May 3, 2024

Bhavana Tv

Its Your Channel

ಗೋಕರ್ಣ ಕ್ಲಸ್ಟರ ಮಟ್ಟದ ಕಲಿಕಾ ಹಬ್ಬ

ಗೋಕರ್ಣ ಕ್ಲಸ್ಟರ ಮಟ್ಟದ ಕಲಿಕಾ ಹಬ್ಬ ದಿನಾಂಕ:12-01-2023 ಮತ್ತು 13-01- 2023 ರಂದು ಸರ್ಕಾರಿ ಪ್ರೌಢಶಾಲೆ ಬೆಲೆಗದ್ದೆಯಲ್ಲಿ ಕಲಿಕಾ ಚೇತರಿಕೆ ವರ್ಷದ ಅಡಿಯಲ್ಲಿ ‘ಕಲಿಕಾ ಹಬ್ಬ’ ಎನ್ನುವ ವಿನೂತನ ಕಾರ್ಯಕ್ರಮವನ್ನು ನಾಲ್ಕನೇ ತರಗತಿಯಿಂದ ಒಂಭತ್ತನೇ ತರಗತಿಯವರಿಗೆ ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮದ ಉದ್ಘಾಟಕರಾಗಿ ರಾಜೇಂದ್ರ ಭಟ್ಟ ಕ್ಷೇತ್ರ ಶಿಕ್ಷಣಾಧಿಕಾರಿಗಳು ಕುಮಟಾರವರು ಮಕ್ಕಳಿಗೆ ಟೋಪಿ ತೊಡಿಸುವುದರ ಮೂಲಕ ನೆರವೇರಿಸಿದರು. ಅಲ್ಲದೆ ಕಾರ್ಯಕ್ರಮದ ಆಯೋಜನೆಯ ಕುರಿತು ಮಾತನಾಡುತ್ತಾ ಇಂತಹ ಚಟುವಟಿಕೆಗಳನ್ನು ಮಕ್ಕಳು ಮಾಡುವುದರ ಮೂಲಕ ಕಲಿಕೆಯು ಅರ್ಥಪೂರ್ಣವಾಗುವುದು ಎಂದು ಅಭಿಪ್ರಾಯ ಪಟ್ಟರು. ಮುಖ್ಯ ಅತಿಥಿಗಳಾದ ರೇಖಾ ನಾಯ್ಕ ಸಮನ್ವಯಾಧಿಕಾರಿಗಳು ಬಿ.ಆರ್.ಸಿ. ಕುಮಟಾರವರು ಕಾರ್ಯಕ್ರಮ ಸಂಘಟನೆಯ ಕುರಿತು ಪಡಿಸಿದರು. ಮೆಚ್ಚುಗೆ ವ್ಯಕ್ತ ಮುಖ್ಯಾಧ್ಯಾಪಕರಾದ ಶುಭಕರಿ ನಾಯಕರವರು ಪ್ರಾಸ್ತಾವಿಕ ಮಾತನಾಡುತ್ತಾ ಕಲಿಕಾ ಹಬ್ಬದ ಉದ್ದೇಶ ಮತ್ತು ಮಹತ್ವವನ್ನು ತಿಳಿದರು.
ದಯಾನಂದ ನಾಯ್ಕ ಎಸ್.ಡಿ.ಎಮ್.ಸಿ. ಅಧ್ಯಕ್ಷರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಅತಿಥಿಗಳಾಗಿ ಪದ್ಮಾ ನಾಯ್ಕ ಗ್ರಾಪಂ, ಗೋಕರ್ಣ, ಕ್ಲಸ್ಟರನ ಇ.ಸಿ.ಒ, ಬಿ.ಆರ್.ಪಿ. ಹಾಗೂ ಸಿ.ಆರ್.ಪಿ. ಹಾಜರಿದ್ದರು. ಉದ್ಧಂಡ ಗಾಂವಕಾರ ಹಿರಿಯ ಶಿಕ್ಷಕರು ಸರ್ವರನ್ನು ಸ್ವಾಗತಿಸಿದರು. ನಿತ್ಯಾನಂದ ಭಂಡಾರಿ ವಂದಿಸಿದರು. ಸಂಜಯ ಸರಾಫ, ಜ್ಯೋತಿಪ್ರಭಾ, ಕರುಣ ನಾಯ್ಕ, ಮೋಹಿನಿಗೌಡ, ಪಿ.ಎಮ್.ಮುಕ್ರಿ, ಶ್ರೀಮತಿ ಮಮತಾ ನಾಯ್ಕ ಮತ್ತು ಶ್ರೀಮತಿ ಪಾರ್ವತಿ ಗೌಡ ಸಂಪನ್ಮೂಲ ವ್ಯಕ್ತಿಗಳಾಗಿ ಕಾರ್ ನಿರ್ವಹಿಸಿದರು. ವಿನೋದ ನಾಯಕ ಮತ್ತು ಸುಧಾಕರ ನಾಯ್ಕರವರು ಸಹಕರಿಸಿದರು. ವಿದ್ಯಾನಂದ ಆರ್ ನಾಯಕರವರು ಕಲಿಕಾ ಹಬ್ಬದ ಕಾರ್ಯಕ್ರಮ ನಿರೂಪಿಸಿದರು.

error: