕುಂಡಿ ಕುಟುಂಬದವರು, ಊರ ನಾಗರಿಕರು, ಎಕ್ಕುಂಡಿ ವಿದ್ಯಾರ್ಥಿಗಳು ಅವರ ಮಕ್ಕಳ ಸ್ನೇಹಿತರು ಊರ ನಾಗರಿಕರು ಆನಂದಾಶ್ರಮ ಪ್ರೌಢಶಾಲೆಯ ಸಿಬ್ಬಂದಿಗಳು,ವಿದ್ಯಾರ್ಥಿಗಳು, ಉಪಸ್ಥಿತರಿದ್ದರು. ಶಾಲೆಯ ಸಹ ಶಿಕ್ಷಕರಾದ ಗಿರೀಶ್ ಹೆಬ್ಬಾರ್ ರವರು ಕಾರ್ಯಕ್ರಮ ನಿರೂಪಿಸಿದರೆ, ವಾದಿರಾಜ ಎಕ್ಕುಂಡಿ ವಂದಿಸಿದರು. ಎಕ್ಕುಂಡಿ ಕುಟುಂಬದವರು ವೇದಿಕೆಯಲ್ಲಿ ಉಪಸ್ಥಿತರಿರುವ ಸರ್ವರಿಗೂ ನೆನಪಿನ ಕಾಣಿಕೆ ನೀಡಿ ಗೌರವಿಸಿದರು. ಇದೇ ಸಂದರ್ಭದಲ್ಲಿ ಆನಂದಾಶ್ರಮ ಪ್ರೌಢಶಾಲೆಯ ಶಿಕ್ಷಕ ಸಿಬ್ಬಂದಿಗಳಿಗೂ ನೆನಪಿನ ಕಾಣಿಕೆ ನೀಡಿದರು. ಎಕ್ಕುಂಡಿ ಮಾಸ್ತರರ ಈ ಒಂದು ಶತಮಾನೋತ್ಸವ ಆಚರಣೆ ಒಂದು ಅತ್ಯಂತ ಸುಂದರ ಕಾರ್ಯಕ್ರಮವಾಗಿದ್ದು,ಈ ಭಾಗದ ಜನರ ಮೆಚ್ಚುಗೆಗೆ ಪಾತ್ರವಾಗಿದೆ.

error: